September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ: ದೊಂಪದಪಲ್ಕೆ ಸ.ಹಿ.ಪ್ರಾ. ಶಾಲೆಯಲ್ಲಿ ಎಸ್.ಡಿ.ಎಮ್.ಸಿ ರಚನೆ

ಉಜಿರೆ : ಇಲ್ಲಿಯ ದೊಂಪದಪಲ್ಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಇತ್ತೀಚೆಗೆ ಹೊಸ ಎಸ್.ಡಿ.ಎಮ್.ಸಿ ರಚಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಶಶಿಕಲಾ ಹಾಗೂ ಸಿಆರ್‌ಪಿ ಶ್ರೀಮತಿ ಪ್ರತಿಮಾ ಉಪಸ್ಥಿತರಿದ್ದರು. ಸಿ ಆರ್ ಪಿ ಶ್ರೀಮತಿ ಪ್ರತಿಮಾ ಸರಕಾರಿ ಶಾಲೆಗಳಲ್ಲಿ ಎಸ್ ಡಿ ಎಂ ಸಿ ಯ ಮಹತ್ವ ಹಾಗೂ ಸದಸ್ಯರ ಕರ್ತವ್ಯಗಳ ಬಗ್ಗೆ ತಿಳಿಸಿದರು.

ನಂತರ ನೂತನ ಅಧ್ಯಕ್ಷರಾಗಿ ದಾಮೋದರ್ , ಉಪಾಧ್ಯಕ್ಷರಾಗಿ ಶ್ರೀಮತಿ ರಮ್ಯ ಸರ್ವಾನುಮತದಿಂದ ಆಯ್ಕೆಯಾದರು. ಉಳಿದಂತೆ ಸದಸ್ಯರುಗಳಾಗಿ ಸರಿತಾ, ಗೀತಾ, ವಸಂತಿ ರೇಖಾ, ವಿದ್ಯಾ ಲೀಲಾವತಿ, ಸಾವಿತ್ರಿ, ರತ್ನಾವತಿ, ಶೇಖ‌ರ್, ಶೀನಾ, ವೇಣುಗೋಪಾಲ್, ಹೇಮಂತ್ ಪ್ರಭು, ಉಮೇಶ್ ಗೌಡ, ಸುರೇಶ್, ಉಮೇಶ್, ಹರೀಶ್ ಪೂಜಾರಿ ಆಯ್ಕೆ ಮಾಡಲಾಯಿತು.

ಗ್ರಾಮ ಪಂಚಾಯತ್‌ ಸದಸ್ಯರಾದ ಶ್ರೀಮತಿ ಶಶಿಕಲಾ ಅವರು ಶಾಲೆಯ ಏಳಿಗೆಗೆ ಸದಾ ಶ್ರಮಿಸುವುದಾಗಿ ಭರವಸೆ ನೀಡಿದರು..ಎಸ್ ಡಿ ಎಂ ಸಿ ಅಧ್ಯಕ್ಷ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕರಾದ ಸುರೇಶ್ ಆಚಾರ್ ಸ್ವಾಗತಿಸಿದರು. ಶಿಕ್ಷಕಿ ಸೌಮ್ಯ ನಾಯಕ್ ವಂದಿಸಿದರು.

Related posts

ಬೆಳ್ತಂಗಡಿ: ಶ್ರೀ ಧ.ಮಂ.ಆಂ.ಮಾ. ಶಾಲೆಯ ವಿದ್ಯಾರ್ಥಿಗಳಿಗೆ ಕುಷ್ಟರೋಗದ ನಿರ್ಮೂಲನೆ , ಕುಷ್ಟ ರೋಗವನ್ನು ಪತ್ತೆ ಹಚ್ಚುವ ಜಾಗೃತಿಯ ಬಗ್ಗೆ ಮಾಹಿತಿ ಕಾರ್ಯಾಗಾರ

Suddi Udaya

ಎಸ್‌ಡಿಎಂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಮೇಳೈಸಿದ ಕೆಸರುಗದ್ದೆ ಕ್ರೀಡಾಕೂಟ

Suddi Udaya

ಮುಂಡಾಜೆ ಗ್ರಾ.ಪಂ. ನಲ್ಲಿ ಬುಡಕಟ್ಟು ಸಮುದಾಯಗಳಿಗೆ ಸರ್ಕಾರದ ಮೂಲಭೂತ ದಾಖಲೆಗಳ ನೋಂದಣಿ ಮಹಾ ಅಭಿಯಾನ

Suddi Udaya

ಡಿ.14: ಅನಾರು ಹಾ.ಉ.ಸ. ಸಂಘದ ನೂತನ ಕಟ್ಟಡ “ಕ್ಷೀರ ವಾರಿಧಿಯ” ಉದ್ಘಾಟನೆ

Suddi Udaya

ಮಡಂತ್ಯಾರು ಸಹಕಾರಿ ಸಂಘಕ್ಕೆ ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಪ್ರೋತ್ಸಾಹಕ ಪ್ರಶಸ್ತಿ

Suddi Udaya

‘ಮಕ್ಕಳಿಗೆ ಓದುವುದು ಎಷ್ಟು ಮಹತ್ವ’ ವಿಷಯದ ಕುರಿತು ಪದ್ಮಲತಾ ಮೋಹನ್ ನಿಡ್ಲೆಯವರಿಂದ ಉಪನ್ಯಾಸ

Suddi Udaya
error: Content is protected !!