24.8 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿ

ಕೊಕ್ಕಡ ಬದ್ರಿಯಾ ಜುಮಾ ಮಸೀದಿಯಲ್ಲಿ ಈದ್ ಮಿಲಾದ್ ಕಾರ್ಯಕ್ರಮ

ಕೊಕ್ಕಡ: ಬದ್ರಿಯಾ ಜುಮಾ ಮಸೀದಿ ಕೊಕ್ಕಡ ಇದರ ಅಧೀನ ಸಮಿತಿ ಗೌಸಿಯ ಯಂಗ್ ಮೆನ್ಸ್ ಅಸೋಸಿಯೇಷನ್ ಕೊಕ್ಕಡ ಇದರ ಆಶ್ರಯದಲ್ಲಿ ಈದ್ ಮಿಲಾದ್ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಖುವ್ವತ್ತುಲ್ ಇಸ್ಲಾಂ ಮದರಸದ ಮುಖ್ಯ ಗುರು ಶಮೀಮುದ್ದೀನ್ ಹುದವಿ ನೆರವೇರಿಸಿದರು.

“2024 ಮೀಲಾದೇ ಮದೀನ” ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌಸಿಯ ಯಂಗ್ ಮೆನ್ಸ್ ಅಸೋಸಿಯೇಷನ್ ಕೊಕ್ಕಡ ಇದರ ಅಧ್ಯಕ್ಷ ಖಾಲಿದ್ ಬಿ.ವೈ. ವಹಿಸಿದ್ದರು.

ದುಆ ಹಾಗೂ ಪ್ರಾಸ್ತಾವಿಕ ಭಾಷಣವನ್ನು ಬದ್ರಿಯಾ ಜುಮಾ ಮಸೀದಿ ಕೊಕ್ಕಡದ ಖತೀಬ ಸುಲ್ತಾನ್ ದಾರಿಮಿ ಯವರು ನೇತೃತ್ವ ನೀಡಿದರು.

ಸಮಾರೋಪ ಕಾರ್ಯಕ್ರಮದ ಧ್ವಜಾರೋಹಣ ಕಾರ್ಯಕ್ರಮವನ್ನು ಜಮಾದ್ ಕಮಿಟಿ ಅಧ್ಯಕ್ಷ ಹೈದರ್ ಎಂ.ಎಸ್ ರವರು ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಹಾಜಿ ಉಮರ್ ಶಾಲಿಮಾರ್, ಉಪಾಧ್ಯಕ್ಷ ಯುಸೂಫ್ ವೈ.ಎಂ.ಕೆ., ಎಸ್‌.ಕೆ.ಎಸ್‌.ಎಸ್‌.ಎಫ್ ಅಧ್ಯಕ್ಷ ಸಲೀಂ ಮುಂಡ್ರೇಲು ಹಾಗೂ ಆಡಳಿತ ಸಮಿತಿಯ ಪ್ರ. ಕಾರ್ಯದರ್ಶಿ ಅನ್ಸಾರ್, ಆಡಳಿತ ಸಮಿತಿಯ ಸದಸ್ಯರು, ಜಮಾದ್‌ನ ಸದಸ್ಯರು, ಉಪಸ್ಥಿತರಿದ್ದರು.

ಗೌಸಿಯ ಯಂಗ್ ಮೆನ್ಸ್ ಅಸೋಸಿಯೇಷನ್ ಕೊಕ್ಕಡ ಇದರ ಕಾರ್ಯದರ್ಶಿ ನೌಫಲ್ ಎಂ.ಎ. ಸ್ವಾಗತಿಸಿದರು.

Related posts

ಹತ್ಯಡ್ಕ ಪ್ರಾ.ಕೃ.ಪ.ಸ.ಸಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ. ತ್ಯಾಂಪಣ್ಣ ಶೆಟ್ಟಿಗಾರ್ ಸೇವಾ ನಿವೃತ್ತಿ

Suddi Udaya

ಉಜಿರೆ: ಜಿಲ್ಲಾ ಮಟ್ಟದ ಬಾಲಕ-ಬಾಲಕಿಯರ ಗುಡ್ಡ ಗಾಡು ಓಟ

Suddi Udaya

ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ

Suddi Udaya

ಕಳೆಂಜ: ರಾಮಣ್ಣ ಗೌಡ ಬರೆಂಗಾಯ ನಿಧನ

Suddi Udaya

ರೋಟರಿ ಕ್ಲಬ್ ಮಡಂತ್ಯಾರ್ ಗೆ ಪ್ರತಿಷ್ಠಿತ ಪ್ಲಾಟಿನಂ ಕ್ಲಬ್ ಪ್ರಶಸ್ತಿ

Suddi Udaya

ಬೆಳ್ತಂಗಡಿ: ಮಾಜಿ ಸೈನಿಕರ ಸಂಘದ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya
error: Content is protected !!