April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪೆರ್ಲ ಕ್ಲಸ್ಟರ್ ನ ಪ್ರತಿಭಾ ಕಾರಂಜಿ: ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅ.ಹಿ.ಪ್ರಾ. ಶಾಲೆಗೆ ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ

ಅರಸಿನಮಕ್ಕಿ: ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅರಸಿನಮಕ್ಕಿಯಲ್ಲಿ 2024-2025 ರ ಸಾಲಿನ ಪೆರ್ಲ ಕ್ಲಸ್ಟರ್ ನ ಪ್ರತಿಭಾ ಕಾರಂಜಿಯು ಸೆ.14 ರಂದು ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ವಾಮನ್ ತಾಮರ್‌ ರವರು ವಹಿಸಿಕೊಂಡಿದ್ದರು. ಗಣೇಶ್ ಭಿಡೆಯವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿ ವಿಡ್ ಪಿಂಟೊ, ಶಿಕ್ಷಕ ಪ್ರತಿನಿಧಿ ದಾಮೋದರ ಕೆ. ಆಡಳಿತ ಮಂಡಳಿಯ ಸದಸ್ಯ ಧರ್ಮರಾಜ್‌ ಅಡ್ಕಾಡಿ, ಎಸ್.ಡಿ.ಎಮ್.ಸಿ ಅಧ್ಯಕ್ಷ ಉಪೇಂದ್ರ, ಗ್ರಾಮ ಅಭಿವೃದ್ಧಿ ಅಧಿಕಾರಿಗಳಾದ ಜಯರಾಜ್, ಶಾಲಾ ಮುಖ್ಯೋಪಾಧ್ಯಾಯರಾದ ಸೀತಾರಾಮ ಗೌಡ, ಸತೀಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ವಿದ್ಯಾರ್ಥಿಗಳ ಪೋಷಕರು ಶ್ರಮದಾನದ ಮೂಲಕ ಸಹಕರಿಸಿದರು. ಹಾಗೂ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳನ್ನು ಗೌರವಿಸಿದರು. ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅರಸಿನಮಕ್ಕಿ ಯ ವಿದ್ಯಾರ್ಥಿಗಳು ಹಿರಿಯ ವಿಭಾಗದಲ್ಲಿ 7ಪ್ರಥಮ, 1 ದ್ವಿತೀಯ, 1 ತ್ರತೀಯ ಹಾಗೂ ಕಿರಿಯ ವಿಭಾಗದಲ್ಲಿ ಪ್ರಥಮ 5,ದ್ವಿತೀಯ 2, ತೃತೀಯ 1 ಬಹುಮಾನಗಳನ್ನು ಪಡೆದು ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಹಿರಿಯ ವಿಭಾಗದಲ್ಲಿ ಸತತ 3 ನೇ ಬಾರಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಕಿರಿಯ ವಿಭಾಗದಲ್ಲಿ: ಛದ್ಮವೇಷ :ಭವಿಷ್ ಪ್ರಥಮ., ಚಿತ್ರಕಲೆ: ಹನ್ಸಿತ್ ಪ್ರಥಮ, ಅಭಿನಯ ಗೀತೆ:ಅನುಷ್ಕಾ ಪ್ರಥಮ, ಪ್ಲೇ ಮಾಡೆಲಿಂಗ್: ಯೋಗಿತಾ ಪ್ರಥಮ, ಆಶುಭಾಷಣ: ತೇಜಾಕ್ಷಿ ಪ್ರಥಮ, ಭಕ್ತಿ ಗೀತೆ: ಸ್ಕಂದ ಗೋಖಲೆ ದ್ವಿತೀಯ, ದೇಶಭಕ್ತಿ ಗೀತೆ: ಶಿವಾನಿ ಜೆ ಎಸ್ ದ್ವಿತೀಯ, ಇಂಗ್ಲಿಷ್ ಕಂಠಪಾಠ: ತೇಜಾಕ್ಷಿ ತ್ರತೀಯ, ಹಿರಿಯ ವಿಭಾಗದಲ್ಲಿ: ದೇಶಭಕ್ತಿ ಗೀತೆ ಹಾಗೂ ಭಕ್ತಿ ಗೀತೆ: ಅದ್ವಿತಿ ಪ್ರಥಮ, ಚಿತ್ರ ಕಲೆ ಹಾಗೂ ಮಿಮಿಕ್ರಿ:ಚೈತೇಶ್ ಪ್ರಥಮ, ಆಶುಭಾಷಣ ಹಾಗೂ ಅಭಿನಯ ಗೀತೆ: ನಿವೇದಿತಾ ಪ್ರಥಮ, ಕೇ ಮಾಡೆಲಿಂಗ್:ಕಿರಣ್ ಪ್ರಥಮ, ಕನ್ನಡ ಕಂಠಪಾಠ:ಸಾತ್ವಿಕ್ ದ್ವಿತೀಯ, ಧಾರ್ಮಿಕ ಪಠಣ : ಹರ್ಷಿತ್ ತೃತೀಯ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.

Related posts

ಕುರಾಯ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಸ್ವಚ್ಛತಾ ಶ್ರಮದಾನ

Suddi Udaya

ಪತ್ನಿ-ಮಗಳ ಮೇಲೆ ಪತಿಯಿಂದ ಮಾರಾಣಾಂತಿಕ ಹಲ್ಲೆ: ಇಬ್ಬರು ಆಸ್ಪತ್ರೆಗೆ ದಾಖಲು: ಪೊಲೀಸರ ತನಿಖೆ

Suddi Udaya

ವೇಣೂರು: ಮೂಡುಕೋಡಿ ನಿವಾಸಿ ಪಿ. ಎಸ್. ಅಬ್ದುಲ್ ರಹಿಮಾನ್ ನಿಧನ

Suddi Udaya

ಕೊಯ್ಯೂರು ಸ.ಪ.ಪೂ. ಕಾಲೇಜಿನಲ್ಲಿ ಮಾದಕ ದ್ರವ್ಯ ಹಾಗೂ ಅಕ್ರಮ ಸಾಗಾಟ ವಿರೋಧಿ ದಿನಾಚರಣೆ

Suddi Udaya

ಲೋಕಸಭಾ ಚುನಾವಣೆ: ಬೆಳ್ತಂಗಡಿ ತಾಲೂಕಿನಲ್ಲಿ ಶೇ. 81.31 ಮತದಾನ

Suddi Udaya

ತಾಲೂಕು ಮಟ್ಟದ ಖೋ-ಖೋ ಪಂದ್ಯಾಟ: ನಡ ಕಾಲೇಜಿನ ಹುಡುಗರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!