
ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಶಿಬಿರಾರ್ಥಿಗಳು ಭಾರತ ಸರಕಾರದ ಪ್ರಧಾನಿಯವರ ಆಶಯದಂತೆ ಜನರ ಭಾಗವಹಿಸುವ ಮೂಲಕ ಸ್ವಚ್ಛ ಭಾರತ ನಿರ್ಮಾಣದಲ್ಲಿ ಕೈ ಜೊಡಿಸುವ ಸಲುವಾಗಿ ಹಾಗೂ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಯೋಚನೆಯಂತೆ ಸೆ.22 ರಂದು ರುಡ್ ಸೆಟ್ ಸಂಸ್ಥೆಯಿಂದ ಸಿದ್ಧವನದ ಬಸ್ ತಂಗುದಾಣದವರೆಗೆ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಮೊದಲಿಗೆ ಶಿಬಿರಾರ್ಥಿಗಳಿಗೆ ಈ ವರ್ಷ, ‘ಸ್ವಭಾವ ಸ್ವಚ್ಛತಾ ಸಂಸ್ಕಾರ ಸ್ವಚ್ಛತಾ’ ಮಹತ್ವದ ಬಗ್ಗೆ ತಿಳಿಸಿ. ನಂತರ ರಸ್ತೆಯ ಎರಡು ಬದಿಗಳಲ್ಲಿ ಇದ್ದ ಕಸಗಳನ್ನು ಸ್ವಚ್ಛ ಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಅಜೇಯ, ಉಪನ್ಯಾಸಕರುಗಳಾದ ಅಬ್ರಹಾಂ ಜೇಮ್ಸ್, ಶ್ರೀಮತಿ ಅನಸೂಯಾ, ಕರುಣಾಕರ ಜೈನ್, ಲೋಹಿತ್ ಜೈನ್, ಉದ್ಯೋಗಿಗಳಾದ ಕಾಶ್ಮೀರ್ ಡಿ’ ಸೋಜಾ, ಪ್ರಸಾದ್, ಶ್ರೀಮತಿ ರಶ್ಮಿ, ಪ್ರವೀಣ್, ಕೂಸಪ್ಪ, ಸುರೇಶ್ ಗೌಡ ಭಾಗವಹಿಸಿದ್ದರು.