ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪರಿಶಿಷ್ಟ ಪಂಗಡದ ಘಟಕದ ಪದಾಧಿಕಾರಿಗಳ ಸಭೆ

ಬೆಳ್ತಂಗಡಿ .ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪರಿಶಿಷ್ಟ ಪಂಗಡದ ಘಟಕದ ಪದಾಧಿಕಾರಿಗಳ ಸಭೆಯು ಬೆಳ್ತಂಗಡಿ ಕಾಂಗ್ರೆಸ್ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರು ಪದಾಧಿಕಾರಿಗಳೊಂದಿಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗೆ ವಾಸಿಸುತ್ತಿರುವ ಬುಡಕಟ್ಟು ಕುಟುಂಬದ ಹಲವಾರು ಸಮಸ್ಯೆಗಳ ಬಗ್ಗೆ ವಿದ್ಯುತ್‌ ,ರಸ್ತೆ ,ಭೂ ಒಡೆತನದ ,ಬಗ್ಗೆ ಸಂವಾದ ವನ್ನು ನಡೆಸಿ.ಮುಂದಿನ ದಿನದಲ್ಲಿ ಬೆಳ್ತಂಗಡಿ ಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮಾವೇಶವನ್ನು ನಡೆಸಿ ಈ ಎಲ್ಲಾ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಪಟ್ಟ ಮಂತ್ರಿಗಳನ್ನು ಕರೆಸಿ ಪರಿಹಾರಕ್ಕೆಪ್ರಯತ್ನಿಸಲಾಗುತ್ತದೆ.ಎಂದರು..

ಪರಿಶಿಷ್ಟ ಪಂಗಡದಿಂದ ಸರ್ಕಾರ ನಾಮನಿರ್ದೇಶಿತ ಸದಸ್ಯರಾಗಿ ಅಯ್ಕೆಯಾಗಿರುವ ಸದಸ್ಯರನ್ನು ಅಭಿನಂದಿಸಲಾಯಿತು. ಶಾಸಕ ಹರೀಶ್ ಪೂಂಜ ಸವಣಾಲು ಹನ್ಯಾಡಿ ಪಿಲಿಕಲ ರಸ್ತೆ ದುರಸ್ತಿ ವೀಕ್ಷಣೆ ಸಂದರ್ಭದಲ್ಲಿ ಅದಿವಾಸಿ ಸಮುದಾಯದವರು ಪ್ರಶ್ನೆ ಮಾಡಿದ ಸಂದರ್ಭದಲ್ಲಿ ನಿಂದನಾತ್ಮಕ ಪದ ಬಳಸಿದಕ್ಕೆ ಖಂಡಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ನಾರಾಯಣ ನಾಯ್ಕ್ ,ಜಿಲ್ಲಾ ಸಂಯೋಜಕರಾದ ಚಿತ್ತರಂಜನ್ ಶೆಟ್ಟಿ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ ಎಮ್ ನಾಗೇಶ್ ಕುಮಾರ್ ಗೌಡ ,ಜಿಲ್ಲಾ ಕೆಡಿಪಿ ಸದಸ್ಯರಾದ ಸಂತೋಷ್ ಕುಮಾರ್ ,ಜಿಲ್ಲಾ ಅರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಜಯರಾಮ್ ಎಮ್ ಕೆ, ಬೆಳ್ತಂಗಡಿ ನಗರ ಸಮಿತಿ ಅಧ್ಯಕ್ಷರಾದ ಜಯನಂದ ಪಿ,ಗ್ರಾಮೀಣ ಅಧ್ಯಕ್ಷರಾದ ಜಿನ್ನಪ್ಪ ನಾಯ್ಕ್ ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶೇಖರ್ ಕುಕ್ಕೆಡಿ,ತಾಲೂಕು ಅರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಶ್ರೀಮತಿ ಸವಿತಾ ,ತಾಲೂಕು ಆರಾಧನಾ ಸಮಿತಿಯ ಸದಸ್ಯರಾದ ಲಕ್ಷಣ್ ಮಲೆಕುಡಿಯ,ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾದ ಕೇಶವ ನಾಯ್ಕ್ ಒಡಿಲ್ನಾಳ ಹಾಗೂ ಸಮಿತಿ ಪ್ರಮುಖರು ಸದಸ್ಯರು ಉಪಸ್ಥಿತರಿದ್ದರು.

Related posts

ಬದ್ರಿಯಾ ಜುಮಾ ಮಸೀದಿ ಪೆರಾಲ್ದರಕಟ್ಟೆಯಲ್ಲಿ ವನಮಹೋತ್ಸವ

Suddi Udaya

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ವಿಭಾಗದ ಅಧಿಕಾರಿಗಳೊಂದಿಗೆ ಅದಾಲತ್ ಕಾರ್ಯಕ್ರಮ- ಸಾವ೯ಜನಿಕ ಅಹವಾಲು

Suddi Udaya

ಅಳದಂಗಡಿ ಸರಸ್ವತಿ ಭಟ್ ಹೃದಯಾಘಾತದಿಂದ ನಿಧನ

Suddi Udaya

ಮಾ.9: ಬೆಳ್ತಂಗಡಿ ಪಂಚ ಗ್ಯಾರಂಟಿ ಸಮಾವೇಶದಲ್ಲಿ ಭಾಗವಹಿಸಲು ಉಚಿತ ಬಸ್ಸು ವ್ಯವಸ್ಥೆ

Suddi Udaya

ಪುಂಜಾಲಕಟ್ಟೆ: ಪಿಲಾತಬೆಟ್ಟು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷರಾಗಿ ಜಿ.ಪಂ. ಮಾಜಿ ಉಪಾಧ್ಯಕ್ಷ ಎಂ ತುಂಗಪ್ಪ ಬಂಗೇರ ಆಯ್ಕೆ

Suddi Udaya

ಮಿದುಳಿನ ರಕ್ತಸ್ರಾವ: ಮಹಿಳೆ ಮೃತ್ಯು

Suddi Udaya
error: Content is protected !!