ಉಜಿರೆ: ದೊಂಪದಪಲ್ಕೆ ಸ.ಹಿ.ಪ್ರಾ. ಶಾಲೆಯಲ್ಲಿ ಎಸ್.ಡಿ.ಎಮ್.ಸಿ ರಚನೆ

Suddi Udaya

ಉಜಿರೆ : ಇಲ್ಲಿಯ ದೊಂಪದಪಲ್ಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಇತ್ತೀಚೆಗೆ ಹೊಸ ಎಸ್.ಡಿ.ಎಮ್.ಸಿ ರಚಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಶಶಿಕಲಾ ಹಾಗೂ ಸಿಆರ್‌ಪಿ ಶ್ರೀಮತಿ ಪ್ರತಿಮಾ ಉಪಸ್ಥಿತರಿದ್ದರು. ಸಿ ಆರ್ ಪಿ ಶ್ರೀಮತಿ ಪ್ರತಿಮಾ ಸರಕಾರಿ ಶಾಲೆಗಳಲ್ಲಿ ಎಸ್ ಡಿ ಎಂ ಸಿ ಯ ಮಹತ್ವ ಹಾಗೂ ಸದಸ್ಯರ ಕರ್ತವ್ಯಗಳ ಬಗ್ಗೆ ತಿಳಿಸಿದರು.

ನಂತರ ನೂತನ ಅಧ್ಯಕ್ಷರಾಗಿ ದಾಮೋದರ್ , ಉಪಾಧ್ಯಕ್ಷರಾಗಿ ಶ್ರೀಮತಿ ರಮ್ಯ ಸರ್ವಾನುಮತದಿಂದ ಆಯ್ಕೆಯಾದರು. ಉಳಿದಂತೆ ಸದಸ್ಯರುಗಳಾಗಿ ಸರಿತಾ, ಗೀತಾ, ವಸಂತಿ ರೇಖಾ, ವಿದ್ಯಾ ಲೀಲಾವತಿ, ಸಾವಿತ್ರಿ, ರತ್ನಾವತಿ, ಶೇಖ‌ರ್, ಶೀನಾ, ವೇಣುಗೋಪಾಲ್, ಹೇಮಂತ್ ಪ್ರಭು, ಉಮೇಶ್ ಗೌಡ, ಸುರೇಶ್, ಉಮೇಶ್, ಹರೀಶ್ ಪೂಜಾರಿ ಆಯ್ಕೆ ಮಾಡಲಾಯಿತು.

ಗ್ರಾಮ ಪಂಚಾಯತ್‌ ಸದಸ್ಯರಾದ ಶ್ರೀಮತಿ ಶಶಿಕಲಾ ಅವರು ಶಾಲೆಯ ಏಳಿಗೆಗೆ ಸದಾ ಶ್ರಮಿಸುವುದಾಗಿ ಭರವಸೆ ನೀಡಿದರು..ಎಸ್ ಡಿ ಎಂ ಸಿ ಅಧ್ಯಕ್ಷ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕರಾದ ಸುರೇಶ್ ಆಚಾರ್ ಸ್ವಾಗತಿಸಿದರು. ಶಿಕ್ಷಕಿ ಸೌಮ್ಯ ನಾಯಕ್ ವಂದಿಸಿದರು.

Leave a Comment

error: Content is protected !!