September 6, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಉಜಿರೆ: ಗಾಂಧಿನಗರದಲ್ಲಿ ಮೊಸರು ಕುಡಿಕೆ ಮತ್ತು ಶ್ರೀ ಗಣೇಶೋತ್ಸವದ ಪ್ರಯುಕ್ತ ಕ್ರೀಡಾಕೂಟ

ಉಜಿರೆ: ಮೈತ್ರಿ ಫ್ರೆಂಡ್ಸ್ ಕ್ಲಬ್ ಗಾಂಧಿನಗರ ಹಾಗೂ ಮೈತ್ರಿ ಮಹಿಳಾ ಮಂಡಳಿ ಗಾಂಧಿನಗರ ಇವರ ಜಂಟಿ ಆಶ್ರಯದಲ್ಲಿ ಮೊಸರು ಕುಡಿಕೆ ಮತ್ತು ಶ್ರೀ ಗಣೇಶೋತ್ಸವದ ಪ್ರಯುಕ್ತ ಕ್ರೀಡಾ ಕೂಟವು ಸೆ.15ರಂದು ಗಾಂಧಿನಗರ ವಠಾರದಲ್ಲಿ ನಡೆಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಅರವಿಂದ್ ಕಾರಂತ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪ್ರವೀಣ್ ಫೆರ್ನಾಂಡಿಸ್ ಹಳ್ಳಿಮನೆ ಉಜಿರೆ, ಜಿಲ್ಲಾ ಕೆಡಿಪಿ ಸದಸ್ಯರು ಹಾಗೂ ನೋಟರಿ ವಕೀಲರಾದ ಸಂತೋಷ್ ಕುಮಾರ್, ಉಜಿರೆ ಗ್ರಾ.ಪಂ. ಮಾಜಿ ಉಪಾಧ್ಯಕ್ಷರು ಹಾಗೂ ತಾಲೂಕು ಅಕ್ರಮ-ಸಕ್ರಮ ಸಮಿತಿಯ ಸದಸ್ಯೆ ವಿನುತಾ ರಜತ್ ಗೌಡ, ಶಾರೀರಿಕ ಶಿಕ್ಷಕ ಸಂಜೀವ, ಮೂಡುಬಿದಿರೆ ಎಕ್ಸೆಲೆಂಟ್ ಕಾಲೇಜಿನ ಉಪನ್ಯಾಸಕ ಚಂದ್ರಪ್ಪ ಮದ್ದಡ್ಕ, ಗ್ರಾ.ಪಂ.ಸದಸ್ಯ ದಿನೇಶ್‌ ಆಗಮಿಸಿದ್ದರು.

ಮೈತ್ರಿ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷ ರಮೇಶ್, ಗೌರವಾಧ್ಯಕ್ಷ ಕೆ. ಶ್ರೀನಿವಾಸ ಗಾಂಧಿನಗರ ಮತ್ತು ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸೇನೆಯಿಂದ ನಿವೃತ್ತರಾಗಿ ಆಗಮಿಸಿದ ಸುಬೇದಾರ್ ಮೆಲ್ವಿನ್ ಫೆರ್ನಾಂಡಿಸ್, ಗ್ರಾ.ಪಂ. ನ ಹಿರಿಯ ಸಿಬ್ಬಂದಿ ಓಡಿ, ಅರಣ್ಯ ಇಲಾಖೆಯಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಕಮಲ, ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.

Related posts

ಬಳಂಜ: ನಾಲ್ಕೂರು ಬೊಳ್ಳಾಜೆ, ಪುಣ್ಕೆದೊಟ್ಟು ಪರಿಸರದಲ್ಲಿ ಚಿರತೆ ಹೆಜ್ಜೆಗುರುತು: ಅರಣ್ಯ ಇಲಾಖೆಗೆ ಮಾಹಿತಿ, ಚಿರತೆಯ ಸೆರೆಗೆ ಬೋನ್ ಅಳವಡಿಕೆ

Suddi Udaya

ಗ್ರಾಮಗಳಲ್ಲಿ ಕಿರು ಉದ್ದಿಮೆಗಳ ಮೂಲಕ ಲಕ್ಷಾಂತರ, ಸ್ವ ಉದ್ಯೋಗಗಳನ್ನು ಸೃಷ್ಟಿಸಿದ ಗ್ರಾಮಾಭಿವೃದ್ಧಿ ಯೋಜನೆಗೆ ಎಂ.ಎಸ್.ಎಂ.ಇ. ಬ್ಯಾಂಕಿಂಗ್ ಶ್ರೇಷ್ಠತಾ ಪ್ರಶಸ್ತಿ

Suddi Udaya

ಬೆಳ್ತಂಗಡಿ: ಪಂಚಾಯತ್ ರಾಜ್ ಇಲಾಖೆಯ ನಿವೃತ್ತ ಇಂಜಿನಿಯರ್ ತಮ್ಮನ ಗೌಡ ಪಾಟೀಲ್ ಅವರಿಗೆ ಸನ್ಮಾನ

Suddi Udaya

ಬಳಂಜದಲ್ಲಿ ಸಂವಿಧಾನ ಜಾಗೃತಿ ಜಾಥಾ

Suddi Udaya

ಕಲ್ಮಂಜ : ಕಲ್ಲೆ ನಿವಾಸಿ ದೇವಕಿ ಕೊಳ್ತಿಗೆ ನಿಧನ

Suddi Udaya

ಮಾ.1 : ಎಸ್.ಡಿ.ಪಿ.ಐ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಪಕ್ಷ ಸಮಾವೇಶ

Suddi Udaya
error: Content is protected !!