ಬೆಳ್ತಂಗಡಿ: ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ ನೆನಪಿನಲ್ಲಿ ಅವರ ಆದರ್ಶಪ್ರಾಯವಾದ ಜೀವಮಾನದ ಸಲುವಾಗಿ ಕರುಣಾಶ್ರಯ ಸೇವಾ ಟ್ರಸ್ಟ್, ಮಂಗಳೂರು ವಾರದ ಒಂದು ದಿನದ ಸೇವಾ ಕಾರ್ಯಕ್ರಮ ಸೇವೆಯ ಸಾಥ್ ಸೇವಾ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಮೊದಲನೇ ಸೇವಾ ಕಾರ್ಯಕ್ರಮವಾಗಿ ಬಾಲ್ಯದಲ್ಲಿ ಆದ ಆಚಾತುರ್ಯದಿಂದ ಕೈ ಕಳೆದುಕೊಂಡು ಅಂಗವೈಕಲ್ಯವನ್ನ ಒಂದು ವೈಕಲ್ಯವೇ ಅಲ್ಲ ಎಂದು ತನ್ನ ಬದುಕಿನುದ್ದಕ್ಕೂ ಹೋರಾಟದ ಜೀವನದಿಂದ ಆದರ್ಶರಾದ ಸಂಧ್ಯಾ ಸುವರ್ಣ ಇವರನ್ನ ಗೌರವಿಸುವ ಮೂಲಕ ಮತ್ತು ಎರಡನೇ ಸೇವಾ ಕಾರ್ಯಕ್ರಮವಾಗಿ ಹೊನ್ನಯ್ಯ ಅವರ ನೇತೃತ್ವದಲ್ಲಿ ನಡೆಯುತ್ತಿರುವ ವೃದ್ಧರ ಸೇವಾಶ್ರಮ ಶ್ರೀ ಗುರು ಚೈತನ್ಯ ಸೇವಾಶ್ರಮ ಗುಂಡೂರಿಗೆ ದಿನಸಿ ವಸ್ತುಗಳನ್ನ ನೀಡುವ ಮುಖೇನ ನಡೆಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ಉಪಾಧ್ಯಕ್ಷ ಪ್ರಮೋದ್ ಶೆಟ್ಟಿ, ಕೋಶಾಧಿಕಾರಿ ನಿತಿನ್ ವಿ ಶೆಟ್ಟಿ, ಕಾರ್ಯದರ್ಶಿ ಸುಮಲತಾ, ಜೊತೆ ಕಾರ್ಯದರ್ಶಿ ಪ್ರಶಾಂತ್, ಟ್ರಸ್ಟಿಗಳಾದ ಆಶಾ ಡಿ ಸುಧೀರ್, ಯಶವಂತ್, ಸೋಮನಾಥ, ಸುಶ್ಮೀತಾ ಭಾಗವಹಿಸಿದ್ದರು.