25.3 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಬೆಳ್ತಂಗಡಿ ವಕೀಲರ ಸಂಘದ ವಾರ್ಷಿಕ ಮಹಾಸಭೆ

ಬೆಳ್ತಂಗಡಿ : ಬೆಳ್ತಂಗಡಿ ವಕೀಲರ ಸಂಘದ ವಾರ್ಷಿಕ ಮಹಾಸಭೆಯು ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷರಾದ ವಸಂತ ಮರಕಡ ಇವರ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿಯ ಶ್ರೀ ಮಂಜುನಾಥ ಸ್ವಾಮಿ ಕಲಾಭವನದ ಸಭಾಭವನದಲ್ಲಿ ಸೆ.27ರಂದು ಜರಗಿತು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಅಶೋಕ್ ಕರಿಯನೆಲ ಎಲ್ಲರನ್ನು ಸ್ವಾಗತಿಸಿದರು. ಸಭೆಯಲ್ಲಿ ವಾರ್ಷಿಕ ವರದಿ ವಾಚನವನ್ನು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಯಾದ ನವೀನ್ ಬಿ.ಕೆ ವಾಚಿಸಿದರು. ಲೆಕ್ಕಪತ್ರವನ್ನು ವಕೀಲರ ಸಂಘದ ಕೋಶಾಧಿಕಾರಿಯಾದ ಪ್ರಶಾಂತ್ ಎಂ ಮಂಡಿಸಿದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ವಿವಿಧ ಕಾರ್ಯಕ್ರಮಗಳಲ್ಲಿ ಭೋಜನದ ವ್ಯವಸ್ಥೆಯನ್ನು ಏರ್ಪಡಿಸಿದ್ದ ಸಂಘದ ಸದಸ್ಯರಾದ ಶಶಿಕಿರಣ್ ಜೈನ್, ಶ್ರೀನಿವಾಸ ಗೌಡ ಬೆಳಾಲು ಮತ್ತು ಗಣೇಶ್ ಗೌಡ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಮಹಾಸಭೆಯಲ್ಲಿ ಅಧ್ಯಕ್ಷೀಯ ನೆಲೆಯಲ್ಲಿ ಸಂಘದ ಅಧ್ಯಕ್ಷರಾದ ವಸಂತ ಮರಕಡ ಅಧ್ಯಕ್ಷೀಯ ಭಾಷಣ ನೆರವೇರಿಸಿದರು.
ವೇದಿಕೆಯಲ್ಲಿ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಹಿರಿಯ ವಕೀಲರ ಸಮಿತಿಯ ಅಧ್ಯಕ್ಷ ಅಲೋಸಿಯಸ್ ಎಸ್ ಲೋಬೊ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರೂಪಣೆಯನ್ನು ವಕೀಲರಾದ ಉದಯ ಕುಮಾರ್ ಬಿ.ಕೆ ನಡೆಸಿಕೊಟ್ಟರು. ಕಾರ್ಯಕ್ರಮದ ಭೋಜನದ ವ್ಯವಸ್ಥೆಯನ್ನು ಶ್ರೀನಿವಾಸ್ ಗೌಡ ಬೆಳಾಲು ಮಾಡಿರುತ್ತಾರೆ. ಸಂಘದ ಪ್ರಧಾನ ಕಾರ್ಯದರ್ಶಿಯಾದ ನವೀನ್ ಬಿ.ಕೆ ಧನ್ಯವಾದ ಸಮರ್ಪಿಸಿದರು.

Related posts

ಮುಂಡಾಜೆ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ತ್ರೈಮಾಸಿಕ ಸಭೆ

Suddi Udaya

ಹಿರಿಯ ಕಾಂಗ್ರೆಸ್ ಮುಖಂಡ ಲಿಂಗಪ್ಪ ಗೌಡ ನಿಧನ

Suddi Udaya

ಲಾಯಿಲ: ಸಂವಿಧಾನ ಜಾಗೃತಿ ಜಾಥ

Suddi Udaya

ಸುಲ್ಕೇರಿ ಗ್ರಾ.ಪಂ. ಅಧ್ಯಕ್ಷರಾಗಿ ಗಿರಿಜಾ ನಾವರ, ಉಪಾಧ್ಯಕ್ಷರಾಗಿ ಶುಭಕರ ಪೂಜಾರಿ

Suddi Udaya

ಜ್ವರದಿಂದ ಬಳಲಿ ಗಂಡಿಬಾಗಿಲಿನ ಯುವತಿ ಸಾವು

Suddi Udaya

ಧರ್ಮಸ್ಥಳ: ದೊಂಡೋಲೆ ಪರಶುರಾಮ ದೇವಸ್ಥಾನಕ್ಕೆ ಮುಖ್ಯಮಂತ್ರಿಯವರ ಕಾರ್ಯದರ್ಶಿ ಗೋಪಾಲ್ ಪಿ. ಎ ಭೇಟಿ

Suddi Udaya
error: Content is protected !!