ನಿಡ್ಲೆ: ಬರೆಂಗಾಯ ಶಾಲಾ ಅಮೃತ ಮಹೋತ್ಸವದ ಪೂರ್ವಭಾವಿ ಸಭೆಯು ಸೆ.22 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ಶಾಲಾ ಅಮೃತ ಮಹೋತ್ಸವವನ್ನು ಡಿಸೆಂಬರ್ 27 ಹಾಗೂ 28ರಂದು ನಡೆಸುವುದಾಗಿ ತೀರ್ಮಾನಿಸಲಾಯಿತು. ಈ ವೇಳೆ ಅಮೃತ ಮಹೋತ್ಸವಕ್ಕೆ ಲಕ್ಷ್ಮಿ ದೇವಧರ್ ಮತ್ತು ಮಕ್ಕಳು ಮೊಳಂಪಾಯ ರೂ. 1 ಲಕ್ಷ ನೀಡಿ ಸಹಕರಿಸಿದರು. ಅಮೃತ ಮಹೋತ್ಸವದ ಒಂದು ದಿನದ ಊಟದ ವ್ಯವಸ್ಥೆಯನ್ನು ಊರಿನ ಹಿರಿಯರಾದ ಹೊನ್ನಪ್ಪ ಗೌಡ ಮೇರ್ಲ ಇವರು ನೀಡುವ ಭರವಸೆಯನ್ನು ನೀಡಿದರು. ವಿವಿಧ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ವೇದಿಕೆಯಲ್ಲಿ ಅಮೃತ ಮಹೋತ್ಸವ ಸಮಿತಿಯ ಶಿವರಾಮ್ ರಾವ್ ಕೊಡಂಗೆ ಉದ್ಯಮಿಗಳು ಬೆಂಗಳೂರು, ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಹೆಬ್ಬಾರ್, ಶಾಲಾ ಮುಖ್ಯೋಪಾಧ್ಯಾಯ ಗೋಪಾಲ್, ಎಸ್ ಡಿ ಎಮ್ ಸಿ ಅಧ್ಯಕ್ಷ ರುಕ್ಮಯ್ಯ ಪೂಜಾರಿ ಪೋರ್ಕಳ , ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವರಂಜನ್ , ಅಮೃತ ಮಹೋತ್ಸವದ ಕೋಶಾಧಿಕಾರಿ ಕೃಷ್ಣ ಕುಮಾರ್ ಕಾಟ್ಲ, ಬರೆಂಗಾಯ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಗೌಡ ಕಜೆ, ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ ಅಧ್ಯಕ್ಷ ಹೇಮಂತ ಗೌಡ ಕಜೆ, ನಿಸರ್ಗ ಯುವಜನೇತರ ಮಂಡಲ ಬರೆಂಗಾಯ ಇದರ ಅಧ್ಯಕ್ಷ ಪುನೀತ್ ಕುಮಾರ್, ಎಸ್ ಡಿ ಎಂ ಸಿ ಯ ಸರ್ವ ಸದಸ್ಯರು ಹಾಗೂ ಶಿಕ್ಷಕ ವೃಂದದವರು, ಹಳೆ ವಿದ್ಯಾರ್ಥಿಗಳು, ವಿವಿಧ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.