April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬಂದಾರುವಿನಲ್ಲಿ ಸರಿಯಾಗಿ ಬಸ್ಸು ವ್ಯವಸ್ಥೆಯಿಲ್ಲದೆ ಪ್ರಯಾಣಿಕರ ಪರದಾಟ: ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಂತೆ ಸ್ಥಳೀಯರ ಮನವಿ

ಬಂದಾರು: ಶಾಲಾ ಮಕ್ಕಳು, ಕೆಲಸಕ್ಕೆ ತೆರಲುವ ಪ್ರಯಾಣಿಕರು ಸರಿಯಾಗಿ ಕೆ.ಎಸ್.ಆರ್.ಟಿ.ಸಿ ಬಸ್ಸು ವ್ಯವಸ್ಥೆ ಇಲ್ಲದೆ ಬಂದಾರುವಿನಲ್ಲಿ ಬೆಳಿಗ್ಗೆ ಹೊತ್ತಿನಲ್ಲಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಬಂದಾರು ಪಂಚಾಯತ್ ಬಳಿಯಿಂದ ಬೆಳಗ್ಗೆ 7.00 ಗಂಟೆಗೆ ಬೈಪಾಡಿ – ಕೊಯ್ಯೂರು – ಬೆಳ್ತಂಗಡಿ ಗೆ ತೆರಳುವ ಕೆ.ಎಸ್.ಆರ್.ಟಿ.ಸಿ ಬಸ್ ಒಂದು ದಿನ ಬರುತ್ತೆ ಇನ್ನೋಂದು ದಿನ ಇರೋದಿಲ್ಲ. ಕೊಯ್ಯೂರು ಪಿಜಕ್ಕಳ ಬಳಿ ಗೇರ್ ಸಮಸ್ಯೆ ಯಿಂದ ಬಾಕಿಯಾಗೋದು ಇದು ಮಾಮೂಲು ಆಗಿದೆ.

ಸಂಜೆ 4.15 ಗಂಟೆಗೆ ಬೆಳ್ತಂಗಡಿಯಿಂದ , ಕೊಯ್ಯುರು, ಬೈಪಾಡಿ ಮಾರ್ಗವಾಗಿ ಬಂದಾರು ಪಂಚಾಯತ್ ಬಳಿಗೆ ಬಂದು ತಿರುಗಿ ವಾಪಾಸ್ ಆಗುತ್ತದೆ. ಆದ್ರೆ ಕೆಲವೊಂದು ದಿನದ ಸಂಚಾರಕ್ಕೆ ಯೋಗ್ಯವಿಲ್ಲದ ಬಸ್ ಕಳುಹಿಸಿ ಶಾಲಾ ಮಕ್ಕಳನ್ನು ಬೈಪಾಡಿ ಬಳಿ ಹಾಗೂ ಬಂದಾರು ಮಿಲ್ಕ್ ಡೈರಿ ಇಳಿಸಿ ಹೋಗ್ತಾರೆ ಕೇಳಿದ್ರೆ ಅಲ್ಲಿ ಹೋಗೋಕೆ ಆಗಲ್ಲ ಅಂತ ಹೇಳ್ತಾರೆ ಉತ್ತರ ನೀಡುತ್ತಾರೆ.

ಸಂಜೆ ಕಾಂತಾಜೆ ಕೊಯ್ಯುರು ಬಳಿ ಬಸ್ ಮುಂದೆ ಚಳಿಸದೇ ಮಕ್ಕಳಲ್ಲೆ ದುಡಿಸಿದ ಪ್ರಸಂಗ ನಡೆದಿದೆ. ಎಷ್ಟು ದೂಡಿದ್ರು ಬಸ್ ಮುಂದೆ ಸಾಗಲ್ಲ ಕೊನೆಗೆ ಅಲ್ಲೇ ಜಖಂ ಆಗುತ್ತೆ, ಅದ್ರಲ್ಲೇ ಬoದಿರುವ ಮಕ್ಕಳ ಕಥೆ ಅಯೋಮಯವಾಗುತ್ತದೆ.

ಇತ್ತೀಚಿಗೆ ಕೊಯ್ಯುರು ಕಾಲೇಜು ಬಳಿ ಬಸ್ ನ ಗೇರ್ ಬೀಳೋದಿಲ್ಲ ಅಂತ ಹೇಳಿ ಬೈಪಾಡಿ ತನಕ ಬಸ್ ಬಂದು ಅಲ್ಲೇ ಮಕ್ಕಳನ್ನು ಇಳಿಸಿ ಹೋಗಿದ್ದಾರೆ .ಶಾಲಾ, ಕಾಲೇಜು, ವಿದ್ಯಾರ್ಥಿಗಳು, ಉದ್ಯೋಗ ಕ್ಕೆ ತೆರಳುವವರು, ಪ್ರಯಾಣಿಕರ ಸಮಸ್ಯೆಗೆ ಇತ್ಯರ್ಥ ಯಾವಾಗ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related posts

ಪಟ್ರಮೆ: ಪಾದೆಯಲ್ಲಿ ಮನೆಯ ಹಿಂಭಾಗ ಸಂಪೂರ್ಣ ಹಾನಿಯಾಗಿದ್ದು ಬಿಜೆಪಿ ಬೆಳ್ತಂಗಡಿ ಮಂಡಲ ವತಿಯಿಂದ ಭೇಟಿ, ಪರಿಶೀಲನೆ

Suddi Udaya

ಕಲ್ಮಂಜ ಪ್ರೌಢಶಾಲಾ ವಿದ್ಯಾರ್ಥಿಗಳು ಯೋಗಾಸನದಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ಮುಳಿಯ ಜುವೆಲ್ಸ್ ನಲ್ಲಿ “ಕನ್ನಡ ಬದುಕು ಬಂಗಾರ” ಕಾರ್ಯಕ್ರಮ

Suddi Udaya

ಬೆಳ್ತಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕಿ ಜಿ. ಶೀಲಾವತಿ ಅವರಿಗೆ ಪಿಎಚ್. ಡಿ. ಪದವಿ

Suddi Udaya

ಕಕ್ಕಿಂಜೆಯಲ್ಲಿ ಶಾಸಕ ಹರೀಶ್ ಪೂಂಜರಿಂದ ಮತಯಾಚನೆ

Suddi Udaya

ಶ್ರೀ ಧ.ಮಂ ಪ.ಪೂ ಕಾಲೇಜು: ರಾ. ಸೇ. ಯೋಜನೆಯ ನೂತನ ಸಲಹಾ ಸಮಿತಿ ರಚನೆ

Suddi Udaya
error: Content is protected !!