25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆಯ ಎಸ್‌ಡಿಎಂ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವತಿಯಿಂದ “ಸಿನರ್ಜಿ” ವಿಭಾಗ ವಿದ್ಯಾರ್ಥಿ ವೇದಿಕೆಯ ಉದ್ಘಾಟನಾ ಕಾರ್ಯಕ್ರಮ

ಉಜಿರೆ: ಉಜಿರೆಯ ಎಸ್‌ಡಿಎಂ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವತಿಯಿಂದ ಸೆಪ್ಟೆಂಬರ್ 24 ರಂದು “ಸಿನರ್ಜಿ” ವಿಭಾಗ ವಿದ್ಯಾರ್ಥಿ ವೇದಿಕೆಯ ಉದ್ಘಾಟನಾ ಕಾರ್ಯಕ್ರಮವು ನೆರವೇರಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಬಿ. ಎ. ಕುಮಾರ ಹೆಗ್ಡೆ “ಜೀವನದಲ್ಲಿ ಕೌಶಲ್ಯಗಳು ಬಹಳ ಪ್ರಮುಖ ಪಾತ್ರ ವಹಿಸುತ್ತವೆ.
ಜೀವನ ಕೌಶಲ್ಯವು ಬಹಳ ಮುಖ್ಯ, ಇದು ವಿದ್ಯಾರ್ಥಿಗಳಿಗೆ ಅರ್ಹ ಸಮಾಜ ಸೇವಕರಾಗಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುತ್ತದೆ. ಇದು ಅತ್ಯುತ್ತಮ ಉದ್ಯೋಗ ನಿರೀಕ್ಷೆಗಳು ಮತ್ತು ಗಳಿಕೆಯ ಸಾಮರ್ಥ್ಯದೊಂದಿಗೆ ಹೆಚ್ಚು ಬೇಡಿಕೆಯಿರುವ ವೃತ್ತಿಯಾಗಿದೆ ಎಂದು ಹೇಳಿದರು.


ನಂತರ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಲಾಯಿತು ಮತ್ತು ಸಿನರ್ಜಿ ವೇದಿಕೆಯ ಉಪಾಧ್ಯಕ್ಷರು 2024-25 ಶೈಕ್ಷಣಿಕ ವರ್ಷದ ಕ್ರಿಯಾ ಯೋಜನೆಯನ್ನು ಓದಿದರು. ಈ ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ.ರವಿಶಂಕರ್ ಕೆಆರ್, ವಿದ್ಯಾರ್ಥಿ ವೇದಿಕೆ ಸಿನರ್ಜಿಯ ನಿರ್ದೇಶಕಿ ಡಾ. ಅಕ್ಷತಾ ಕೆ ಮತ್ತು ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.

ಉದ್ಘಾಟನಾ ಕಾರ್ಯಕ್ರಮದ ನಂತರ “ಉದ್ಯಮಶೀಲತೆ ಮತ್ತು ಸುಸ್ಥಿರ ಅಭಿವೃದ್ಧಿಯ” ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಪೇಪರ್ ಸೀಡ್‌ನ ಉದ್ಯಮ ಸಂಸ್ಥಾಪಕರಾದ ನಿತಿನ್ ವಾಸ್ ಅವರು ಮಾತನಾಡುತ್ತ ಮಂಗಳೂರಿನ ಪೇಪರ್ ಸೀಡ್ ಕಂಪನಿಯು ಪ್ರಾರಂಭದಲ್ಲಿ ಕಸದ ಕಾಗದವನ್ನು ಮರುಬಳಕೆ ಮಾಡಿ, ಅದನ್ನು ಕೈಯಿಂದ ಮಾಡಿದ ಕಾಗದವಾಗಿ ಪರಿವರ್ತಿಸಿ, ಅದನ್ನು ಮರವಾಗಿ ಬೆಳೆಯುವಂತೆ ಮಾಡುವ ಮೂಲಕ ಹೆಚ್ಚಿನ ಮರಗಳನ್ನು ಕಡಿಯುವುದನ್ನು ತಪ್ಪಿಸಿತು. ಇದು ತಮ್ಮ ಸಂಸ್ಥೆಯ ಸಾಧನೆ ಎಂದು ತಿಳಿಸಿದರು. ಪೇಪರ್ ಸೀಡ್ ಕುರಿತು ಹಲವು ಮಾಹಿತಿಗಳನ್ನು ನೀಡಿದ ಅವರು, ಪ್ಲಾಸ್ಟಿಕ್ ಬಳಕೆಯನ್ನು ಯಾವ ರೀತಿ ಕಡಿಮೆ ಮಾಡಬಹುದು ಎಂಬುದರ ಕುರಿತು ಸಲಹೆಗಳನ್ನು ನೀಡಿದರು.

ವಿದ್ಯಾರ್ಥಿನಿಯರಾದ ಚೈತ್ರ ಸ್ವಾಗತಿಸಿದರು. ಸಮೀಕ್ಷಾ ವಂದನಾರ್ಪಣೆಗೈದರು. ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.

Related posts

ಕರುಣಾಶ್ರಯ ಸೇವಾ ಟ್ರಸ್ಟ್‌ನಿಂದ ವಾರದ ಒಂದು ದಿನದ ಸೇವಾ ಕಾರ್ಯಕ್ರಮ: ಗುಂಡೂರಿ ಶ್ರೀ ಗುರು ಚೈತನ್ಯ ಸೇವಾಶ್ರಮಕ್ಕೆ ದಿನಸಿ ಸಾಮಾಗ್ರಿ ವಿತರಣೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ (ದುರ್ಗಾದೇವಿ) ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ: ಧಾರ್ಮಿಕ ಸಭೆ

Suddi Udaya

22ನೇ ಮಹಿಳಾ ಆಲ್ ಇಂಡಿಯಾ ಇಂಟರ್ ಝೋನಲ್ ನೆಟ್ಬಾಲ್ ಪಂದ್ಯಾಟ: ಎಸ್ ಡಿ ಎಂ ಕಾಲೇಜಿನ 2 ಕ್ರೀಡಾಪಟುಗಳಿಗೆ ಬೆಳ್ಳಿ ಪದಕ

Suddi Udaya

ಅನಾರು ಹಾ.ಉ.ಸ. ಸಂಘದ ನೂತನ ಕಟ್ಟಡ “ಕ್ಷೀರ ವಾರಿಧಿಯ” ಉದ್ಘಾಟನೆ

Suddi Udaya

ಮದ್ದಡ್ಕ ಕಿನ್ನಿಗೋಳಿ ಬಳಿ ನೇಣು ಬಿಗಿದ ಸ್ಥಿತಿಯಲ್ಲಿಮಹಿಳೆ ಶವಪತ್ತೆ

Suddi Udaya

ಉಜಿರೆ ರತ್ನಮಾನಸ ವಸತಿ ನಿಲಯದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ

Suddi Udaya
error: Content is protected !!