ಬೆಳ್ತಂಗಡಿ: ವರದಿ ಸಾಲಿನಲ್ಲಿ ಸಂಘವು ಒಟ್ಟು 679 ಸದಸ್ಯರನ್ನು ಹೊಂದಿದ್ದು,ರೂ. 17,43,500 ಪಾಲು ಬಂಡವಾಳ ಹೊಂದಿದೆ. ರೂ.5.97ಕೋಟಿ ಠೇವಣಿಯೊಂದಿಗೆ ರೂ.25 ಕೋಟಿ ವ್ಯವಹಾರ ನಡೆಸಿದೆ. ಸದಸ್ಯರಿಗೆ ಶೇ.13 ಡಿವಿಡೆಂಡ್ ನೀಡಲು ನಿರ್ಣಯಿಸಲಾಗಿದೆ ಎಂದು ಪ್ರೇರಣಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಲ್ಯಾನ್ಸಿ ಎ.ಪಿರೇರಾ ಹೇಳಿದರು.
ಅವರು ಸೆ.16 ರಂದು ಬೆಳ್ತಂಗಡಿ ಪ್ರೇರಣಾ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಳೆದ ಎಂಟು ವರ್ಷಗಳಿಂದ ನಮ್ಮ ಪ್ರೇರಣಾ ಸೌಹಾರ್ದ ಸಹಕಾರಿ ಸಂಘವು ಎಲ್ಲರ ಸಹಕಾರದಿಂದ ಉತ್ತಮ ಸಾಧನೆ ಮಾಡಿದೆ ಎಂದರು.
ಸಂಘದ ಉಪಾಧ್ಯಕ್ಷ ವಿಲ್ಸನ್ ಜೋರ್ಜ್ ಗೊನ್ಸಾಲ್ವಿಸ್, ನಿರ್ದೇಶಕರಾದ ವಿನ್ಸೆಂಟ್ ಟಿ. ಡಿಸೋಜ, ಜಾನ್ ಅರ್ವಿನ್ ಡಿ’ಸೋಜಾ, ಎಲೋಸಿಯಸ್ ಎಸ್.ಲೋಬೊ, ಜಾನ್ ಆಲ್ವಿನ್ ಪಿಂಟೊ, ಮ್ಯಾಕ್ಸಿಂ ಡಿ ಕೋಸ್ಟಾ,ಬೆನಡಿಕ್ಟ್ ವೇಗಸ್, ಕು. ತಿಯೋಫಿಲಾ ಡಿಸೋಜ, ಸ್ಟೆಲ್ಲಾ ಫ್ರಾಂಕ್,ಸೆಲಿನ್ ನೊರೋನಾ ಉಪಸ್ಥಿತರಿದ್ದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಐರಿನ್ ಡಿಸೋಜ ವಾರ್ಷಿಕ ವರದಿ ಮಂಡಿಸಿದರು. ಉಪಾಧ್ಯಕ್ಷ ವಿಲ್ಸನ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ನಿರ್ದೇಶಕ ಜಾನ್ ಅರ್ವಿನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.ಸಭೆಯಲ್ಲಿ ಲಕ್ಕಿ ಕೂಪನ್ ಡ್ರಾ ನಡೆಸಿ,ವಿಜೇತರಿಗೆ ಬಹುಮಾನ ನೀಡಲಾಯಿತು.