24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕಳೆ ತೆಗೆಯುವ ಯಂತ್ರಕ್ಕೆ ಸಿಲುಕಿ ಎದೆಗೆ ಬಡಿದ ರಬ್ಬರ್ ಕಪ್‌ನ ಸರಿಗೆ: ಕಾಯರ್ತಡ್ಕ ನಿವಾಸಿ ಕೊರಗಪ್ಪ ಗೌಡ ಸಾವು

ಕಾಯರ್ತಡ್ಕ: ಯಂತ್ರದ ಮೂಲಕ ರಬ್ಬರ್ ತೋಟದ ಕಳೆ ತೆಗೆಯುತ್ತಿದ್ದಾಗ ರಬ್ಬರ್ ಮರಕ್ಕೆ ಕಪ್ ಸಿಲುಕಿಸುವ ರಿಂಗ್ ಎದೆಗೆ ಬಡಿದು ಗಂಭೀರ ಗಾಯಗೊಂಡ ಹಾರಿತ್ತಕಜೆ ನಿವಾಸಿ ಕೊರಗಪ್ಪ ಗೌಡ (56) ಎಂಬವರು ಮೃತಪಟ್ಟ ಘಟನೆ ಸೆ.17ರಂದು ಬೆಳಗ್ಗೆ, ನಡೆದಿದೆ.

ಬೈದಿಕಜೆ ಎಂಬಲ್ಲಿ ರಬ್ಬರ್ ತೋಟದ ಕಳೆ ತೆರವುಗೊಳಿಸುತ್ತಿದ್ದಾಗ ಈ ಘಟನೆ ನಡೆದಿದೆ. ಕಳೆ ತೆಗೆಯುವ ಯಂತ್ರಕ್ಕೆ ಸಿಕ್ಕಿದ ಕಬ್ಬಿಣದ ಸರಿಗೆಯ ರಿಂಗ್ ವೇಗವಾಗಿ ಎದೆಗೆ ಬಡಿದು ಆಳವಾದ ಗಾಯವಾಗಿತ್ತು. ತಕ್ಷಣ ಆಸ್ಪತ್ರೆಗೆ ಸಾಗಿಸುವ ಪ್ರಯತ್ನವನ್ನು ಸ್ಥಳೀಯರು ಮಾಡಿದರೂ, ದಾರಿಮಧ್ಯೆ ಕೊನೆಯುಸಿರೆಳೆದರು. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರು ಪತ್ನಿ ಲಲಿತಾ, ಮಕ್ಕಳಾದ ಹರ್ಷಿತ್, ಪ್ರವೀಣ್‌ರನ್ನು ಅಗಲಿದ್ದಾರೆ.

Related posts

ಚಾಲಕನ ನಿಯಂತ್ರಣ ತಪ್ಪಿ ಗುಂಡ್ಯ ಹೊಳೆಗೆ ಬಿದ್ದ ಖಾಸಗಿ ಬಸ್‌; ಡ್ರೈವರ್‌ ಸ್ಥಳದಲ್ಲೇ ಸಾವು

Suddi Udaya

ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ಸಂಸ್ಥೆ ನಚ್ಚಬೊಟ್ಟು ಇದರ ಸಮ್ಮೇಳನದ ಸಂದೇಶ ಜಾಥಾ

Suddi Udaya

ಜು.13: ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ಧೇಶ ಸಹಕಾರ ಸಂಘದ ಶ್ರೀ ಗುರು ಸಾನಿಧ್ಯ ವಾಣಿಜ್ಯ ಸಂಕೀರ್ಣದ ಲೋಕಾರ್ಪಣೆ

Suddi Udaya

ಬೆಳ್ತಂಗಡಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾಗಿ ಪಿಸಿ ಸೆಬಾಸ್ಟಿಯಾನ್ ಆಯ್ಕೆ

Suddi Udaya

ಧರ್ಮಸ್ಥಳ: ರಾಷ್ಟ್ರೀಯ ತುಳು ಗುಡಿಗಾರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ಕೆಸರು ಗದ್ದೆ ಕಾರ್ಯಕ್ರಮ

Suddi Udaya

ಮಾಣಿಲ ಮಾತೃಭೂಮಿ ಯುವ ವೇದಿಕೆ ಸಂಘದ ವತಿಯಿಂದ ಎಸ್.ಎಸ್.ಎಲ್.ಸಿ ಮಕ್ಕಳಿಗೆ ವಿಶೇಷ ಕಾರ್ಯಾಗಾರ

Suddi Udaya
error: Content is protected !!