ಗುರಿಪಳ್ಳ: ಬಿಲ್ಲವ ಸಮಾಜದ ಮಹಿಳೆಯರು ಸಂಘಟಿತರಾಗಿ ಬಾಳಬೇಕು ಆರ್ಥಿಕವಾಗಿ ಸದೃಢರಾಗಬೇಕೆಂಬ ಉದ್ದೇಶದಿಂದ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ತಾಲೂಕಿನಾದ್ಯಂತ ಮಹಿಳೆಯರ ಸ್ವ ಸಹಾಯ ಸಂಘವನ್ನು ಆರಂಭಿಸುವ ಚಿಂತನೆಯನ್ನು ಮಾಡಿದ್ದು ಇದೀಗ ಸಂಘದ ತೀರ್ಮಾನದಂತೆ ಗುರಿಪಳ್ಳದಲ್ಲಿ ಬ್ರಹ್ಮಶ್ರೀ ಬಿಲ್ಲವ ಮಹಿಳಾ ಸ್ವ ಸಹಾಯ ಸಂಘವನ್ನು ಸೆ.22 ರಂದು ಉದ್ಘಾಟಿಸಲಾಯಿತು.
ಸ್ವ ಸಹಾಯ ಸಂಘದ ಉದ್ಘಾಟನೆಯನ್ನು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಗ್ರಾಮ ಸಮಿತಿ ಗುರಿಪಳ್ಳ ಇದರ ಅಧ್ಯಕ್ಷ ಪ್ರಸಾದ್ ಕುಮಾರ್ ನೆರವೇರಿಸಿ ಮಾತನಾಡಿದರು.
ಸಂಘದ ನಿರ್ಣಯ ಪುಸ್ತಕ ಹಸ್ತಾಂತರಿಸಿ ಮಾತನಾಡಿದ ಯುವ ಬಿಲ್ಲವ ವೇದಿಕೆ ಬೆಳ್ತಂಗಡಿ ತಾಲೂಕು ಇದರ ಅಧ್ಯಕ್ಷ ಎಂ ಕೆ ಪ್ರಸಾದ್ ರವರು ಸ್ವ ಸಹಾಯ ಸಂಘದ ಉದ್ದೇಶ ಹಾಗೂ ಸಂಘವು ಯಾವ ರೀತಿಯಾಗಿ ಕಾರ್ಯನಿರ್ವಹಿಸಬೇಕು ಎಂಬುದರ ಕುರಿತು ಮಾಹಿತಿ ನೀಡಿದರು.
ಸ್ವ ಸಹಾಯ ಸಂಘದ ಅಧ್ಯಕ್ಷರಾಗಿ ಶ್ರೀಮತಿ ಯಶೋದಾ, ಕಾರ್ಯದರ್ಶಿಯಾಗಿ ಶ್ರೀಮತಿ ಶಶಿಕಲಾ, ಕೋಶಾಧಿಕಾರಿಯಾಗಿ ಶ್ರೀಮತಿ ಪ್ರಮೀಳಾ ಆಯ್ಕೆಯಾದರು. ವೇದಿಕೆಯಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ನಿರ್ದೇಶಕರಾದ ಗುರುರಾಜ್ ಗುರಿಪಳ್ಳ, ಯುವವಾಹಿನಿ ಸಂಚಾಲನ ಸಮಿತಿ ಗುರಿಪಳ್ಳ ಇದರ ಅಧ್ಯಕ್ಷರಾದ ಜಯರಾಮ್ ಕೊಡೆಕ್ಕಲ್ ಉಪಸ್ಥಿತರಿದ್ದರು.
ಸಭೆಯಲ್ಲಿ ಸ್ವಸಹಾಯ ಸಂಘದ ಸದಸ್ಯರಾದ ಬೇಬಿ ಉಮೇಶ್, ಸುನೀತ, ಮೋಹಿನಿ, ವಿನೋದ, ಸಾನ್ವಿ, ಹರ್ಷಿತಾ, ಜಯಂತಿ, ಹಾಗೂ ಸಮಾಜ ಬಾಂಧವರಾದ ಸುಂದರ ಪೂಜಾರಿ, ಸುರೇಶ್ ಪೂಜಾರಿ, ಶೇಖರ ಪೂಜಾರಿ ಹಾಗೂ ಆನಂದ ಪೂಜಾರಿ ಭಾಗವಹಿಸಿದ್ದರು.