ಪಡಂಗಡಿ:ಶ್ರೀ ಕ್ಷೇ.ಧ.ಗ್ರಾ. ಯೋಜನೆ ಬಿ.ಸಿ ಟ್ರಸ್ಟ್ ಗುರುವಾಯನಕರೆ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ತಾಲೂಕು ಮಟ್ಟದ ಪದಾಧಿಕಾರಿಗಳ ಸಮಾವೇಶ

Suddi Udaya

ಪಡಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಗುರುವಾಯನಕರೆ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ತಾಲೂಕು ಮಟ್ಟದ ಪದಾಧಿಕಾರಿಗಳ ಸಮಾವೇಶ ಸಮಾರಂಭವು ಪಡಂಗಡಿ ಪ್ರಾ‌.ಕೃ.ಪ.ಸಹಕಾರ ಸಂಘದ ಸಮೃದ್ದಿ ಸಭಾಭವನದಲ್ಲಿ ಸೆ‌ 27ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಯೋಜನೆಯ ಉಡುಪಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ದುಗ್ಗೇ ಗೌಡ ದೀಪ ಬೆಳಗಿಸಿ ಶುಭ ಕೋರಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಅಧ್ಯಕ್ಷ ಸದಾನಂದ ಬಂಗೇರ ವಹಿಸಿದ್ದರು.

ಬೆಳ್ತಂಗಡಿ ಎಸ್.ಬಿ.ಐ ಬ್ಯಾಂಕ್ ನ ಶಾಖಾ ವ್ಯವಸ್ಥಾಪಕರಾದ ಪದ್ಮನಾಭ ನಾಯಕ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಬ್ಯಾಂಕ್ ವ್ಯವಹಾರದ ಬಗ್ಗೆ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್,ಬಿ.ಸಿ ವಿಭಾಗದ ಕೇಂದ್ರ ಕಚೇರಿ ನಿರ್ದೇಶಕ ಪ್ರವೀಣ್ ಎಂ.ಸಿ,ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಯೋಗೀಶ್ ಕಡ್ತಿಲ,ವೇಣೂರು ವಲಯ ಜನಜಾಗೃತಿ ವಲಯಾಧ್ಯಕ್ಷ ಮೋಹನ ಅಂಡಿಂಜೆ, ಎಸ್.ಕೆ.ಡಿ.ಆರ್.ಡಿ.ಪಿ, ಎಂ.ಐ.ಎಸ್.ಯೋಜನಾಧಿಕಾರಿ ಪ್ರೇಮನಾಥ,ಯೋಜನಾಧಿಕಾರಿ ದಯಾನಂದ ಪೂಜಾರಿ ಪಿ, ಒಕ್ಕೂಟದ ವಲಯಾಧ್ಯಕ್ಷರಾದ ಮೋಹನ್ ಆಚಾರ್ಯ ಪಡಂಗಡಿ,ರಾಜಶೇಖರ್ ತಣ್ಣಿರುಪಂಥ,ಗೀರೀಶ್ ವೇಣೂರು,ಶೇಖರ್ ಹೆಗ್ಡೆ ನಾರಾವಿ, ಜಯ ಪೂಜಾರಿ ಮಡಂತ್ಯಾರು ಉಪಸ್ಥಿತರಿದ್ದರು.

ಶ್ರೀ.ಕ್ಷೇ.ಧ.ಗ್ರಾ.ಯೋ ಬಿಸಿ ಟ್ರಸ್ಟ್ ಗುರುವಾಯನಕೆರೆ ಯೋಜನಾಧಿಕಾರಿ ದಯಾನಂದ ಪೂಜಾರಿ ಪಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.ಕಣಿಯೂರು ವಲಯ ಮೇಲ್ವಿಚಾರಕ ಶಿವಾನಂದ ಕಾರ್ಯಕ್ರಮ ನಿರೂಪಿಸಿದರು.ನೀಡಿದರು.ಮಡಂತ್ಯಾರು ವಲಯ ಮೇಲ್ವಿಚಾರಕ ವಸಂತ್ ವಂದಿಸಿದರು.

ಎಲ್ಲರ ಗಮನ ಸೆಳೆದ ಬಿದಿರಿನ ಅಲಂಕಾರ

ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ತಾಲೂಕು ಮಟ್ಟದ ಪದಾಧಿಕಾರಿಗಳ ಸಮಾವೇಶ ಸಮಾರಂಭದ ಸಭಾವೇದಿಕೆಯನ್ನು ಪಡಂಗಡಿ ಮತ್ತು ಕನ್ನಡಿಕಟ್ಟೆ ಒಕ್ಕೂಟದವರು ಸಂಪೂರ್ಣ ಬಿದಿರಿನ ಅಲಂಕಾರದಿಂದ ನಿರ್ಮಾಣ ಮಾಡಿದ್ದು ಸಭಿಕರ ಗಮನ ಸಳೆಯಿತು. ಹಿಂದಿನ ಕಾಲದಲ್ಲಿ ಬಿದಿರನ್ನು ಫರ್ನಿಚರ್ ಹಾಗೂ ಮನೆಯ ಅಲಂಕಾರಕ್ಕೆ ಬಳಸುತ್ತಿದ್ದು,ಇಂದು ಮತ್ತೆ ಟ್ರೆಂಡ್‌ ಆಗಿದೆ.ಕಾರ್ಯಕ್ರಮದಲ್ಲಿ ಸಭಾಭವನ ಹೊಸ ಲುಕ್‌ ನೊಂದಿಗೆ ವಿಭಿನ್ನವಾಗಿ ಕಾಣಿಸುತಿತ್ತು.

Leave a Comment

error: Content is protected !!