ದ್ವಿತೀಯ ಪಿಯು ವಿಜ್ಞಾನವಿದ್ಯಾರ್ಥಿಗಳಿಗೆ ಗುರುವಾಯನಕೆರೆಯ ವಿದ್ವತ್ ಪಿ . ಯು ಕಾಲೇಜಿನಲ್ಲಿ ಪರೀಕ್ಷಾ ಕಾಯಾ೯ಗಾರ

Suddi Udaya

ಬೆಳ್ತಂಗಡಿ ಹಾಗೂ ಸುತ್ತಮುತ್ತಲಿನ ತಾಲೂಕುಗಳ ದ್ವಿತೀಯ ಪಿಯು ವಿಜ್ಞಾನ ವಿದ್ಯಾರ್ಥಿಗಳಿಗೊಂದು ಸುವರ್ಣಾವಕಾಶ.
ದ್ವಿತೀಯ ಪಿಯು ವಿದ್ಯಾರ್ಥಿಗಳಿಗಿರುವ ಅವಕಾಶಗಳು, ಸ್ಪರ್ಧಾತ್ಮಕ ಪರೀಕ್ಷೆಗಳು, ವಿದ್ಯಾರ್ಥಿ ವೇತನ, ಪರೀಕ್ಷೆಗಳಿಗೆ ತಯಾರಾಗುವ ಬಗೆ, ವೈಜ್ಞಾನಿಕ ಸ್ಟಡಿ ಮಾದರಿ ಹಾಗೂ ನೆನಪಿನ ಶಕ್ತಿ ವೃದ್ಧಿಯ ಬಗ್ಗೆ ವಿಸ್ತುತ ಮಾಹಿತಿಯ ಓರಿಯಂಟೇಷನ್ ಕಾರ್ಯಕ್ರಮ ಇದೇ ಸಪ್ಟೆಂಬರ್ 22 ರ ಭಾನುವಾರ ಬೆಳಿಗ್ಗೆ 11:30 ಕ್ಕೆ ಗುರುವಾಯನಕೆರೆಯ ವಿದ್ವತ್ ಪಿ ಯು ಕಾಲೇಜಿನಲ್ಲಿ ನಡೆಯಲಿದೆ.

ಈ ಓರಿಯಂಟೇಷನ್ ನಲ್ಲಿ ನೀಟ್, ಜೆಇಇ, ಸಿಯುಇಟಿ (CUET), ಐಸಿಎಆರ್ (ICAR) ಸಿಯಿಟಿ (CET), ಹೋಟೆಲ್ ಮ್ಯಾನೆಜೈಂಟ್, ಪ್ಯಾರಾ- ಮೆಡಿಕಲ್, ಎನ್‌ಡಿಎ(NDA), ಹೀಗೆ ಹತ್ತು ಹಲವು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದು, ಅದು ಅಲ್ಲದೆ ಈ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಹಾಗೂ ವಿದ್ಯಾರ್ಥಿ ವೇತನಗಳ ಬಗ್ಗೆಯೂ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುವುದು.

ದ್ವಿತಿಯ ಪಿಯು ವಿಜ್ಞಾನ ವಿದ್ಯಾರ್ಥಿಗಳು ವೈಜ್ಞಾನಿಕ ಸ್ಟಡಿ ಮಾದರಿ ಹಾಗೂ ನಿಖರ ಫಲಿತಾಂಶಕ್ಕಾಗಿ ನೆನಪಿನ ಶಕ್ತಿಯ ವೃದ್ಧಿ ಹೇಗೆ ಮಾಡಿಕೊಳ್ಳಬೇಕೆಂಬ ಬಗ್ಗೆ ಹೆಸರಾಂತ ಆಪ್ತ ಸಮಾಲೋಚನ ತಜ್ಞ ಗಂಗಾಧರ ಇ ಮಂಡಗಳಲೆ ಯವರು ತರಬೇತಿ ನೀಡಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳ ಹೆಸರಾಂತ ತರಬೇತಿದಾರರು ಹಾಗೂ ವಿಷಯ ತಜ್ಞರಾದ ಪ್ರತಾಪ್‌ ದೊಡ್ಡಮನೆ ಯವರು ಮಾಹಿತಿ ನಿಡಲಿದ್ದಾರೆ. ಈ ಕಾರ್ಯಾಗಾರ ಸಂಪೂರ್ಣ ಉಚಿತವಾಗಿದ್ದು ಬೆಳ್ತಂಗಡಿ, ಬಂಟ್ವಾಳ, ಪುತ್ತೂರು ತಾಲೂಕುಗಳ ದ್ವಿತೀಯ ಪಿಯು ವಿಜ್ಞಾನ ವಿದ್ಯಾರ್ಥಿ ಹಾಗೂ ಅವರ ಪೋಷಕರು ಇದರಲ್ಲಿ ಭಾಗಿಯಾಗಿ ಇದರ ಸಂಪೂರ್ಣ ಪ್ರಯೋಜನ ಪಡೆಯಬಹುದು ಎಂದು ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಕಾಶಿನಾಥ್ ಎಂ.ಕೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರಿಗೆ ಸಂಪರ್ಕಿಸಿ
– M . 7618718791, 7618718792

Leave a Comment

error: Content is protected !!