ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಕ್ಕಿಂಜೆ ಸೈಂಟ್‌ ಜೋಸೆಫ್‌ ಆಸ್ಪತ್ರೆಯ ಸೀಲ್ ಕಳವು

ಬೆಳ್ತಂಗಡಿ : ಚಾರ್ಮಾಡಿ ಗ್ರಾಮದ ಕಕ್ಕಿಂಜೆ ಸೈಂಟ್‌ ಜೋಸೆಫ್‌ ಆಸ್ಪತ್ರೆಯ ಹಿಂಭಾಗದಿಂದ ಏಣಿಯ ಮೂಲಕ ಒಂದನೇ ಮಹಡಿಗೆ ಹೋದ ಇಬ್ಬರು ಯುವಕರು ಸ್ಟೇರ್‌ ಕೇಸ್ ಮೂಲಕ ಕಂಪ್ಯೂಟರ್ ರೂಮಿಗೆ ಹೋಗಿ ಆಸ್ಪತ್ರೆಗೆ ಸಂಬಂಧಿಸಿದ ಎರಡು ಸೀಲ್ ಗಳನ್ನು ಕಳವು ಮಾಡಿದ ಕುತೂಹಲಕರ ಘಟನೆ ಮೇ 22ರಂದು ನಡೆದಿದೆ.

ಕಕ್ಕಿಂಜೆ ಸೈಂಟ್‌ ಜೋಸೆಫ್‌ ಆಸ್ಪತ್ರೆಯ ಡೈರೆಕ್ಟರ್‌ ಫಾ| ಯೋಹನನ್‌ ಕೆ ಜೆ ,ರವರ ದೂರಿನಂತೆ, ದಿನಾಂಕ 22.05.2024 ರಂದು ಸಂಜೆ, ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಕಕ್ಕಿಂಜೆ ಎಂಬಲ್ಲಿರುವ, ಸೇಂಟ್ ಜೋಸೆಫ್ ಆಸ್ಪತ್ರೆಯಲ್ಲಿ, ಇಬ್ಬರು ಯುವಕರು ಆಸ್ಪತ್ರೆಯ ಗೇಟಿನ ಮೂಲಕ ಒಳ ಬಂದು ಆಸ್ಪತ್ರೆಯ ಒಳ ಹೋಗಲು ಪ್ರಯತ್ನಿಸಿದ್ದು, ಈ ವೇಳೆ ಫಾ||ಟೋಮ್‌ ಎಂಬವರು ಅವರನ್ನು ಪ್ರಶ್ನಿಸಿರುತ್ತಾರೆ. ಸ್ವಲ್ಪ ಸಮಯದ ಬಳಿಕ ಅದೇ ಯುವಕರು ಯಾರಿಗೂ ತಿಳಿಯದಂತೆ, ಆಸ್ಪತ್ರೆಯ ಹಿಂಭಾಗಕ್ಕೆ ಹೋಗಿ ಅಲ್ಲಿ ಇರಿಸಿದ್ದ ಏಣಿಯ ಮೂಲಕ ಒಂದನೇ ಮಹಡಿಗೆ ಹೋಗಿ ಸ್ಟೇರ್‌ ಕೇಸ್ ಮೂಲಕ ಕಂಪ್ಯೂಟರ್ ರೂಮಿಗೆ ಹೋಗಿ ಅಲ್ಲಿದ್ದ ಆಸ್ಪತ್ರೆಗೆ ಸಂಬಂಧಿಸಿದ ಎರಡು ಸೀಲ್ ಗಳನ್ನು ಕಳುವು ಮಾಡಿಕೊಂಡು ಹೋಗಿದ್ದು, 2 ಸೀಲ್ ಗಳ ಒಟ್ಟು ಮೌಲ್ಯ 600/- ರೂ ಆಗಬಹುದು, ಆರೋಪಿಗಳು ಆಸ್ಪತ್ರೆಯಿಂದ ಹೋಗುವಾಗ ಸಂಸ್ಥೆಯ ಸಿಬ್ಬಂದಿಗಳಿಗೆ ಕೊಲೆ ಬೆದರಿಕೆಯನ್ನು ಕೂಡ ಹಾಕಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ, ಅ ಕ್ರ 44/2024 ಕಲಂ:454,380,506 ಜೊತೆಗೆ 34 ಐ ಪಿ ಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಬೆಳಾಲು ಶ್ರೀ ಧ. ಮಂ.ಅ. ಪ್ರೌಢ ಶಾಲಾ ಪ್ರಾರಂಭೋತ್ಸವ

Suddi Udaya

ನಾವೂರು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷರಾಗಿ ಪೂವಪ್ಪ ಗೌಡ, ಕಾರ್ಯದರ್ಶಿಯಾಗಿ ದಿನೇಶ್ ಗೌಡ ಆಯ್ಕೆ

Suddi Udaya

ಉರುವಾಲು ಶ್ರೀ ಭಾರತಿ ವಿದ್ಯಾಸಂಸ್ಥೆಯಲ್ಲಿ ವನಮಹೋತ್ಸವ ಮತ್ತು ಸಸಿ ವಿತರಣಾ ಕಾರ್ಯಕ್ರಮ

Suddi Udaya

ಕಲ್ಮಂಜ ಸರಕಾರಿ ಪ್ರೌಢಶಾಲಾ ಪ್ರಾರಂಭೋತ್ಸವ ಸಂಭ್ರಮ

Suddi Udaya

ಹರೀಶ್ ಪೂಂಜ ಬೃಹತ್ ಗೆಲುವು: ನಾರಾವಿಯಲ್ಲಿ ವಿಜಯೋತ್ಸವ

Suddi Udaya

ಗಾಂಜಾ ಸೇವನೆ: ಇಬ್ಬರ ವಿರುದ್ಧ ಪ್ರಕರಣ ದಾಖಲು

Suddi Udaya
error: Content is protected !!