24 C
ಪುತ್ತೂರು, ಬೆಳ್ತಂಗಡಿ
April 3, 2025
ಕೃಷಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ರೈತ ಸದಸ್ಯರಿಗೆ ಉಚಿತ ತರಕಾರಿ ಬೀಜ ವಿತರಣಾ ಕಾರ್ಯಕ್ರಮ

ಧರ್ಮಸ್ಥಳ: ಸುಭಾಷ್‌ ಯಾದವ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಮ್ಮ ತೋಟ ನಮ್ಮ ತರಕಾರಿ ಯೋಜನೆಯಡಿಯಲ್ಲಿ ಸಂಘದ ರೈತ ಸದಸ್ಯರಿಗೆ ಉಚಿತ ತರಕಾರಿ ಬೀಜ ವಿತರಣಾ ಕಾರ್ಯಕ್ರಮ ಸೆ. 21ರಂದು ಸಂಘದ ಅಟಲ್‌ಜೀ ಸಭಾಭವನದಲ್ಲಿ ನಡೆಯಿತು.

ಶಾಸಕ ಹರೀಶ್ ಪೂಂಜ ತರಕಾರಿ ಬೀಜ ವಿತರಿಸಿ ಮಾತನಾಡಿ “ನಮ್ಮ ತೋಟ ನಮ್ಮ ತರಕಾರಿ” ಎಂಬ ಹೊಸ ಪರಿಕಲ್ಪನೆಯೊಂದಿಗೆ ನಮ್ಮ ರೈತ ಸದಸ್ಯರ ಆರೋಗ್ಯದ ಕಡೆ ಒಂದು ಹೆಜ್ಜೆಯಾಗಿದ್ದು ಧರ್ಮಸ್ಥಳ ಸಹಕಾರ ಸಂಘ ರಾಜ್ಯದಲ್ಲಿಯೇ ಪ್ರಥಮವಾಗಿ ಈ ಕಾರ್ಯಕ್ರಮ ಮಾಡಿದೆ ಇತ್ತೀಚಿನ ದಿನಗಳಲ್ಲಿ ನಮ್ಮ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಜನರಲ್ಲಿ ಕ್ಯಾನ್ಸರ್ ಎಂಬ ಮಾರಕ ರೋಗ ಪತ್ತೆಯಾಗುತ್ತಿದೆ ಇದಕ್ಕೆ ಕಾರಣ ಹುಡುಕಿದಾಗ ನಾವು ದಿನನಿತ್ಯ ತಿನ್ನುವ ವಿಷಕಾರಿ ಅಂಶದಿಂದ ಕೂಡಿದ ತರಕಾರಿಯ ಸೇವನೆ ಇದರಿಂದ ಸಣ್ಣ ಸಣ್ಣ ಮಕ್ಕಳು ಕೂಡ ಈ ಕ್ಯಾನ್ಸರ್ ಎಂಬ ಮಾರಿಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ನಮ್ಮ ಸಂಘದ ರೈತ ಸದಸ್ಯರು ತಮ್ಮ ಮನೆಯಲ್ಲೇ ತರಕಾರಿ ಬೆಳೆದು ಅದನ್ನೇ ಸೇವಿಸಬೇಕೆಂಬ ಧೈಯದೊಂದಿಗೆ ನಮ್ಮ ಸದಸ್ಯರರು ತಮ್ಮ ಮನೆಯಲ್ಲೇ ತರಕಾರಿ ಬೆಳೆದು ಅದನ್ನೆ ಉಪಯೋಗಿಸಬೇಕಾಗಿ ಈ ಯೋಜನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪ್ರೀತಮ್ ಡಿ. ವಹಿಸಿದ್ದರು.

ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರೂಪೇಶ್ ಮಲ್ಲರ್ ಮಾಡಿ ಮಾಹಿತಿ ನೀಡಿದರು.

ಸಂಘದ ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್, ನಿರ್ದೇಶಕರುಗಳಾದ ಉಮಾನಾಥ್, ಶೀನ ಧನಲಕ್ಷ್ಮೀ ಜನಾರ್ದನ, ಪ್ರಸನ್ನ, ಚಂದ್ರಶೇಖ‌ರ್, ವಿಕ್ರಮ್ ಗೌಡ, ತಂಗಚ್ಚನ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಶಿಧರ್ ಉಪಸ್ಥಿತರಿದ್ದರು.

ನಿರ್ದೇಶಕ ನೀಲಕಂಠ ಶೆಟ್ಟಿ ಸ್ವಾಗತಿಸಿ ನಿರ್ದೇಶಕಿ ಶಾಂಭವಿ ರೈ ವಂದಿಸಿದರು. ಎ.ಎಸ್.ಲೋಕೇಶ್ ಶೆಟ್ಟಿ ನಿರೂಪಿಸಿದರು. ಸಿಬ್ಬಂದಿಗಳು ಸಹಕರಿಸಿದರು. ಸುಮಾರು 500 ಮಂದಿ ಸದಸ್ಯರಿಗೆ ತರಕಾರಿ ಬೀಜ ವಿತರಿಸಲಾಯಿತು.

Related posts

ಮಾಸ್ತಿಕಲ್ಲು ಮಜಲು ಶ್ರೀ ಪಿಲಿಚಾಮುಂಡಿ ಹಾಗೂ ಸಹ ಪರಿವಾರ ದೈವಗಳ ನೇಮೋತ್ಸವ: ದೈವದ ಪಾತ್ರಿ ಸೇವೆಯಿಂದ ನಿವೃತ್ತಿ ಹೊಂದಿದ್ದ ಪೂವಾಜೆ ರುಕ್ಮಯ್ಯ ಗೌಡರಿಗೆ ಸನ್ಮಾನ

Suddi Udaya

ಸುಳ್ಯೋಡಿ: ಮಾತೃಭೋಜನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

Suddi Udaya

ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಆಶಾಕೇಂದ್ರವಾಗಲಿದೆ ಬೈಂದೂರಿನ ಹೇನಬೇರು ಶಾಲೆ

Suddi Udaya

ಮೇಲಂತಬೆಟ್ಟು: ಹಾನಿಗೊಳಗಾದ ಪ್ರದೇಶಗಳಿಗೆ ವಿ.ಪ. ಶಾಸಕ ಪ್ರತಾಪ್ ಸಿಂಹ ನಾಯಕ್ ಭೇಟಿ; ಪರಿಶೀಲನೆ

Suddi Udaya

ಉಜಿರೆ ನಿನ್ನಿಕಲ್ಲು 33/11 ಕೆ.ವಿ ವಿದ್ಯುತ್ ಉಪಕೇಂದ್ರದ ಕಾಮಗಾರಿ ಶೀಘ್ರ ಆರಂಭ: ನಿನ್ನಿಕಲ್ಲಿನಲ್ಲಿ 0.96 ಎಕ್ರೆ ಜಾಗ ಮಂಜೂರು: ರೂ. 46.66 ಲಕ್ಷ ಸ್ಥಳ ಮೌಲ್ಯ ಪಾವತಿಗೆ ಸೂಚನೆ

Suddi Udaya

ಬಿಜೆಪಿಯಿಂದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ 6 ವರ್ಷಗಳ ಕಾಲ ಉಚ್ಚಾಟನೆ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ