ಉಜಿರೆ: ಎಸ್ ಡಿ ಎಂ ಕಾಲೇಜ್ ನ ಬಿ.ವೋಕ್ ವಿಭಾಗದ ವಿದ್ಯಾರ್ಥಿಗಳಿಗೆ ಹೈಪರ್ ಲೋಕಲ್ ನ್ಯೂಸ್ ಮೀಡಿಯಾದ ಮಾಹಿತಿ ಕಾರ್ಯಗಾರವು ಸೆ.20ರಂದು ನಡೆಯಿತು.
ಮುಖ್ಯ ಅತಿಥಿಯಾಗಿ ಬಿ.ವೋಕ್ ಡಿಜಿಟಲ್ ಮೀಡಿಯಾ ಹಾಗೂ ಫಿಲಂ ಮೇಕಿಂಗ್ ನ ಹಳೆ ವಿದ್ಯಾರ್ಥಿ, ಸುದ್ದಿ ಉದಯ ವಾರಪತ್ರಿಕೆಯ ವರದಿಗಾರ ಸುದಿತ್ ಕುಂಜರ್ಪ ಮಾತನಾಡಿ, ತಾಲೂಕು ಪತ್ರಿಕೆಗಳ ಕಾರ್ಯವೈಖರಿಗಳ ಬಗ್ಗೆ, ದಿನ ಪತ್ರಿಕೆ ಹಾಗೂ ವಾರ ಪತ್ರಿಕೆಗಳ ನಡುವೆ ಇರುವ ಭಿನ್ನತೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಬಿ. ವೋಕ್ ಇನ್ ಡಿಜಿಟಲ್ ಮೀಡಿಯಾ & ಫಿಲ್ಮ್ ಮೇಕಿಂಗ್ ಮುಖ್ಯಸ್ಥ ಮಾಧವ ಹೊಳ್ಳ , ಬಿ. ವೋಕ್ ಇನ್ ಡಿಜಿಟಲ್ ಮೀಡಿಯಾ & ಫಿಲ್ಮ್ ಮೇಕಿಂಗ್ ಸಹಾಯಕ ಪ್ರಾಧ್ಯಾಪಕರಾದ ಅಶ್ವಿನಿ ಜೈನ್, ತೇಜಸ್ವಿನಿ ಆರ್. ಎಸ್. ಹಾಗೂ ಇಂದುಧರ ಕಿಣಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ತರುಣ್ ನಿರೂಪಿಸಿದರು.