September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವೇಣೂರು ಐಟಿಐ: ಸೋಲಾರ್ ತರಬೇತಿ ಶಿಬಿರ ಉದ್ಘಾಟನೆ

ವೇಣೂರು: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿಐಯಲ್ಲಿ ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲ , , ಬೆಂಗಳೂರು ಇವರ ಸಹಯೋಗದಲ್ಲಿ6 ದಿನಗಳ ಸೋಲಾರ್ ತರಬೇತಿ ಶಿಬಿರವು ಪ್ರಾರಂಭವಾಗಿದೆ. ಸೆಲ್ಕೋ ಸೋಲಾರ್‌ನ ಸಂಚಿತ್ ರೈ ಏರಿಯಾ ಮೆನೇಜರ್, ಸೆಲ್ಕೋ ಪ್ರೈವೇಟ್ ಲಿಮಿಟೆಡ್ ಇವರು ದೀಪ ಬೆಳಗಿಸುವುದರ ಮುಖೇನ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಕೋರಿದರು.

ಭಾರತೀಯ ವಿಕಾಸ ಟ್ರಸ್ಟ್ ಉಡುಪಿಯ ಜೀವನ್, ಪ್ರೋಗ್ರಾಮ್ ಮ್ಯಾನೇಜರ್ ಭಾರತೀಯ ವಿಕಾಸ ಟ್ರಸ್ಟ್ ಇವರು ಕಾರ್ಯಕ್ರಮದ ರೂಪರೇಷೆಗಳನ್ನು ತಿಳಿಸಿ ಸೋಲಾರ್ ವಿದ್ಯುತ್ ಉಪಕರಣಗಳ ಇಂದಿನ ಅವಶ್ಯಕತೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ಪ್ರಾಚಾರ್ಯರಾದ ವಿಶ್ವೇಶ್ವರ ಪ್ರಸಾದ್ ಇವರು ಪ್ರಸ್ತಾವಿಕ ನುಡಿಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ತರಬೇತಿ ಅಧಿಕಾರಿ ಪೀಟರ್ ಸಿಕ್ವೇರಾ ಉಪಸ್ಥಿತರಿದ್ದರು. ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಪದ್ಮ ಪ್ರಸಾದ್ ಬಿ. ಇವರು ಕಾರ್ಯಕ್ರಮ ಆಯೋಜಿಸಿ ನಿರ್ವಹಿಸಿದರು. ಕಿರಿಯ ತರಬೇತಿ ಅಧಿಕಾರಿ ನಾಗೇಶ್ ಉಡುಪ ವಂದಿಸಿದರು.

ಆರು ದಿನಗಳ ಈ ತರಬೇತಿ ಕಾರ್ಯಕ್ರಮದಲ್ಲಿ ಪ್ರಾಯೋಗಿಕ ತರಬೇತಿಯೊಂದಿಗೆ ಸೋಲಾರ್ ಲೈಟ್, ವಾಟರ್ ಹೀಟರ್ ಮುಂತಾದವುಗಳ ಅಳವಡಿಕೆ ದುರಸ್ತಿ ತರಬೇತಿ ನೀಡಲಾಗುತ್ತದೆ

Related posts

ವಲಯಮಟ್ಟದ ಪ್ರತಿಭಾ ಕಾರಂಜಿ : ಬೆಳ್ತಂಗಡಿ ಶ್ರೀ ಧ. ಮಂ. ಆಂ.ಮಾ. ಶಾಲೆಗೆ ಹಲವಾರು ಪ್ರಶಸ್ತಿ

Suddi Udaya

ದ.ಕ ಜಿಲ್ಲಾ ವೈನ್ ಮರ್ಚೆಂಟ್ ಅಸೋಸಿಯೇಷನ್ ಉಪಾಧ್ಯಕ್ಷರಾಗಿ ಬೆಳ್ತಂಗಡಿಯ ಯುವ ಉದ್ಯಮಿ ಅಭಿನಂದನ್ ಹರೀಶ್ ಕುಮಾರ್ ಆಯ್ಕೆ

Suddi Udaya

ಕಟ್ಟದಬೈಲು ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲಾಭಿವೃದ್ದಿ ಸಮಿತಿಯ ನೂತನ ಅಧ್ಯಕ್ಷರಾಗಿ ರತ್ನಾಕರ ಆಚಾರ್ಯ ಉಪಾಧ್ಯಕ್ಷರಾಗಿ ದೀಪಾ ಎಸ್ ಮೇಚೆರಿ ಆಯ್ಕೆ

Suddi Udaya

ಜೂ.12: ಧರ್ಮಸ್ಥಳದಲ್ಲಿ ವ್ಯಸನ ಮುಕ್ತರ ಸಮ್ಮಿಲನ ಮತ್ತು ಶತದಿನೋತ್ಸವ ಕಾರ್ಯಕ್ರಮ

Suddi Udaya

ಗ್ರಾಮೀಣ ಪ್ರದೇಶದಲ್ಲಿ ಹೆಚ್ಚುತ್ತಿರುವ ಕಾಡಾನೆ ಹಾವಳಿ; ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜು.21 ರಂದು ಕೆ.ಎಸ್.ಎಂ.ಸಿ.ಎ ವತಿಯಿಂದ ಬೆಳ್ತಂಗಡಿಯಲ್ಲಿ ಮೆರವಣಿಗೆ

Suddi Udaya

ಎಸ್.ಡಿ.ಎಂ ಸೆಕೆಂಡರಿ ಶಾಲೆಯಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆ: ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

Suddi Udaya
error: Content is protected !!