24.8 C
ಪುತ್ತೂರು, ಬೆಳ್ತಂಗಡಿ
April 1, 2025
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ರಾಜ್ಯ ಅಂತರ್ ಜಿಲ್ಲಾ ಅಥ್ಲೆಟಿಕ್ ಕ್ರೀಡಾಕೂಟ: ಮುಂಡಾಜೆಯ ತೇಜಲ್ ಕೆ.ಆರ್. ರವರಿಗೆ 110 ಮೀ. ಹರ್ಡಲ್ಸ್‌ನಲ್ಲಿ ಚಿನ್ನದ ಪದಕ

ಬೆಳ್ತಂಗಡಿ: ಮೈಸೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಅಂತರ್ ಜಿಲ್ಲಾ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಮುಂಡಾಜೆ ನಿವಾಸಿ ತೇಜಲ್ ಕೆ.ಆರ್. 20 ವರ್ಷ ವಯೋಮಿತಿಯ ವಿಭಾಗದಲ್ಲಿ 110 ಮೀ. ಹರ್ಡಲ್ಸ್‌ನಲ್ಲಿ ಚಿನ್ನದ ಪದಕ ಗಳಿಸಿ ಪಾಂಡಿಚೇರಿಯಲ್ಲಿ ನಡೆಯಲಿರುವ ದಕ್ಷಿಣ ವಲಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಮುಂಡಾಜೆ ನಿವಾಸಿ ರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿದ್ದ ರಾಜೇಶ್ ಕೆ.ವಿ. ಹಾಗೂ ಜಿನ್ಸಿ ದಂಪತಿ ಪುತ್ರನಾಗಿರುವ ತೇಜಲ್ ಕೆ.ಆರ್. ಆಳ್ವಾಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ. ಇವರು 2022ರಲ್ಲಿ ಬೆಂಗಳೂರಿನಲ್ಲಿ ನಡೆದ ಕ್ರೀಡಾಕೂಟದಲ್ಲಿ 16 ವಯೋಮಾನದ ವಿಭಾಗದಲ್ಲಿ ಹರ್ಡಲ್ಸ್‌ನಲ್ಲಿ ರಾಜ್ಯ ದಾಖಲೆಯೊಂದಿಗೆ ಚಿನ್ನದ ಪದಕ ಗಳಿಸಿದ್ದರು. ಮೈಸೂರಿನಲ್ಲಿ ನಡೆದಿದ್ದ ರಾಜ್ಯಮಟ್ಟದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ರೀಡಾಕೂಟದಲ್ಲಿ 110ಮೀ. ಹರ್ಡಲ್ಸ್‌ನಲ್ಲಿ ಚಿನ್ನದ ಪದಕ ಗಳಿಸಿದ್ದ ಅವರು 2022-23ರ ಕರ್ನಾಟಕ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 18 ವರ್ಷ ವಯೋಮಿತಿಯಲ್ಲಿ ಬೆಳ್ಳಿಯ ಪದಕ ಗಳಿಸಿದ್ದರು. ಇವರಿಗೆ ಶಾಂತರಾಮ್ ರವರು ತರಬೇತಿ ನೀಡುತ್ತಿದ್ದಾರೆ.

Related posts

ಲಾಯಿಲ ಬಂಟರ ಗ್ರಾಮ ಸಮಿತಿ ವತಿಯಿಂದ ಆಟಿದ ಗಮ್ಮತ್ ಹಾಗೂ ವಿವಿಧ ಕ್ರೀಡಾಕೂಟ

Suddi Udaya

ವೇಣೂರು: ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳ ಕೂಟದ ಪೂರ್ವಭಾವಿ ಸಭೆ

Suddi Udaya

ಮಚ್ಚಿನ: ಕಾಂಗ್ರೆಸ್ ಹಿರಿಯ ಕಾರ್ಯಕರ್ತ ಸೇಸು ಮೂಲ್ಯ ನಿಧನ

Suddi Udaya

ಸೌತಡ್ಕ ದೇವಳದ ಆವರಣದಲ್ಲಿ ಗಿಡ ನಾಟಿ ಕಾರ್ಯಕ್ರಮ

Suddi Udaya

ಮೇಲಂತಬೆಟ್ಟು ಗ್ರಾಮ ಪಂಚಾಯತ್ ಹಾಗೂ ಸಂಜೀವಿನಿ ಒಕ್ಕೂಟ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

Suddi Udaya

ಧರ್ಮಸ್ಥಳ : ಕೂಟದ ಕಲ್ಲು ನಿವಾಸಿ ನಿತೇಶ್ ನಿಧನ

Suddi Udaya
error: Content is protected !!