23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ:ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ: ರೂ. 123 ಕೋಟಿ ವ್ಯವಹಾರ, ರೂ. 50 ಲಕ್ಷ ಲಾಭ, ಶೇ.12 ಡಿವಿಡೆಂಡ್

ಬೆಳ್ತಂಗಡಿ: ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ ಸೆ.23ರಂದು ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ವಠಾರದಲ್ಲಿ ಸಂಘದ ಉಪಾಧ್ಯಕ್ಷ ಗಂಗಾಧರ ಮಿತ್ತಮಾರ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.

ವರದಿ ಸಾಲಿನಲ್ಲಿ ಸಂಘವು ರೂ. 123 ಕೋಟಿ ವ್ಯವಹಾರ ನಡೆಸಿ, ರೂ. 50 ಲಕ್ಷ ಲಾಭ ಗಳಿಸಿದೆ., ಶೇ.12 ಡಿವಿಡೆಂಡ್ ಘೋಷಣೆ ಮಾಡಿದರು.

ವರದಿ ಹಾಗೂ ಲೆಕ್ಕಪತ್ರಗಳನ್ನು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರದೀಪ್ ಕುಮಾರ್ ಮಂಡಿಸಿದರು.
ಅತೀ ಹೆಚ್ಚು ನಿತ್ಯ ನಿಧಿ ಸಂಗ್ರಹಣೆ ಮಾಡಿದ ಚರಣ್ ಕುಮಾರ್, ರಾಜೇಶ್.ಬಿ, ಪ್ರಶಾಂತ್ ಇವರಿಗೆ ಬಹುಮಾನ ನೀಡಲಾಯಿತು.

ಈ ಸಂದರ್ಭದಲ್ಲಿ ಉಷಾ ಶರತ್, ಜೆಸಿಂತಾ ಮೋನಿಸ್, ಉಮೇಶ್ ಎಂ.ಬಿ, ಸಿಬ್ಬಂದಿಗಳಾದ ಸುಷ್ಮಾ ಆರ್., ಚೈತ್ರ, ಯುವರಾಜ್, ಮನೋಜ್ ಕುಮಾರ್, ಶ್ರವಣ್ ಕುಮಾರ್ ಉಪಸ್ಥಿತರಿದ್ದರು. ಸಿಬ್ಬಂದಿ ರಮ್ಯ, ಶಾರದಾ ಮತ್ತು ಅನುಶ್ರೀ ಪ್ರಾರ್ಥನೆ ಮಾಡಿದರು.ಸಿಬ್ಬಂದಿ ಜನಿಶ್.ಜೆ ನಿರೂಪಿಸಿದರು.ಸಂಘದ ನಿರ್ದೇಶಕ ರಾಮಚಂದ್ರ ಗೌಡ ಸ್ವಾಗತಿಸಿ, ಮೋಹನ್ ಶೆಟ್ಟಿಗಾರ್ ಧನ್ಯವಾದವಿತ್ತರು.

Related posts

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ನಡ ಕನ್ಯಾಡಿ ಅಯುಷ್ಮಾನ್ ಆರೋಗ್ಯ ಕೇಂದ್ರ ದಾರಿದೀಪ ವ್ಯವಸ್ಥೆ ಹಾಗೂ ಹೈ ಮಾಸ್ಕ್ ದೀಪ ಅಳವಡಿಕೆ: ರಕ್ಷಿತ್ ಶಿವರಾಂ

Suddi Udaya

ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಹತ್ಯಡ್ಕ ಪರಿಸರದಲ್ಲಿ ಮರಗಳ ಮಾರಣ ಹೋಮ-ಸಚಿವರಿಗೆ ದೂರು

Suddi Udaya

ರೆಖ್ಯಕ್ಕೆ ಸಂಸದ ಕ್ಯಾ| ಬ್ರಿಜೇಶ್ ಚೌಟ ಭೇಟಿ: ವಿವಿಧ ಕಾಮಗಾರಿಗಳ ಪರಿಶೀಲನೆ

Suddi Udaya

ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಾಲೋಚನಾ ಸಭೆ

Suddi Udaya

ಮಚ್ಚಿನ ಮೂಲ್ಯರ ಯಾನೆ ಕುಂಬಾರರ ಮಹಿಳಾ ಸಂಘದಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ: ‘ಶ್ರೀರಾಮದರ್ಶನ’ ಯಕ್ಷಗಾನ ತಾಳಮದ್ದಳೆ

Suddi Udaya
error: Content is protected !!