31.1 C
ಪುತ್ತೂರು, ಬೆಳ್ತಂಗಡಿ
November 24, 2024
ತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ವಸ್ತ್ರ ಚಿತ್ರಕಲಾ ಉದ್ಯಮಿ ತರಬೇತಿಯ ಸಮಾರೋಪ

ಉಜಿರೆ : ಮನುಷ್ಯನಿಗೆ ವಿದ್ಯೆ ದೊಡ್ಡ ಸಂಪತ್ತು, ನಮ್ಮ ಕನಸುಗಳನ್ನು ನನಸಾಗಿಸಲು ಇರಬೇಕು ನಾವು ಕಲಿತ ವಿದ್ಯೆ ಆದರ ಜೊತೆ ಅದನ್ನು ಬಳಸುವ ಸಂಸ್ಕಾರ ಸಹ ಇದ್ದಲ್ಲಿ ಮಾತ್ರ ವಿದ್ಯೆಗೆ ಬೆಲೆ ಬರುವುದು. ನಿಮಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚು ಇದೆ ಅದರಲ್ಲಿ ತೊಡಗಿಸಿಕೊಂಡು ಅದನ್ನು ಕಲಿತು ವೃತ್ತಿಯನ್ನಾಗಿಸಿಕೊಂಡು ಬೆಳೆಯಬೇಕು ಆವಾಗ ನೀವು ಗ್ರಾಹಕರ ಹತ್ತಿರ ಹೋಗಬೇಕಾಗಿಲ್ಲ ಅವರೇ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ. ಅಧ್ಯಕ್ಷರಾದ ಪರಮ ಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ರುಡ್‌ ಸೆಟ್‌ ಸಂಸ್ಥೆಯಲ್ಲಿ ಅತ್ಯುತ್ತಮವಾದ ಸೌಲಭ್ಯಗಳೊಂದಿಗೆ ತರಬೇತಿ ನೀಡುತ್ತಿರುವುದು ಬಹಳ ಸಂತೋಷ. ನಮಗೆಲ್ಲ ಹೆಮ್ಮೆ. ಈ ವಿದ್ಯೆ ಯಾವುದೇ ಕಾರಣಕ್ಕೂ ಬಿಡಬೇಡಿ. ವ್ಯವಹಾರದಲ್ಲಿ ಸ್ಪರ್ಧೆ ಇದ್ದಾಗಲೂ ನೈತಿಕೆತೆಯನ್ನು ಬಿಟ್ಟು ವ್ಯವಹಾರ ಮಾಡಬೇಡಿ. ನಮ್ಮ ಕನಸನ್ನು ನನಸು ಮಾಡಲು ಕಷ್ಟಪಡಲೇ ಬೇಕು. ವ್ಯವಹಾರವನ್ನು ಹಂತ ಹಂತವಾಗಿ ಆರಂಭಿಸಿ, ನಾನು ಎನ್ನುವ ಭಾವನೆಕ್ಕಿಂತ ನಾವು ಎನ್ನುವ ಭಾವನೆಯೊಂದಿಗೆ ವ್ಯವಹಾರ ನಡೆಸಿ. ವ್ಯವಹಾರದಲ್ಲಿ ಆಳಾಗಿ ದುಡಿದು, ಮಾಲಕರಾಗಿ ಎಂದು ಉಜಿರೆ ಸಂಧ್ಯಾ ಪ್ರೇಶ್‌ನ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರು /ಯಶಸ್ವಿ ಮಹಿಳಾ ಉದ್ಯಮಿಯಾದ ಶ್ರೀಮತಿ ಅರ್ಚನಾ ರಾಜೇಶ್‌ ಪೈ ಅಭಿಪ್ರಾಯಪಟ್ಟರು.

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದ *ವಸ್ತ್ರ ಚಿತ್ರಕಲಾ ಉದ್ಯಮಿ (ಎಂಬ್ರಾಡರಿ ಮತ್ತು ಫ್ಯಾಬ್ರಿಕ್‌ ಫೈಂಟಿಂಗ್‌) ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತ್ತರಿಸಿ ಮಾತನಾಡಿದರು. ಪಡೆದ ತರಬೇತಿಯನ್ನು ಉಪಯೋಗಿಸಿಕೊಂಡು ಯಶಸ್ವಿಯಾಗಿ ಉದ್ಯಮ ನಡೆಸಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಅಜೇಯ ಮಾತನಾಡಿದರು ಸರಕಾರ ಮತ್ತು ಬ್ಯಾಂಕಿನ ಹೊಸ ಯೋಜನೆಯ ಮೂಲಕ ಸಹಾಯಧನ, ಸಾಲ ಪಡೆದುಕೊಂಡು ಉದ್ಯಮ ಆರಂಭಿಸಿ, ಏನಾದರೂ ಮಾಹಿತಿ-ಮಾರ್ಗದರ್ಶನ ಬೇಕಾದರೆ ಸಂಸ್ಥೆಯನ್ನು ಸಂಪರ್ಕಿಸಿ ಎಂದು ಶುಭ ಕೋರಿದರು.


ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾದ, ಶ್ರೀಮತಿ ರಶ್ಮಿರಾಘವೇಂದ್ರ ಅವರು ಮಾತನಾಡಿ ಶಿಬಿರಾರ್ಥಿಗಳಿಗೆ ಶುಭಕೋರಿದರು.
ಅತಿಥಿಗಳನ್ನು ರುಡ್ ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕರಾದ *ಅಬ್ರಹಾಂ ಜೇಮ್ಸ್ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ವಂದಿಸಿದರು. ಸುಮಾರು 30 ಜನ ಶಿಬಿರಾರ್ಥಿಗಳ ಭಾಗವಹಿಸಿದ್ದರು, ಕುಮಾರಿ ಅಮೃತಲಕ್ಷ್ಮೀ ಪ್ರಾರ್ಥನೆ ಮಾಡಿದರು, ಕು. ಸುಷ್ಮಾ , ಶ್ರೀಮತಿ ಪುಷ್ಪ ಜೈನ್, ಕುಮಾರಿ ರಕ್ಷಿತಾ ರೈ ತರಬೇತಿಯ ಅನುಭವ ಹಂಚಿಕೊಂಡರು.

Related posts

ಪಡಂಗಡಿ: ಸಿಡಿಲು ಬಡಿದು ಕಟ್ಟಡಕ್ಕೆ ಬೆಂಕಿ

Suddi Udaya

ಧರ್ಮಸ್ಥಳ ಯಕ್ಷಗಾನ ಮೇಳದ ಕಲಾವಿದ ಗಂಗಾಧರ ಪುತ್ತೂರು ವೇಷ ಕಳಚುತ್ತಿರುವಾಗಲೇ ಹೃದಯಾಘಾತಕ್ಕೊಳಗಾಗಿ ನಿಧನ

Suddi Udaya

ಪುದುವೆಟ್ಟು ಮಡ್ಯದಲ್ಲಿ ರಸ್ತೆ ಒತ್ತುವರಿ ತೆರವು ಬಳಿಕ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಧನಂಜಯ ಭೇಟಿ ನೀಡಿ ಪರಿಶೀಲನೆ

Suddi Udaya

ಅರಸಿನಮಕ್ಕಿಯಿಂದ ಶಿಶಿಲ ರಸ್ತೆ ಬದಿಯಲ್ಲಿರುವ ಅಪಾಯಕಾರಿ ವಿದ್ಯುತ್ ಕಂಬಗಳ ತೆರವು

Suddi Udaya

ಹತ್ಯಡ್ಕ: ನಿವೃತ್ತಿಗೊಂಡ ಕೆ.ವಿ.ಜಿ ಬ್ಯಾಂಕ್ ಮ್ಯಾನೇಜರ್ ಪುಷ್ಪರಾಜ್ ಕೆ.ಸಿ ರವರಿಗೆ ಬಿಳ್ಕೋಡುಗೆ ಸಮಾರಂಭ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ

Suddi Udaya
error: Content is protected !!