ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಮಾಸ್ಟರ್ಸ್ ಕೋಚಿಂಗ್ ಕ್ಲಾಸ್ ನಲ್ಲಿ ಶಿಕ್ಷಕರ ದಿನಾಚರಣೆ

ಬೆಳ್ತಂಗಡಿ : ವಿದ್ಯಾರ್ಥಿಗಳು ಶಿಕ್ಷಕರ ಜೊತೆ ಇಟ್ಟುಕೊಳ್ಳುವ ಉತ್ತಮ ಭಾಂದವ್ಯ ಅವರ ಜೀವನಕ್ಕೆ ದಾರಿದೀಪ ವಾಗಬಲ್ಲುದು. ಅದೇ ರೀತಿ ಶಿಕ್ಷಕರ ವ್ಯಕ್ತಿತ್ವ ವಿದ್ಯಾರ್ಥಿಗಳಿಗೆ ಮಾದರಿಯಾಗಿರಬೇಕು ಎಂದು ಕೋಚಿಂಗ್ ಸೆಂಟರ್ ನ ಸಂಚಾಲಕರಾದ ಸಂತೋಷ್ ಕುಮಾರ್ ರವರು ಹೇಳಿದರು.

ಇವರು ಮಾಸ್ಟರ್ಸ್ ಕೋಚಿಂಗ್ ಸೆಂಟರ್ ನಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕಿ ಹೇಮಾವತಿ ಕೆ. ವಿದ್ಯಾರ್ಥಿಗಳ ಸಂಘಟಿತ ಸಹಕಾರದ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಕೋಚಿಂಗ್ ಸೆಂಟರ್ ಮುಖ್ಯ ಶಿಕ್ಷಕಿ ರಮ್ಯಾ, ಶಿಕ್ಷಕರಾದ ದಿನೇಶ್, ಪಲ್ಲವಿ, ತೃಪ್ತಿ, ನಯನಾ, ಗುಣಶ್ರಿ, ಲತಾಶ್ರಿ, ಅಶ್ವಿನಿ, ನಾಗವೇಣಿ, ರೇಖಾ ಉಪಸ್ಥಿತರಿದ್ದರು.

ಸರ್ವಪಲ್ಲಿ ಡಾ.ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈಯುವ ಮೂಲಕ ಪ್ರಾರಂಭವಾದ ಕಾರ್ಯಕ್ರಮದಲ್ಲಿ
ವಿದ್ಯಾರ್ಥಿಗಳಾದ ಮಾನ್ಯ ಸ್ವಾಗತಿಸಿ, ಪ್ರೀತೇಶ್ ಧನ್ಯವಾದವಿತ್ತರು. ಸನ್ನಿಧಿ ಕಾರ್ಯಕ್ರಮ ನಿರೂಪಿಸಿದರು. ಅಸ್ನ ಮತ್ತು ಅಂಜಲಿ ಶಿಕ್ಷಕರ ದಿನಾಚರಣೆ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಶಿಕ್ಷಕರಿಗೆ ವಿವಿಧ ಸ್ಪರ್ಧೆಯನ್ನು ಏರ್ಪಡಿಸಲಾಯಿತು.

Related posts

ನಾಳೆ(ಫೆ.8): ಮಾಲಾಡಿ ಗ್ರಾಮ ಪಂಚಾಯತ್‌ ವಠಾರದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ

Suddi Udaya

ಕುಕ್ಕೇಡಿ ಗ್ರಾ.ಪಂ. ನ ಮೊದಲನೇ ಹಂತದ ಗ್ರಾಮ ಸಭೆ

Suddi Udaya

ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಆರೋಗ್ಯ ಜಾಗೃತಿ ಕಾರ್ಯಾಗಾರ: 40 ಮಂದಿ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ

Suddi Udaya

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಜೇಸಿಐ ಬೆಳ್ತಂಗಡಿ ಮಂಜುಶ್ರೀಯ ಆಜ್ಞಾ- ಅರಿವಿನ ಧ್ಯಾನ ಕಾರ್ಯಕ್ರಮ ಸಂಪನ್ನ

Suddi Udaya

ಸಿ.ಎ ಪರೀಕ್ಷೆ: ಕತ್ತೋಡಿ ನಿವಾಸಿ ಅಕ್ಷಯ್ ಜೈನ್ ಉತ್ತೀರ್ಣ

Suddi Udaya
error: Content is protected !!