25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಡಂತ್ಯಾರು: ವರ್ತಕ ಬಂಧು ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಮಡಂತ್ಯಾರು : ಮಡಂತ್ಯಾರಿನಲ್ಲಿ ವರ್ತಕರಿಂದ ವರ್ತಕರಿಗಾಗಿ ವರ್ತಕರೇ ನಡೆಸಲ್ಪಡುವ ವರ್ತಕ ಬಂಧು ಸಹಕಾರಿ ಸಂಘದ ಮಹಾಸಭೆ ಮಡಂತ್ಯಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸೆ.22 ರಂದು ನಡೆಯಿತು.

224 ಸದಸ್ಯರು ಹಾಜರಿದ್ದು ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಬಿ ಅಧ್ಯಕ್ಷತೆ ವಹಿಸಿದ್ದರು. ಕಳೆದ ವರ್ಷ ಜುಲೈ 9 ರಂದು ನೂತನವಾಗಿ ಉದ್ಘಾಟನೆಗೊಂಡ ಸಂಘ 8 ತಿಂಗಳ ವಾರ್ಷಿಕ ವರದಿಯನ್ನು ಮತ್ತು ಲೆಕ್ಕ ಪತ್ರವನ್ನು ಸೇರಿರುವ ಸಭೆಯಲ್ಲಿ ಸವಿಸ್ತಾರವಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಡೆಲ್ಸನ್ ಮೋನಿಸ್ ಮಂಡಿಸಿದರು. ಕಡಿಮೆ ಅವಧಿಯಲ್ಲಿ 28 ಕೋಟಿ ವ್ಯವಹಾರವನ್ನು ಮಾಡಿದ ಈ ಸಂಘದ ಅಭೂತಪೂರ್ವ ಕಾರ್ಯವೈಖರಿಯನ್ನು ಸೇರಿರುವ ಎಲ್ಲಾ ಸದಸ್ಯರು ಪ್ರಶಂಸಿದರು. ಮುಖ್ಯ ಸಲಹೆಗಾರರಾದ ಸಹಕಾರಿ ಧುರೀಣ ಮೋನಪ್ಪ ಪೂಜಾರಿ ಕಂಡೆತ್ಯಾರು ಸಂಘದ ಕಾರ್ಯ ವೈಖರಿಯನ್ನು ಅಭಿನಂದಿಸಿ ಶುಭ ಹಾರೈಸಿದರು.

ಮಹಾಸಭೆಯಲ್ಲಿ ಕೆಲವೊಂದು ಅತ್ಯಮೂಲ್ಯ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಸಭಾಧ್ಯಕ್ಷ ಸ್ಥಾನದಿಂದ ಜಯಂತ ಶೆಟ್ಟಿಯವರು ಸಮಯೋಚಿತವಾಗಿ ಮಾತನಾಡಿ ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರವನ್ನು ಯಾಚಿಸಿದರು. ಸಂಘದ ಎಲ್ಲಾ ನಿರ್ದೇಶಕರು ಮುಖ್ಯ ಸಲಹೆಗಾರರು ಗೌರವ ಸಲಹೆಗಾರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.ನಿರ್ದೇಶಕರಾದ ಉದಯ್ ಕುಮಾರ್ ಜೈನ್ ಸ್ವಾಗತಿಸಿ ಉಪಾಧ್ಯಕ್ಷರಾದ ಯೋಗೀಶ್ ಪೂಜಾರಿ ಕಡ್ತಿಲ ವಂದಿಸಿದರು. ನಿರ್ದೇಶಕ ತುಳಸಿದಾಸ್ ಪೈ ಕಾರ್ಯಕ್ರಮ ನಿರೂಪಿಸಿದರು.

Related posts

ಮುಂಡಾಜೆ ಸೀಟು ಬಳಿಯ ಸಿಸಿ ಕ್ಯಾಮೆರಾ ಎಗರಿಸಿದ ಕಳ್ಳರು

Suddi Udaya

ಶಿರ್ಲಾಲು ಕೃಷಿಕ ಶಿವಪ್ಪ ಪೂಜಾರಿ ನಿಧನ

Suddi Udaya

ಕಾಶಿಪಟ್ಣ ಸ.ಹಿ.ಪ್ರಾ. ಶಾಲೆಯ ನೂತನ ಕೊಠಡಿಗೆ ಶಿಲಾನ್ಯಾಸ ಹಾಗೂ ವಿವೇಕ ಕೊಠಡಿ ಉದ್ಘಾಟನೆ

Suddi Udaya

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ: ಅಂಗಣೋತ್ಸವ , ದೇವರ ದರ್ಶನ ಬಲಿ

Suddi Udaya

ಭಾರತಿಯ ಜನತಾ ಪಾರ್ಟಿಯ ಬೆಳ್ತಂಗಡಿ ಮಂಡಲದಿಂದ ನಾರವಿ ಕುತ್ಲೂರು ಗ್ರಾಮದ ವಿಕಾಸ ಹಬ್ಬ

Suddi Udaya

ಪುದುವೆಟ್ಟು: ಕಾಪಿನಡ್ಕದಲ್ಲಿ ತೋಟಕ್ಕೆ ನುಗ್ಗಿದ್ದ ಕಾಡಾನೆ : ಅಪಾರ ಕೃಷಿ ನಾಶ

Suddi Udaya
error: Content is protected !!