April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಜೆಸಿಐ ಬೆಳ್ತಂಗಡಿಯಲ್ಲಿ ಶ್ರಾವಣ ತರಬೇತಿ ಸಪ್ತಾಹದ ಸಮಾರೋಪ ಕಾರ್ಯಕ್ರಮ

ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಒಂದು ವಾರಗಳ ಕಾಲ ನಡೆದ ಶ್ರಾವಣ ತರಬೇತಿ ಸಪ್ತಾಹದ ಸಮಾರೋಪ ಸಮಾರಂಭ ಕಾರ್ಯಕ್ರಮ ಬಳಂಜದಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ರಂಜಿತ್ ಎಚ್ ಡಿ ಯವರು ವಹಿಸಿಕೊಂಡು, ಎಲ್ಲರನ್ನು ಸ್ವಾಗತಿಸಿದರು.

ತರಬೇತಿ ಸಪ್ತಾಹದಲ್ಲಿ ತರಬೇತಿಯನ್ನು ನಡೆಸಿದ ವಲಯ ತರಬೇತುದಾರರಾದ ಶಂಕರರಾವ್ ರವರನ್ನು ಗೌರವಿಸಲಾಯಿತು ಹಾಗೂ ಹಾಗೂ ವಲಯ ತರಬೇತಿದಾರರು, ಶ್ರಾವಣ ತರಬೇತಿ ಸಪ್ತಾಹದ ಸಂಯೋಜಕರಾದ ಹೇಮಾವತಿ ಕೆ ಇವರಿಗೆ ಧನ್ಯವಾದವನ್ನು ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಜೀ ಕನ್ನಡ ನಡೆಸುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲಿ ಸ್ಪರ್ಧಿಯಾಗಿ ಆಯ್ಕೆಯಾಗಿರುವ ಘಟಕದ ಜೂನಿಯರ್ ಜೆಸಿ ಸದಸ್ಯ ಆಗಿರುವ ಜೆಜೆಸಿ ತ್ರಿಷಾರವರನ್ನು ಗೌರವಿಸಲಾಯಿತು.

ಯು ಪ್ಲಸ್ ಚಾನೆಲ್ ನಲ್ಲಿ ಉದ್ಯೋಗಿಯಾಗಿರುವ, ಸಮೀಕ್ಷಾ ಶಿರ್ಲಾಲ್ ಇವರು ಜೆಸಿ ಸಂಸ್ಥೆಗೆ ಹೊಸ ಸದಸ್ಯರಾಗಿ ಸೇರ್ಪಡೆಗೊಂಡರು. ವಲಯ ಉಪಾಧ್ಯಕ್ಷರಾದ ಶಂಕರ್ ರಾವ್ ರವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಇದೇ ಸಂದರ್ಭದಲ್ಲಿ ತೆಂಕಕಾರಂದೂರು ಗ್ರಾಮದ ರಮಾನಂದ ಪೂಜಾರಿ ಅವರ ಪುತ್ರಿ ಕೃತಿ ಹಾಗೂ ಜೆಸಿ ಸದಸ್ಯರಾಗಿರುವ ಮಧುರ ರಾಘವ್ ರವರ ಪುತ್ರಿ ಅಧಿತ್ರಿ ಯವರು ಜೆಜೆಸಿ ಸದಸ್ಯರಾಗಿ ಸೇರ್ಪಡೆಗೊಂಡರು.

ಕಾರ್ಯಕ್ರಮದಲ್ಲಿ ಘಟಕದ ಪೂರ್ವ ಅಧ್ಯಕ್ಷರುಗಳನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜೆಸಿಐ ಮಡಂತ್ಯಾರ್ ನ ಅಧ್ಯಕ್ಷರಾದ ವಿಕೇಶ್ ಮಾನ್ಯ, ವಲಯದ ನಿರ್ದೇಶಕರಾದ ಅಶೋಕ್ ಕುಮಾರ್ ಮಡಾಂತ್ಯಾರ್, ಬೆಳ್ತಂಗಡಿ ಘಟಕದ ಪೂರ್ವ ಅಧ್ಯಕ್ಷರುಗಳಾದ ಸುಭಾಷ್ ಚಂದ್ರ ಎಂ ಪಿ, ರವೀಂದ್ರ ಶೆಟ್ಟಿ ಬಳಂಜ, ಸಂತೋಷ್ ಕುಮಾರ್ ಕಾಪಿನಡ್ಕ, ವಸಂತ ಶೆಟ್ಟಿ ಶ್ರದ್ಧಾ, ಸಂತೋಷ್ ಪಿ ಕೋಟ್ಯಾನ್, ಕಿರಣ್ ಕುಮಾರ್ ಶೆಟ್ಟಿ, ಪ್ರಶಾಂತ ಲೈಲಾ, ಪ್ರಸಾದ್ ಬಿ ಉಜಿರೆ, ಜೆಸಿರೇಟ್ ಪೂರ್ವ ಅಧ್ಯಕ್ಷರಾದ ಉಮಾ ರಾವ್, ಪವಿತ್ರ ಚಿದಾನಂದ, ಅಮೃತ ಎಸ್ ಕೋಟ್ಯಾನ್, ಆಶಾ ಪ್ರಶಾಂತ್, ಉಪಾಧ್ಯಕ್ಷರುಗಳಾದ ಸುಧೀರ್ ಕೆ ಎನ್, ಶೈಲೇಶ್, ಜೆಜೆಸಿ ಅಧ್ಯಕ್ಷರಾದ ಸಮನ್ವಿತ್ ಕುಮಾರ್, ಲೇಡಿ ಜೇಸಿ ಸಂಯೋಜಕರಾದ ಶ್ರುತಿ ರಂಜಿತ್, ಜೊತೆ ಕಾರ್ಯದರ್ಶಿಯಾದ ಪ್ರಮೋದ್ ಕಕ್ಕಿಂಜೆ, ಪ್ರೀತಿ ರತಿಶ್, ಮಧುರ ರಾಘವ್, ರಕ್ಷಿತಾ ಶೆಟ್ಟಿ,ಜಿತೇಶ್, ರತ್ನಾಕರ್, ಲತೇಶ್ ಪೆರಾಜೆ, ರಕ್ಷಿತ್, ದೀಪಕ್ ಎಚ್ ಡಿ, ಜಗದೀಶ್, ಸರಿತಾ ಪ್ರವೀಣ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ವೇದಿಕೆ ಆಹ್ವಾನವನ್ನು ಪೂರ್ವ ಅಧ್ಯಕ್ಷರಾದ ಚಿದಾನಂದ ಇಡ್ಯಾ, ಜೆಸಿ ವಾಣಿಯನ್ನು ಜೆಜೆಸಿ ದೀಪ್ತಿ ಕುಲಾಲ್ ಹಾಗೂ ಕಾರ್ಯದರ್ಶಿ ಅನುದೀಪ್ ಜೈನ ರವರು ಧನ್ಯವಾದವನ್ನು ಸಲ್ಲಿಸಿದರು.

Related posts

ಮಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಪ್ರೋತ್ಸಾಹಕ ಪ್ರಶಸ್ತಿಯ ಗೌರವ

Suddi Udaya

ಮಾ.31: ಲಾಯಿಲ ಪಿಲಿಪಂಜರ ಕ್ಷೇತ್ರದಲ್ಲಿ ದೈವಗಳ ಪ್ರತಿಷ್ಠಾ ಮಹೋತ್ಸವ ಹಾಗೂ ದೈವಗಳ ನೇಮೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂ ರಾಷ್ಟ್ರ ಸ್ಥಾಪನೆಗೆ ಕರೆ

Suddi Udaya

ಎಸ್. ಡಿ. ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ರಸ್ತೆ ಸಂಚಾರ ಸುರಕ್ಷತಾ ಜಾಗೃತಿ’ ಕಾರ್ಯಕ್ರಮ

Suddi Udaya

ಕಲ್ಮಂಜ ಗ್ರಾ.ಪಂ. ವತಿಯಿಂದ ನಿಡಿಗಲ್ ಸೇತುವೆಯಲ್ಲಿ ಸಿಸಿಟಿವಿ ಅಳವಡಿಕೆ

Suddi Udaya

ಡಾ.ಸುಬ್ರಹ್ಮಣ್ಯ ಭಟ್ಟರ ದಕ್ಷಿಣ ಕನ್ನಡ ಭಾಷಾ ಸೊಗಡಿನ  ಮೂರನೇ ಕಾದಂಬರಿ “ಅಚ್ಚಣ್ಣ ಭಟ್ರು” ವನ್ನು  ಇಂದು ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಂದ ಬಿಡುಗಡೆ

Suddi Udaya
error: Content is protected !!