ನಡ ಗ್ರಾ.ಪಂ. ವ್ಯಾಪ್ತಿಯಲ್ಲಿ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ

Suddi Udaya

ನಡ: ಪಶು ಸಂಗೋಪನೆ ಮತ್ತು ಪಶು ವೈದ್ಯ ಸೇವಾ ಇಲಾಖೆ, ಬೆಳ್ತಂಗಡಿ-ಗ್ರಾಮ ಪಂಚಾಯತ್ ನಡ-ಹಾಲು ಉತ್ಪಾದಕರ ಸಹಕಾರಿ ಸಂಘ ನಡ ಇದರ ಸಂಯುಕ್ತ ಆಶ್ರಯದಲ್ಲಿ ಸೆ.18ರಂದು ನಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ ನಡೆಸಲಾಯಿತು.

ನಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು 450 ಶ್ವಾನಗಳಿಗೆ ಉಚಿತವಾಗಿ ಲಸಿಕೆಯನ್ನು ನೀಡಲಾಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂ. ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಸಿಬ್ಬಂದಿ ವರ್ಗ, ನಡ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ-ಸಿಬ್ಬಂದಿಗಳು, ಪಶು ವೈದ್ಯಕೀಯ ಇಲಾಖೆಯ ಡಾ. ರಂಗನಾಥ್, ಡಾ. ಪ್ರಶಾಂತ್ ಕುಮಾರ್, ಡಾ. ರಾಜವರ್ಮ ಜೈನ್, ಡಾ. ಗಂಗಾಧರ, ಸಿಬ್ಬಂದಿ ಚಂದ್ರ ಹಾಗೂ ಪಶುಸಖಿ ಶ್ರೀಮತಿ ಪ್ರೇಮ ಇವರ ಸಹಕಾರದೊಂದಿಗೆ ಶಿಬಿರವು ಯಶಸ್ವಿಯಾಯಿತು.

Leave a Comment

error: Content is protected !!