ಬೆಳ್ತಂಗಡಿ: ಬೆಳ್ತಂಗಡಿ ಕೃಷಿ ಪತ್ತಿನ ಸಹಕಾರ ಸಂಘ ಇದರ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಆರಿಗ ಅವರ ಅಧ್ಯಕ್ಷತೆಯಲ್ಲಿ ಸೆ.19ರಂದು ಎಸ್.ಡಿ.ಎಂ.ಕಲಾಭವನ ಬೆಳ್ತಂಗಡಿಯಲ್ಲಿ ಜರುಗಿತು.
ಸಂಘದ ಉಪಾಧ್ಯಕ್ಷ ಗಣೇಶ್ ಭಂಡಾರಿ, ನಿರ್ದೇಶಕರುಗಳಾದ ಬಿ.ಮನಿರಾಜ ಅಜ್ರಿ, ಪುರಂದರ, ಶ್ರೀ ಮತಿ ರಾಧಾ, ನಾರಾಯಣ ಆಚಾರ್ಯ, ಅಶೋಕ್ ರೈ, ಶ್ರೀನಾಥ್ ಕೆ.ಎಂ, ತಿಮ್ಮಯ್ಯ ನಾಯ್ಕ, ರಮೇಶ್ ನಲ್ಕೆ, ಹರಿಯಪ್ಪ ನಾಯ್ಕ, ಶ್ರೀಮತಿ ಪ್ರೇಮಾ, ಆಥಿ೯ಕ ಬ್ಯಾಂಕ್ ಪ್ರತಿನಿಧಿ ಸುದಶ೯ನ್ ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಸಾದ್ ಎಸ್ ಸಂಘದ ವರದಿ ವಾಚಿಸಿದರು.
ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಆರಿಗ ಅವರು ಮಾತನಾಡಿ, ಸಂಘದಲ್ಲಿ ಎ, ಸಿ, ಡಿ ಸೇರಿ ಒಟ್ಟು 12,268 ಸದಸ್ಯರಿದ್ದು, ರೂ. 2.44 ಕೋಟಿ ಪಾಲು ಬಂಡವಾಳವಿದ್ದು, ವರದಿ ಸಾಲಿನಲ್ಲಿ ಸಂಘವು ರೂ.42.06 ಲಕ್ಷ ಪಾಲು ಬಂಡವಾಳ ಸಂಗ್ರಹಣೆಯಲ್ಲಿ ಪ್ರಗತಿ ಸಾಧಿಸಿದೆ. ಸಂಘ ರೂ. 25.81 ಕೋಟಿ ಠೇವಾಣಾತಿ ಹೊಂದಿದ್ದು, ರೂ. 23.55 ಕೋಟಿ ಸಾಲ ನೀಡಲಾಗಿದೆ. ವರದಿ ವಷ೯ದಲ್ಲಿ ಶೇ 99.15 ಸಾಲ ವಸೂಲಾತಿ ಆಗಿದ್ದು, ರೂ.67.04 ಲಕ್ಷ ಲಾಭ ಬಂದಿದೆ. ಸದಸ್ಯರಿಗೆ ಶೇ 14 ಡಿವಿಡೆಂಡ್ ಘೋಷಿಸಿದರು.
ಸಂಘದ ಸದಸ್ಯರು ಮರಣ ಹೊಂದಿದರೆ ಅವರಿಗೆ ಸಹಕಾರವಾಗುವ ನಿಟ್ಟಿನಲ್ಲಿ ರೈತರ ಸಾಂತ್ವನ ನಿಧಿ ಸ್ಥಾಪಿಸುವ ಬಗ್ಗೆ ಅಧ್ಯಕ್ಷ ಅಜಿತ್ ಕುಮಾರ್ ಆರಿಗ ಸಭೆಯ ಮುಂದಿಟ್ಟು ಮರಣ ಸಂಭವಿಸಿದಾಗ ರೂ. 10 ಸಾವಿರ ಕೊಡುವ ಬಗ್ಗೆ ತಿಳಿಸಿದರು. ಈ ಬಗ್ಗೆ ಸದಸ್ಯರು ಮೊತ್ತ ಜಾಸ್ತಿ ಮಾಡುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯಲ್ಲಿ ಸಂಘದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ ಹಾಗೂ ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ ಇವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಸಂಘದ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು.
ಸಿಬ್ಬಂದಿ ನಳಿನಿ ಪ್ರಾರ್ಥಿಸಿದರು. ಸಂಘದ ನಿರ್ದೇಶಕ ಶ್ರೀನಾಥ್ ಕೆ.ಎಂ ಸ್ವಾಗತಿಸಿದರು. ಗುಮಾಸ್ತೆ ಶ್ರೀಮತಿ ವನಿತಾ ಎನ್.ಎಚ್ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಶ್ರೀಮತಿ ಹೇಮಲತಾ, ಶ್ರೀಮತಿ ಹರಿಣಿ ಪ್ರಭು, ಶ್ರೀಮತಿ ನಳಿನಿ, ವಿನೋದ್ ಕುಮಾರ್ ಡಿ.ಎಸ್, ಕೆ.ಹರೀಶ್, ಪಿಗ್ಮಿ ಸಂಗ್ರಾಹಕರಾದ ಲಕ್ಷ್ಮೀಧರ, ಸುಬ್ಬಣ್ಣ ನಾಯ್ಕ, ಶ್ರೀಮತಿ ಸುಧಾ ಎಸ್.ಪೈ, ಶ್ರೀಮತಿ ಲಲಿತಾ ಸಹಕರಿಸಿದರು.