ದ.ಕ.ಜಿ. ಪಂ. ಹಿರಿಯ ಪ್ರಾಥಮಿಕ ಕೊಡಿಯಾಲಬೈಲು ಶಾಲೆಯಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯ ಸಾಮಾಜಿಕ ಪರಿಶೋಧನಾ ಶಾಲಾ ಪೋಷಕರ ಸಭೆಯು ಮಾರ್ಗದರ್ಶಿ ಅಧಿಕಾರಿ ಸಮಾಜ ಕಲ್ಯಾಣ ಇಲಾಖೆ ಬೆಳ್ತಂಗಡಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಹಿರಿಯ ಗ್ರಾಮ ಸಂಪನ್ಮೂಲ ವ್ಯಕ್ತಿ ಲೀಲಾವತಿ ಎಸ್ ರವರು ಪ್ರಾಸ್ತಾವಿಕ ಮಾತನಾಡಿದರು. ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ವಿದ್ಯಾಶ್ರೀ. ಜಿ, ಶ್ರೀಮತಿ ಈಶ್ವರಿಯವರು ಅನುದಾನದ ಬಿಡುಗಡೆ, ಖರ್ಚಿನ ಪಟ್ಟಿಯನ್ನು ಸಭೆಗೆ ಮಂಡಿಸಿದರು.
ಸಭೆಯಲ್ಲಿ ಶಾಲಾ ಅನುದಾನದ, ಮೂಲಭೂತ ಸೌಕರ್ಯಗಳಾದ ಕಟ್ಟಡ ದುರಸ್ತಿ, ಶಿಕ್ಷಕರ ಕೊರತೆ ಮುಂತಾದ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಮಾರ್ಗದರ್ಶಿ ಅಧಿಕಾರಿ ಹೇಮಚಂದ್ರ, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಗ್ರಾ. ಪಂ ಅಧ್ಯಕ್ಷರು ಶ್ರೀಮತಿ ರತ್ನಾವತಿ, ಸಿ.ಆರ್.ಪಿ ಶಿಕ್ಷಣ ಇಲಾಖೆ ಪ್ರಶಾಂತ್ ಪೂಜಾರಿ, ಶಾಲಾ ಎಸ್.ಡಿ,.ಎಂ.ಸಿ ಅಧ್ಯಕ್ಷರು ರಾಘವೇಂದ್ರ ಪಟವರ್ಧನ್, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಫಿಲೋಮಿನಾ, ಶಾಲಾ ನಾಯಕ ಹಂಶಿತ್, ಹಾಗೂ ಪೋಷಕರು ಉಪಸ್ಥಿತರಿದ್ದರು.
ಸಭೆಯು ನಾಡಗೀತೆಯೊಂದಿಗೆ ಸಭೆ ಪ್ರಾರಂಭವಾಗಿ ಶಾಲಾ ಮುಖ್ಯ ಶಿಕ್ಷಕಿಯವರು ಸ್ವಾಗತಿಸಿ, ವಂದಿಸಿದರು.