ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ ಹೈನುಗಾರಿಕೆ ತರಬೇತಿಯ ಸಮಾರೋಪ

Suddi Udaya

ಉಜಿರೆ: ತರಬೇತಿ ಸಂಸ್ಥೆಗಳಲ್ಲಿ ರುಡ್‌ಸೆಟ್ ಸಂಸ್ಥೆಯ ತರಬೇತಿಯು ಬಹಳ ಅತ್ಯುತ್ತಮ ಗುಣಮಟ್ಟದಾಗಿದ್ದು ಸರಕಾರಗಳು ಇದನ್ನು ಅಂಗೀಕರಿಸಿವೆ. ಜೀವನದಲ್ಲಿ ಸಾಗರದಷ್ಟು ಕಲಿಯಬೇಕಾಗಿದೆ. ಇದರಲ್ಲಿ ಸ್ವಲ್ಪವಾದರು ನಾವು ಕಲಿಬೇಕು, ಸಾವಯವ ಕೃಷಿಗೆ ಹೆಚ್ಚು ಒತ್ತು ಕೊಟ್ಟಾಗ, ತನ್ನಷ್ಟಕ್ಕೆ ಎರೆಹುಳಗಳು ಜಾಸ್ತಿಯಾಗುತ್ತದೆ. ನಮ್ಮ ಪೂರ್ವಜರು ಬಿಟ್ಟು ಹೋದ ಈ ಒಳ್ಳೆಯ ಪರಿಸರವನ್ನು ನಮ್ಮ ಮುಂದಿನ ಪೀಳಿಗೆ ಹಸ್ತಾಂತರಿಸುವುದು ನಮ್ಮ ಕರ್ತವ್ಯ. ಹೈನುಗಾರಿಕೆಯನ್ನು ಸಾಂಪ್ರಾದಯಕವಾಗಿ ಮಾಡುವುದರ ಜೊತೆಗೆ ವೈಜ್ಞಾನಿಕವಾಗಿ ಕೊಡ ಅಳವಡಿಸಿಕೊಂಡಾಗ ಯಶಸ್ಸು ಅನ್ನು ಗಳಿಸಬಹುದು. ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಸಾಕಷ್ಟು ಬೇಡಿಕೆ ಇದೆ. ಈ ಬೇಡಿಕೆಗೆ ಅನುಗುಣವಾಗಿ ಹಾಲನ್ನು ಪೂರೈಸಲು ನಾವು ಪ್ರಯತ್ನಿಸೋಣ ಎಂದು ದ.ಕ.ಜಿಲ್ಲಾ ಪಂಚಾಯುತ್‌ನ ಯೋಜನಾ ನಿರ್ದೇಶಕ ಜಯರಾಜ್ ಕೆ.ಇ. ಅಭಿಪ್ರಾಯಪಟ್ಟರು.

ಅವರು ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದೆ ಹೈನುಗಾರಿಕೆ ಮತ್ತು ಎರೆಹುಳಗೊಬ್ಬರ ತಯಾರಿಕೆ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತ್ತರಿಸಿ ಮಾತನಾಡಿದರು. ಪಡೆದ ತರಬೇತಿಯನ್ನು ಉಪಯೋಗಿಸಿಕೊಂಡು ಯಶಸ್ವಿಯಾಗಿ ಉದ್ಯಮ ನಡೆಸಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ವಹಿಸಿ ಏನಾದರೂ ಮಾಹಿತಿ-ಮಾರ್ಗದರ್ಶನ ಬೇಕಾದರೆ ಸಂಸ್ಥೆಯನ್ನು ಸಂಪರ್ಕಿಸಿ ಎಂದು ಶುಭ ಕೋರಿದರು.

ಅತಿಥಿಗಳನ್ನು ರುಡ್‌ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಛೇರಿ ಸಹಾಯಕಿ ಶ್ರೀಮತಿ ರಶ್ಮಿ ವಂದಿಸಿದರು.

Leave a Comment

error: Content is protected !!