September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ದಿನಾಚರಣೆ

ಉಜಿರೆ: ಗ್ರಾಮಸ್ವರಾಜ್ಯ ಹಾಗೂ ರಾಮ ರಾಜ್ಯದ ಕನಸು ಕಂಡ ಗಾಂಧೀಜಿಯವರು ಯುವಕರಲ್ಲಿ ಸೇವಾ ಮನೋಭಾವನೆ ಮೊದಲು ಬೆಳೆಯಬೇಕು ಎಂದು ಮನ ಮಾಡಿದರು. ಮುಂದೆ ಇವರ ಜನ್ಮ ಶತಾಬ್ದಿಯ ಸಂದರ್ಭದಲ್ಲಿ ಪ್ರಾರಂಭಗೊಂಡದ್ದೆ ಈ ರಾಷ್ಟ್ರೀಯ ಸೇವಾ ಯೋಜನೆ. ವ್ಯಕ್ತಿತ್ವ ವಿಕಸನ, ಶಿಸ್ತು, ಸಮಯಪಾಲನೆ, ಸಹಬಾಳ್ವೆ ಇತ್ಯಾದಿಗಳನ್ನು ಕಲಿತುಕೊಳ್ಳಲು ಇದು ಉತ್ತಮ ವೇದಿಕೆಯಾಗಿದೆ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದ ಡೀನ್ ಪ್ರೊ. ವಿಶ್ವನಾಥ ಪಿ. ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ದಿನಾಚರಣೆಯ ಅಂಗವಾಗಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರಮೋದ್ ಕುಮಾರ್ ಅವರು ಗೊತ್ತು ಗುರಿ ಇಲ್ಲದ ಯುವ ಜನತೆಗೆ ಸರಿಯಾದ ಮಾರ್ಗದರ್ಶನ ನೀಡಲು ಇರುವ ಯೋಜನೆಯೇ ಈ ರಾಷ್ಟ್ರೀಯ ಸೇವಾ ಯೋಜನೆಯಾಗಿದೆ ಗ್ರಾಮೀಣ ಜೀವನದ ಪರಿಚಯವಾಗಬೇಕಾದರೆ ಇಂತಹ ಪ್ರಕಲ್ಪಗಳಲ್ಲಿ ಯುವಕರು ತೊಡಗಿಸಿ ಕೊಳ್ಳಬೇಕೆಂದು ಕರೆ ನೀಡಿದರು.

ಪ್ರಾಪ್ತಿ ಅವರು ರಾಷ್ಟ್ರೀಯ ಸೇವಾ ಯೋಜನೆಯ ಪರಿಚಯಾತ್ಮಕ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ನೂತನವಾದ ಸೂಚನಾ ಫಲಕವನ್ನು ಅನಾವರಣಗೊಳಿಸಲಾಯಿತು ಹಾಗೂ ರಾಷ್ಟ್ರೀಯ ಭಾವೈಕ್ಯತೆ ಶಿಬಿರದಲ್ಲಿ ಪಾಲ್ಗೊಂಡ ಸ್ವಯಂಸೇವಕಿ ಹರ್ಷಿತಾ ಅವರನ್ನು ಸನ್ಮಾನಿಸಲಾಯಿತು.

ರಾ.ಸೇ ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ , ಘಟಕದ ನಾಯಕರಾದ ಆದಿತ್ಯ ವಿ. , ಪ್ರಾಪ್ತಿ ಗೌಡ ಉಪಸ್ಥಿತರಿದ್ದರು.

ಆದಿ ಸ್ವಾಗತಿಸಿ , ಯಕ್ಷಿತ್ ವಂದಿಸಿದರು. ಕಾರ್ಯದರ್ಶಿ ಐಶ್ವರ್ಯ ನಿರೂಪಿಸಿದರು. ಸ್ವಯಂ ಸೇವಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Related posts

ಬುರುಡೆ ಚಿನ್ನಯ್ಯನಿಂದ ಎಸ್ಐಟಿ ಗೆ ದೂರು

Suddi Udaya

ಬೆಳ್ತಂಗಡಿ: ಅಪ್ಸರಾ ಫ್ಯಾಶನ್ ಸೆಂಟರ್‌ನಲ್ಲಿ ಮನ್ಸೂನ್ ಆಫರ್; ವಿಶೇಷ ಡಿಸ್ಕೌಂಟ್ ಸೇಲ್

Suddi Udaya

ಶಿಕ್ಷಣ ಸಂಯೋಜಕರಾಗಿ ಎಡ್ವರ್ಡ್ ಡಿಸೋಜ ಆಯ್ಕೆ

Suddi Udaya

ಬೆಳ್ತಂಗಡಿ-ಹೆಬೆಬೈಲ್ ರಸ್ತೆಯಲ್ಲಿ ಅಪಾಯದ ಸ್ಥಿತಿಯಲ್ಲಿ ತಡೆಗೋಡೆ ಹಾಗೂ ವಿದ್ಯುತ್ ಕಂಬ

Suddi Udaya

ಚಾರ್ಮಾಡಿ: ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಹೋಮಕುಂಡದ ಭೂಮಿ ಪೂಜೆ

Suddi Udaya

ಬೆಳ್ತಂಗಡಿ ಸುದ್ದಿ ಉದಯ ವಾರಪತ್ರಿಕೆ ಆಯೋಜಿಸಿದ ಬೆಳಕಿನ ಉದಯ ದೀಪಾವಳಿ ವಿಶೇಷಾಂಕದ ಅದೃಷ್ಟ ಕೂಪನ್ ಡ್ರಾ ವಿಜೇತರು

Suddi Udaya
error: Content is protected !!