24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸುವರ್ಣ ಮಹೋತ್ಸವ: ಸವಿ ನೆನಪಿನ ಕೇಂದ್ರ ಕಚೇರಿಯ ನೂತನ ಕಟ್ಟಡ ‘ಪರಿಶ್ರಮ’ ಲೋಕಾರ್ಪಣೆ

ಮಡಂತ್ಯಾರು: ಪಾರೆಂಕಿ ಮತ್ತು ಮಾಲಾಡಿ ಗ್ರಾಮಗಳ ಹಿರಿಯರ ಒಗ್ಗಟ್ಟಿನ ಸಂಕಲ್ಪದಂತೆ 1970ರಲ್ಲಿ ಪ್ರಾರಂಭಗೊಂಡ ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 50 ವರ್ಷಗಳನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿ ಇದೀಗ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಇದರ ಸವಿನೆನಪಿನ ಕೇಂದ್ರ ಕಚೇರಿಯ ನೂತನ ಕಟ್ಟಡ “ಪರಿಶ್ರಮ” ಇದರ ಉದ್ಘಾಟನಾ ಸಮಾರಂಭವು ಸೆ.23 ರಂದು ಸಂಘದ ಅಧ್ಯಕ್ಷ ಕೆ. ಅರವಿಂದ ಜೈನ್ ಮತ್ತು ಆಡಳಿತ ಮಂಡಳಿಯ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.

ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ, ಸಹಕಾರ ರತ್ನ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಕೇಂದ್ರ ಕಚೇರಿಯ ನೂತನ ಕಟ್ಟಡ ಪರಿಶ್ರಮ ಲೋಕಾರ್ಪಣೆಗೊಳಿಸಿ ಶುಭಕೋರಿದರು.

ಕಾರ್ಯಕ್ರಮದಲ್ಲಿ ‘ಪರಿಶ್ರಮ’ ಸ್ಮರಣ ಸಂಚಿಕೆ ಮುಖಪುಟ ಬಿಡುಗಡೆಗೊಳಿಸಲಾಯಿತು.

ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು ‌ಹಾಗೂ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಪೂವಾಜೆ ಕುಶಾಲಪ್ಪ ಗೌಡ, ಸಂಘಕ್ಕೆ ಏಳಿಗೆಗೆ ಸಹಕರಿಸಿದ ಸಂಜೀವ ಶೆಟ್ಟಿ ಮುಗರೋಡಿ, ಪುಷ್ಪರಾಜ್ ಹೆಗ್ಡೆ, ಹಾಜಿ ಲತೀಪ್ ಸಾಹೇಬ್, ರಾಮಕೃಷ್ಣ ಹೆಬ್ಬಾರ್, ಡೀಕಯ್ಯ ಮೂಲ್ಯ,ತುಳಸಿ ಪಿ ಆಚಾರ್ಯ ಇವರನ್ನು ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಂತ್ಯಾರು ಸಿಎ ಬ್ಯಾಂಕಿನ ಅದ್ಯಕ್ಷ ಕೆ.ಅರವಿಂದ ಜೈನ್ ವಹಿಸಿ ಎಲ್ಲರನ್ನು ಸ್ವಾಗತಿಸಿದರು.

ವೇದಿಕೆಯಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಪುತ್ತೂರು ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಎಂ ರಘು, ಕೊಳ್ಪೆದಬೈಲು ಮೊಹಿಯುದ್ದೀನ್ ಜಾಮಿಯಾ ಮಸ್ಜಿದ್ ಅಧ್ಯಕ್ಷ ಹಾಜಿ| ಅಬ್ದುಲ್ ಲತೀಫ್ ಸಾಹೇಬ್, ಪಾರೆಂಕಿ ಶ್ರೀ ಕ್ಷೇತ್ರ ಪ್ರಧಾನ ಅರ್ಚಕ ಪೇಜಾವರ ಟಿ.ವಿ ಶ್ರೀಧರ್ ರಾವ್, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಪ್ರಧಾನ ಧರ್ಮಗುರು ವಂ. ಸ್ವಾಮಿ ಡಾ. ಸ್ಟ್ಯಾನಿ ಗೋವಿಯಸ್,ಮಡಂತ್ಯಾರ್ ಸಿಎ ಬ್ಯಾಂಕಿನ ಉಪಾಧ್ಯಕ್ಷೆ ಧನಲಕ್ಷ್ಮಿ ,ಸಂಜೀವ ಶೆಟ್ಟಿ ಮುಗೆರೋಡಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಾಲಾಡಿ ಗ್ರಾ.ಪಂ. ಅಧ್ಯಕ್ಷ ಪುನೀತ್ ಕುಮಾರ್, ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರೂಪ, ಆಡಳಿತ ಮಂಡಳಿ ಸದಸ್ಯರಾದ ಕುಮಾರ್ ನಾಯ್ಕ್,ಅಬ್ದುಲ್ ರಹಿಮಾನ್ ಪಡ್ಪು,ಬಿ.ಪದ್ಮನಾಭ ಸಾಲಿಯಾನ್,ಎಚ್.ಧರ್ಣಪ್ಪ ಗೌಡ,ಕಿಶೋರ್ ಕುಮಾರ್ ಶೆಟ್ಟಿ, ಜೋಯೆಲ್ ಗಾಡ್ ಫ್ರೀ ಮೆಂಡೋನ್ಸಾ,ತುಳಸಿ ಜಿ ಪೂಜಾರಿ,ಉಷಾಲತಾ,ರಮೇಶ್, ಹಾಗೂ ವಲಯ ಮೇಲ್ವಿಚಾರಕ ಸಿರಾಜುದ್ದೀನ್ ಹಾಗೂ ವಿವಿಧ ಸಿಎ ಬ್ಯಾಂಕಿನ ಅಧ್ಯಕ್ಷರು,ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು,ಸಹಕಾರಿ ಬಂಧುಗಳು ಉಪಸ್ಥಿತರಿದ್ದರು.

ಶಿಕ್ಷಕ ಧರಣೇಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿದರು,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೋಕಿಂ ಡಿಸೋಜ ವಂದಿಸಿದರು.

Related posts

ಕರ್ತವ್ಯದ ವೇಳೆ ತಹಶೀಲ್ದಾರ್ ಮೇಲೆ ಹಲ್ಲೆಗೆ ಯತ್ನ ಆರೋಪ: ಇಬ್ಬರನ್ನು ವಶಕ್ಕೆ ಪಡೆದ ಬೆಳ್ತಂಗಡಿ ಪೊಲೀಸರು

Suddi Udaya

ಬಳಂಜ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರಿಂದ ಗಂಡಿಬಾಗಿಲು ಸಿಯೋನ್ ಅಶ್ರಮಕ್ಕೆ ಭೇಟಿ

Suddi Udaya

ಬಳಂಜ: ನಾರಾವಿ ವಲಯ ಕ್ರೀಡಾ ಕೂಟ ಉದ್ಘಾಟನೆ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಆಂಗ್ಲ ಭಾಷಾ ಕೈ ಬರಹದ ತರಬೇತಿ ಕಾರ್ಯಾಗಾರ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲದ ಪದಾಧಿಕಾರಿಗಳು ಮತ್ತು ಸದಸ್ಯರಿಂದ ಅಯೋಧ್ಯೆ ಯಾತ್ರೆ

Suddi Udaya

ಹಸಿರು ಕ್ರಾಂತಿಯ ಹರಿಕಾರ ಡಾ| ಬಾಬು ಜಗಜೀವನರಾಂರವರ 116 ನೇ ಜನ್ಮ ದಿನಾಚರಣೆ

Suddi Udaya
error: Content is protected !!