30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅ.2: ನಾಗರಿಕ ಅಭಿನಂದನಾ ಸಮಿತಿ ವತಿಯಿಂದ ನಿವೃತ್ತ ಯೋಧ ಮಂಜುನಾಥ ಹಾಗೂ ಕರ್ನಾಟಕ ರಾಜ್ಯದ ಅತ್ಯುತ್ತಮ ಶಿಕ್ಷಕ ಪುರಸ್ಕೃತ ವಿ.ಕೆ. ವಿಟ್ಲ ರವರಿಗೆ ನಾಗರಿಕ ಅಭಿನಂದನಾ ಸಮಾರಂಭ

ಬೆಳ್ತಂಗಡಿ : ಭಾರತೀಯ ಭೂಸೇನೆಯಲ್ಲಿ ಸುದೀರ್ಘ 24 ವರ್ಷ ಭಾರತ ಮಾತೆಯ ಸೇವೆಗೈದು ವೃತ್ತಿಯಿಂದ ನಿವೃತ್ತಿ ಹೊಂದಿ ತಾಯ್ನಾಡಿಗೆ ಆಗಮಿಸುತ್ತಿರುವ ನಮ್ಮೂರ ಹೆಮ್ಮೆಯ ಯೋಧ ಮಂಜುನಾಥರವರಿಗೆ ಹಾಗೂ ನಮ್ಮೂರ ಪ್ರೌಢಶಾಲೆ ಗುರುವಾಯನಕೆರೆಯ ಚಿತ್ರಕಲಾ ಶಿಕ್ಷಕ, “ಕರ್ನಾಟಕ ರಾಜ್ಯದ ಅತ್ಯುತ್ತಮ ಶಿಕ್ಷಕ” ಪ್ರಶಸ್ತಿಯನ್ನು ಪಡೆದ ವಿಶ್ವನಾಥ ಗೌಡ (ವಿ.ಕೆ. ವಿಟ್ಲ)ರವರಿಗೆ ನಾಗರಿಕ ಅಭಿನಂದನಾ ಸಮಿತಿಯಿಂದ ಅ.2ರಂದು ಬೆಳಿಗ್ಗೆ 10 ಗಂಟೆಗೆ ಕುವೆಟ್ಟು ಹಾಗೂ ಓಡಿಲ್ನಾಳ ಗ್ರಾಮದ 35 ಸಂಘ ಸಂಸ್ಥೆಗಳು ಒಟ್ಟು ಸೇರಿ ಅಭಿನಂದನಾ ಸಮಾರಂಭ ನಡೆಯಲಿದೆ ಎಂದು ಸುವರ್ಣ ಪ್ರತಿಷ್ಠಾನದ ಅಧ್ಯಕ್ಷರು, ನಾಗರಿಕ ಅಭಿನಂದನಾ ಸಮಿತಿ ಅಧ್ಯಕ್ಷ ಸಂಪತ್ ಬಿ ಸುವರ್ಣ ರವರು ಹೇಳಿದರು.

ಅವರು ಸೆ.24 ರಂದು ಬೆಳ್ತಂಗಡಿ ಸುವರ್ಣ ಆರ್ಕೇಡ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನೂ ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಬರೋಡ ತುಳುಕೂಟದ ಅಧ್ಯಕ್ಷ ಶಶಿಧರ ಬಿ. ಶೆಟ್ಟಿ ವಹಿಸಲಿದ್ದು, ಅಂಕಣಕಾರರಾದ ಆದರ್ಶ್ ಗೋಖಲೆ ಅಭಿನಂದನಾ ಭಾಷಣವನ್ನು ಮಾಡಲಿದ್ದಾರೆ . ಬೆಳಿಗ್ಗೆ 9ಗಂಟೆಗೆ ಸರಿಯಾಗಿ ಲಾಯಿಲ ಶ್ರೀ ವೆಂಕಟರಮಣ ದೇವಸ್ಥಾನದಿಂದ ಕಿನ್ನಿಗೋಳಿಯ ವರೆಗೆ ಯೋಧರರಾದ ಮಂಜುನಾಥ್ ರವರನ್ನು ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಿದೆ. ವಿ.ಕೆ. ವಿಟ್ಲ ರವರನ್ನು ಗುರುವಾಯನಕೆರೆಯಲ್ಲಿ ಸ್ವಾಗತಿಸಿಲಿದೆ. 10ಗಂಟೆಗೆ ಮದ್ದಡ್ಕ-ಕಿನ್ನಿಗೋಳಿಯಿಂದ ಭವ್ಯ ಮೆರವಣಿಗೆಯಲ್ಲಿ ಕಾಲ್ನಡಿಗೆಯ ಮೂಲಕ “ಸೈನಿಕ-ಶಿಕ್ಷಕ”ರನ್ನು ಸಭಾಂಗಣಕ್ಕೆ ಕರೆತಂದು ನಂತರ ವೈಯಕ್ತಿಕ ಹಾಗೂ ಸಂಘ-ಸಂಸ್ಥೆಗಳಿಗೆ ಅಭಿನಂದನೆ ಕಾರ್ಯಕ್ರಮ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರು, ನಾಗರಿಕ ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಕೆ. ಪ್ರಭಾಕರ ಬಂಗೇರ, ನಿವೃತ್ತ ಯೋಧರು, ಗೌರವ ಸಲಹೆಗಾರರಾದ ಟಿ. ರಾಮ್ ಭಟ್, ಅಶ್ರಫ್ ಚಿಲಿಂಬಿ ಉಪಸ್ಥಿತರಿದ್ದರು.

ಪ್ರಧಾನ ಸಂಚಾಲಕ ಪ್ರಭಾಕರ ಶೆಟ್ಟಿ ಉಪ್ಪಡ್ಕ ಸ್ವಾಗತಿಸಿ ಧನ್ಯವಾದವಿತ್ತರು.

Related posts

ಬಂಗೇರರು ಕೊನೆಯ ಬಾರಿ ವಿಧಾನಸೌಧಕ್ಕೆ ಭೇಟಿ ನೀಡಿ ಶಿಫಾರಸ್ಸು ಮಾಡಿದ ವೇಣೂರು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘಕ್ಕೆ ಜಮೀನು ಮಂಜೂರು ಮಾಡಿ ಗೌರವ ನೀಡಿದ ಮುಖ್ಯಮಂತ್ರಿಗಳು

Suddi Udaya

ಸೌಜನ್ಯ ಸಾವು ಪ್ರಕರಣ: ಸರಕಾರ ಹಾಗೂ ತನಿಖಾ ಸಂಸ್ಥೆ ಸೂಕ್ತ ನ್ಯಾಯ ಒದಗಿಸಲಿ: ಡಾ. ಹೆಗ್ಗಡೆ

Suddi Udaya

ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿನ ಡಯಾಲಿಸಿಸ್ ಕೇಂದ್ರದ ನ್ಯೂನತೆಗಳನ್ನು ಸರಿಪಡಿಸುವಂತೆ ಉಸ್ತುವಾರಿ ಸಚಿವರಿಗೆ ಕೆ.ವಸಂತ ಬಂಗೇರ ಮನವಿ

Suddi Udaya

ನೆರಿಯದ ಯುವತಿ ಮಂಗಳೂರಿನಲ್ಲಿ ಆತ್ಮಹತ್ಯೆ

Suddi Udaya

ಕಳೆಂಜ ಗ್ರಾಮದ ಕರ್ಮಾಜೆಯಲ್ಲಿ ಕಾಳಿಂಗ ಸರ್ಪ ಪತ್ತೆ

Suddi Udaya

ವಾಣಿ ಪ.ಪೂ. ಕಾಲೇಜಿನ ರಿತ್ವಿಕ್ ಶೆಟ್ಟಿ ಏಕಪಾತ್ರ ಅಭಿನಯದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya
error: Content is protected !!