ಉಜಿರೆ : ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ ಜುಲೈ ತಿಂಗಳಿನಲ್ಲಿ ನಡೆಸಿದ 2023-24ನೇ ಸಾಲಿನ ಅಖಿಲ ಭಾರತ ವೃತ್ತಿ ಪರೀಕ್ಷೆಯಲ್ಲಿ ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ ಶೇಕಡ 98 ಫಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ 47 ವಿದ್ಯಾರ್ಥಿನಿಯರು ಹಾಜರಾಗಿದ್ದು, ಅದರಲ್ಲಿ 11 ವಿದ್ಯಾರ್ಥಿನಿಯರು ಉತ್ತಮ ದರ್ಜೆ (ಡಿಸ್ಟಿಂಕ್ಷನ್)ಯಲ್ಲಿ ಹಾಗೂ 35 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಅಲ್ಲದೆ, ಕೋಪಾ (Computer Operator & Programming Assistant) ವೃತ್ತಿ (ಟ್ರೇಡ್)ಯಲ್ಲಿ ಶಾಲಿನಿ (521/600) ಪ್ರಥಮ ಸ್ಥಾನ ಪಡೆದರೆ, ಸುಷ್ಮಾ (515/600) ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಸೀವೀಂಗ್ ಟೆಕ್ನಾಲಜಿ ವೃತ್ತಿಯಲ್ಲಿ ಪ್ರಜ್ಞಾ (510/600) ಪ್ರಥಮ ಸ್ಥಾನ ಪಡೆದರೆ, ಪವಿತ್ರ (501/600) ದ್ವಿತೀಯ ಸ್ಥಾನ ಗಳಿಸಿರುತ್ತಾರೆ.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆ, ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್ ಮತ್ತು ಡಾ. ಸತೀಶ್ಚಂದ್ರ ಎಸ್. ಹಾಗೂ ಎಸ್.ಡಿ.ಎಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ಮತ್ತು ಉಪನ್ಯಾಸಕರು ವಿದ್ಯಾರ್ಥಿನಿಯರನ್ನು ಅಭಿನಂದಿಸಿದ್ದಾರೆ.