24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಿಟ್ಟಡೆ ಕುಂಭಶ್ರೀ ಆಂ.ಮಾ. ಶಾಲಾ – ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

ವೇಣೂರು: ನಿಟ್ಟಡೆ ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ – ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯು ಸೆ. 13 ರಂದು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

10ನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕರಿಗೆ ಗುರುವಂದನೆಯನ್ನು ಮಾಡಿ ಮತ್ತು ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳು ಕವನಗಳ ಮೂಲಕ ಶಿಕ್ಷಕರ ಮಹತ್ವವನ್ನು ತಿಳಿಸಿದರು. ವಿದ್ಯಾರ್ಥಿಗಳು ಶಿಕ್ಷಕರಿಗೆ ವಿಭಿನ್ನ ರೀತಿಯ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನವನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಸಂಸ್ಥಾಪಕರಾದ ಗಿರೀಶ್ ಕೆ ಎಚ್ ಅಧ್ಯಕ್ಷರಾಗಿದ್ದು, ಇದು ನಿಮ್ಮ ಜೀವನಕ್ಕೆ ಅಡಿಪಾಯ ಇನ್ನು ಮುಂದಕ್ಕೂ ನಿಮ್ಮ ಜೀವನ ಉಜ್ವಲವಾಗಲಿ ಎಂದು ಮಕ್ಕಳಿಗೆ ಶುಭ ಹಾರೈಸಿದರು. ಶಾಲಾ ಸಂಚಾಲಕರಾದ ಅಶ್ವಿತ್ ಕುಲಾಲ್ ವಿದ್ಯಾರ್ಥಿಗಳೇ ಉತ್ತಮ ಅಂಕಗಳನ್ನು ಪಡೆದು ನಿಮ್ಮ ಜೀವನವನ್ನು ರೂಪಿಸಿಕೊಳ್ಳಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಓಮನ , ಹಿರಿಯ ಪ್ರಾಥಮಿಕ ಮುಖ್ಯೋಪಾಧ್ಯಾಯಿನಿ ಅಕ್ಷತ, ಕಿರಿಯ ಪ್ರಾಥಮಿಕ ಪವಿತ್ರ ಹಾಗೂ ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಹತ್ತನೇ ತರಗತಿಯ ವಿದ್ಯಾರ್ಥಿ ವರ್ಷಿತ ಮತ್ತು ದ್ವಿತೀಯ ಪಿಯುಸಿಯ ಸಿಂಚನ ಮತ್ತು ಸಮೀಕ್ಷಾ ನಿರೂಪಿಸಿದರು. 10ನೇ ತರಗತಿಯ ವಿದ್ಯಾರ್ಥಿಗಳು ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಆಯೋಜಿಸಿದರು.

Related posts

ಬಂದಾರು: ಮೈರೋಳ್ತಡ್ಕ ಬೂತ್ 218 ರಲ್ಲಿ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಯವರ ಬಲಿದಾನ್ ದಿವಸ್ ಆಚರಣೆ

Suddi Udaya

ಗುರುವಾಯನಕೆರೆ ಶ್ರೀ ಶಾರದಾಂಭ ಭಜನಾ ಮಂಡಳಿ ವತಿಯಿಂದ ದುರ್ಗಾ ನಮಸ್ಕಾರ ಪೂಜಾ ಕಾರ್ಯಕ್ರಮ

Suddi Udaya

ಬೆಳಾಲು ಶ್ರೀ.ಧ. ಮ ಪ್ರೌಢಶಾಲೆಯ ವಿದ್ಯಾರ್ಥಿಗಳ ಪೋಷಕರ ಸಭೆ

Suddi Udaya

ಜೂನ್ 7: ರಾಷ್ಟ್ರೀಯ ತುಳು ಗುಡಿಗಾರ ಸಂಘ ದಕ್ಷಿಣ ಕನ್ನಡ-ಉಡುಪಿ ಇವರ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

Suddi Udaya

ಮುಂಡಾಜೆ: ತುಂಡಾಗಿ ಬಿದ್ದ ಎಚ್‌ ಟಿ ವಿದ್ಯುತ್ ತಂತಿ: ತಪ್ಪಿದ ಭಾರಿ ಅನಾಹುತ

Suddi Udaya

ನಾವೂರು ಜಯಂತಿ ಸಾಂತಿಪಲ್ಕೆ ನಿಧನ

Suddi Udaya
error: Content is protected !!