April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಹಳ್ಳಿಂಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆ

ಹಳ್ಳಿಂಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯು ಸೆ. 24 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಭವನದಲ್ಲಿ ನೆರವೇರಿತು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಶ್ರೀಮತಿ ಶ್ವೇತಾ ಹೆಚ್ ಕೆ ವಹಿಸಿದ್ದರು.


ಸಂಘವು ಸದರಿ ಸಾಲಿನಲ್ಲಿ 2.2 ಲಕ್ಷ ಲೀಟರ್ ಹಾಲು ಸಂಗ್ರಹಿಸಿದ್ದು ಸಂಘವು ಒಟ್ಟು 129072 ರೂ.ಗಳ ನಿವ್ವಳ ಲಾಭವನ್ನು ಗಳಿಸಿದೆ. ದಕ್ಷಿಣ ಕನ್ನಡ ಹಾಲು ಒಕ್ಕೂಟ ಶಿಬಿರ ಕಛೇರಿ, ಬೆಳ್ತಂಗಡಿಯ ವಿಸ್ತರಣಾಧಿಕಾರಿ ರಾಜೇಶ್ ಪಿ ಕೆ ಮಾಹಿತಿ ನೀಡಿದರು. ಕಾರ್ಯದರ್ಶಿ ಶ್ರೀಮತಿ ಸಂಧ್ಯಾ ವರದಿ ವಾಚಿಸಿದರು.

ಸಂಘದ ನಿರ್ದೇಶಕಿ ಶ್ರೀಮತಿ ಸುಂದರಿ ಸ್ವಾಗತಿಸಿದರು. ಉಪಾಧ್ಯಕ್ಷೆ ಶ್ರೀಮತಿ ಹೇಮಾವತಿ ವಂದಿಸಿದರು. ಶ್ರೀಮತಿ ದಿವ್ಯ ಪ್ರಾರ್ಥಿಸಿದರು. ಸಂಘದ ನಿರ್ದೇಶಕರು ಉಪಸ್ಥಿತರಿದ್ದು, ಹಾಲು ಪರೀಕ್ಷಕಿ ಶ್ರೀಮತಿ ವೇದಾವತಿ ಸಹಕರಿಸಿದರು.

Related posts

ವಿಟಿಯುಗೆ 9ನೇ ರ್‍ಯಾಂಕ್ ಗಳಿಸಿದ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ಹಳೇ ವಿದ್ಯಾರ್ಥಿನಿಗೆ ಸನ್ಮಾನ

Suddi Udaya

ಬಂಗಾಡಿ ಕೊಲ್ಲಿಯಲ್ಲಿ ಯುವ ನಾಯಕ ರಂಜನ್ ಜಿ ಗೌಡರವರ ಸಾರಥ್ಯದಲ್ಲಿ 26ನೇ ವರ್ಷದ ಹೊನಲು ಬೆಳಕಿನ ಸೂರ್ಯ-ಚಂದ್ರ ಜೋಡುಕರೆ ಕಂಬಳ ಉದ್ಘಾಟನೆ

Suddi Udaya

ಬೆದ್ರಬೆಟ್ಟು ಉದ್ಯಮಿ ಹಮೀದ್ ನಿಧನ

Suddi Udaya

ಮಡಂತ್ಯಾರು ರಚನಾ ಸಿಲ್ಕ್ ನಲ್ಲಿ ಶೇ. 10-50 ಆಷಾಢ ಡಿಸ್ಕೌಂಟ್ ಸೇಲ್

Suddi Udaya

ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಗೆ ಅಂತರಾಷ್ಟ್ರೀಯ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಗೌರವ

Suddi Udaya

ಮಚ್ಚಿನ ಸರಕಾರಿ ಪ್ರೌಢ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ವಿಶೇಷ ತರಗತಿಯ ಸಮಾರೋಪ ಕಾರ್ಯಕ್ರಮ

Suddi Udaya
error: Content is protected !!