30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಲಾಯಿಲ ಗ್ರಾ.ಪಂ ಹಾಗೂ ನಡ ಗ್ರಾ.ಪಂ. ನಿಂದ “ಸ್ವಚತೆಯೇ ಸೇವೆ 2024” ಅಂದೋಲನದಡಿ ಬೃಹತ್ ಸ್ವಚ್ಚತಾ ಕಾರ್ಯಕ್ರಮ

ನಡ ಗ್ರಾಮದ ಗಡಾಯಿಕಲ್ಲು ಬಳಿ ಗ್ರಾಮ ಪಂಚಾಯತ್ ಲಾಯಿಲ ಮತ್ತು ಗ್ರಾಮ ಪಂಚಾಯತ್ ನಡ ವತಿಯಿಂದ “ಸ್ವಚತೆಯೇ ಸೇವೆ 2024” ಅಂದೋಲನದಡಿ ಬೃಹತ್ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಗಿದ್ದು ಸದ್ರಿ ಸ್ವಚ್ಛತಾ ಸೇವಾ ಕಾರ್ಯಕ್ರಮಕ್ಕೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಉಪಸ್ಥಿತರಿದ್ದು ಸ್ಪಚತೆಯೇ ಸೇವೆ ಯ ಧ್ಯೇಯೋದ್ದೇಶದ ಬಗ್ಗೆ ಮತ್ತು ಸ್ವಚ್ಚತಾ ಸಿಬ್ಬಂದಿಗಳಿಗೆ ಸಿಗಬೇಕಾದ ಸೌಕರ್ಯ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಯಂತಿ ಎಂ. ವಹಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಲಾಯಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಜನ ಪ್ರತಿನಿಧಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿಗಳು, ಲೆಕ್ಕ ಸಹಾಯಕರು, ತಾಲೂಕು ಸಂಯೋಜಕರಾದ ಜಯಾನಂದ, ಅರಣ್ಯ ಇಲಾಖಾ ಸಿಬ್ಬಂಧಿಗಳು, ಆಶಾ ಕಾರ್ಯಕರ್ತೆಯರು, ಸ್ವಚ್ಚತಾ ಕಾರ್ಮಿಕ ರು ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

ರಾಜ್ಯದ 5,8 ಮತ್ತು 9ನೇ ತರಗತಿ “ಬೋರ್ಡ್​” ಪರೀಕ್ಷೆಗೆ “ಸುಪ್ರೀಂ ಕೋರ್ಟ್” ತಡೆಯಾಜ್ಞೆ

Suddi Udaya

ಬೆಳ್ತಂಗಡಿ ವರ್ತಕರ ಸಂಘದಿಂದ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಪೆರ್ಲ ಬೈಪಾಡಿ ಸರಕಾರಿ ಪ್ರೌಢಶಾಲಾ ಪ್ರಾರಂಭೋತ್ಸವ

Suddi Udaya

ಮುಂಡಾಜೆ ಕಾಲೇಜಿನಲ್ಲಿ ನಶಾ ಮುಕ್ತ ಭಾರತ ಅಭಿಯಾನದಡಿ ಪ್ರತಿಜ್ಞಾವಿಧಿ ಬೋಧನೆ

Suddi Udaya

ಜ.4-5: ಬರೆಂಗಾಯ ಸ.ಉ.ಹಿ.ಪ್ರಾ. ಶಾಲಾ ಅಮೃತ ಮಹೋತ್ಸವ ಕಾರ್ಯಕ್ರಮ

Suddi Udaya

ಕನ್ಯಾಡಿ ಸ್ವಾಮೀಜಿಯವರಿಂದ ರಾಮಕೃಷ್ಣ ಭಟ್ ಚೊಕ್ಕಾಡಿಯವರಿಗೆ ಸನ್ಮಾನ

Suddi Udaya
error: Content is protected !!