ರೆಖ್ಯ : ಶೌರ್ಯ ವಿಪತ್ತು ಸ್ವಯಂ ಸೇವಕ ತಂಡದಿಂದ ಶ್ರಮದಾನದ ಮೂಲಕ ನೆಲ್ಯಡ್ಕ ಶಾಲೆಯಲ್ಲಿ ಕೈತೋಟ ನಿರ್ಮಾಣ ಕಾರ್ಯಕ್ರಮವು ಸೆ.18ರಂದು ನಡೆಯಿತು.
ಶಾಲಾ ಕೈತೋಟದಲ್ಲಿ ಬಸಳೆ ಚಪ್ಪರ, ತೊಂಡೆಕಾಯಿಯ ಚಪ್ಪರ ,ತೆಂಗಿನ ಗಿಡ ನೆಡುವುದು, ಬಾಳೆ ಗಿಡ ನೆಡುವುದು, ಮತ್ತು ಗಿಡಗಳಿಗೆ ಗೊಬ್ಬರ ಹಾಕಿ ಮತ್ತು ಅಪಾಯಕಾರಿಯಾಗಿದ್ದ ಮರವನ್ನು ಕಡಿದು ಸೊಪ್ಪನ್ನು ತೆಂಗು ಮತ್ತು ತೊಂಡೆ ಗಿಡಗಳಿಗೆ ಹಾಕಿ ಮುಚ್ಚುವುದರ ಮೂಲಕ ನಡೆಸಲಾಯಿತು.
ಸ್ವಯಂಸೇವಕರಾದ ಪ್ರಕಾಶ್ ಪಿ.ಕೆ, ಚೇತನ್ ರೆಖ್ಯ, ಹರೀಶ್, ಉಮೇಶ್ ಗೌಡ, ಶೀನಪ್ಪ ನಾಯ್ಕ, ಸೋಮಶೇಖರ್ , ಕಿರಣ್ ಸಂಕೇಶ, ಅವಿನಾಶ್ ಭಿಡೆ, ರಮೇಶ್ ಬೈರಕಟ್ಟ, ಕುಶಾಲಪ್ಪ ಗೌಡ,, ರಾಧಾಕೃಷ್ಣ ಗುತ್ತು, ಘಟಕ ಪ್ರತಿನಿಧಿ ಆನಂದ್ ನಾಯ್ಕ ಮತ್ತು ಸೇವಾ ಪ್ರತಿನಿಧಿ ರಶ್ಮಿತಾ ಉಪಸ್ಥಿತರಿದ್ದರು.