32.2 C
ಪುತ್ತೂರು, ಬೆಳ್ತಂಗಡಿ
April 3, 2025
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಬಳಂಜ: ಶಾರದೋತ್ಸವ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿ, ಬಿಸಿಲು-ಮಳೆ ಲೆಕ್ಕಿಸದೆ ಆಟವಾಡಿದ ಯುವಕರು

ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ ಹಾಗೂ ಊರವರ ಸಹಕಾರದೊಂದಿಗೆ ಅ.6 ರಂದು ನಡೆಯುವ ಎರಡನೇ ವರ್ಷದ ಶಾರದೋತ್ಸವದ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿಯು ಸೆ.22 ರಂದು ಬಳಂಜ ಕ್ರೀಡಾಂಗಣದಲ್ಲಿ ನಡೆಯಿತು.

ಕ್ರಿಕೆಟ್ ಪಂದ್ಯಾಟದ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕರಾದ ತಿಮ್ಮಪ್ಪ ಪೂಜಾರಿ ತಾರಿಪಡ್ಪು ಉದ್ಘಾಟಿಸಿ ಕ್ರಿಕೆಟ್ ಪಂದ್ಯಾವಳಿ ಹಾಗೂ ಶಾರದೋತ್ಸವ ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ವಹಿಸಿದ್ದರು.

ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ಹೆಚ್.ಧರ್ಣಪ್ಪ ಪೂಜಾರಿ, ನಿಕಟಪೂರ್ವಾಧ್ಯಕ್ಷ ಪ್ರವೀಣ್ ಕುಮಾರ್ ಹೆಚ್.ಎಸ್,ಕಾರ್ಯದರ್ಶಿ ಜಗದೀಶ್ ಪೂಜಾರಿ, ನಿರ್ದೇಶಕರಾದ ರಂಜಿತ್ ಪೂಜಾರಿ,ದಿನೇಶ್ ಪೂಜಾರಿ ಅಂತರ,ರಕ್ಷಿತ್ ಬಗ್ಯೋಟ್ಟು,ಕ್ರಿಕೆಟ್ ಸಂಚಾಲಕ ಯೋಗೀಶ್ ಕೊಂಗುಳ ಉಪಸ್ಥಿತರಿದ್ದರು.

ಕ್ರಿಕೆಟ್ ಪಂದ್ಯಾವಳಿಯಲ್ಲಿ ಸುಮಾರು 20 ತಂಡಗಳು ಭಾಗವಹಿಸಿದ್ದವು. ಸಂತೋಷ್ ಪಿ ಕೋಟ್ಯಾನ್ ಸ್ವಾಗತಿಸಿ ವಂದಿಸಿದರು.ಪಂಚಲಿಂಗೇಶ್ವರ ಕ್ರಿಕೆಟರ್ಸ್ ಹಾಗೂ ಕ್ರಿಡಾಪಟುಗಳು ಸಹಕರಿಸಿದರು.

Related posts

ಪುದುವೆಟ್ಟು ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ: ನೆಕ್ಕಿಲು ಸ.ಕಿ.ಪ್ರಾ. ಶಾಲೆಗೆ ಹಲವು ಪ್ರಶಸ್ತಿ

Suddi Udaya

ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನಿಂದ ರೂ.2 ಲಕ್ಷ ದೇಣಿಗೆ

Suddi Udaya

ಸುದ್ದಿ ಉದಯ ವಾರಪತ್ರಿಕೆಯು ನವರಾತ್ರಿ ಹಬ್ಬದ ಪ್ರಯುಕ್ತ ಆಯೋಜಿಸಿದ “ಹೇ ಶಾರದೆ” ಫೋಟೊ ಸ್ಪರ್ಧೆಯ ಫಲಿತಾಂಶ ಪ್ರಕಟ

Suddi Udaya

ಅರಸಿನಮಕ್ಕಿ: ಹೊಸ್ತೋಟ ಶಾಲೆಗೆ ಕ್ರೀಡಾ ಉಪಕರಣಗಳ ಹಸ್ತಾಂತರ

Suddi Udaya

ಕಕ್ಕಿಂಜೆ ಸೈಂಟ್‌ ಜೋಸೆಫ್‌ ಆಸ್ಪತ್ರೆಯ ಸೀಲ್ ಕಳವು

Suddi Udaya
error: Content is protected !!