April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಮಂಗಳೂರಿನಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಕ್ಷೇತ್ರಾಡಳಿತ ಸಮಿತಿ ಸಭೆ

ಮಂಗಳೂರು: ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಅಭಿವೃದ್ಧಿಯ ಬಗ್ಗೆ ಕ್ಷೇತ್ರಾಡಳಿತ ಸಮಿತಿಯ ಸಭೆಯು ಇತ್ತೀಚೆಗೆ ಕಂಕನಾಡಿ ಬ್ರಹ್ಮಬೈದರ್ಕಳ ಗರಡಿಯಲ್ಲಿ ಜರಗಿತು.

ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಪೀತಾಂಬರ ಹೆರಾಜೆಯವರು ವಹಿಸಿದ್ದರು. ಶ್ರೀ ಕ್ಷೇತ್ರದ ಧಾರ್ಮಿಕ ವಿಧಿವಿಧಾನಗಳ ಬಗ್ಗೆ ಮತ್ತು ಕ್ಷೇತ್ರದ ಗೆಜ್ಜೆಗಿರಿ ಮೇಳ ದ ಬಗ್ಗೆ ವಿವರವಾಗಿ ಚರ್ಚಿಸಲಾಯಿತು. ಗೆಜ್ಜೆಗಿರಿ ಮೇಳದ ಬುಕ್ಕಿಂಗ್ ಉತ್ತಮ ರೀತಿಯಲ್ಲಿ ನಡೆಯುತ್ತಿರುವ ಬಗ್ಗೆ ಸಭೆಯಲ್ಲಿ ಸಂತಸ ವ್ಯಕ್ತಪಡಿಸಲಾಯಿತು. ನವ್ರರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ಕಂಕನಾಡಿ ಗರಡಿಯ ಅಧ್ಯಕ್ಷರಾದ ಚಿತ್ತರಂಜನ್ ಕಂಕನಾಡಿ ಸೂಕ್ತ ಸಲಹೆಗಳನ್ನು ನೀಡಿದರು. ಕ್ಷೇತ್ರಾಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಪ್ರಸ್ತಾವನೆ ಸಲ್ಲಿಸಿದರು, ಕೋಶಾಧಿಕಾರಿ ದೀಪಕ್ ಕೋಟ್ಯಾನ್ ಲೆಕ್ಕಪತ್ರ ಮಂಡಿಸಿದರು.

ಸಭೆಯಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಜಯಂತ ನಡುಬೈಲ್, ಉಪಾಧ್ಯಕ್ಷರಾದ ರವಿಪೂಜಾರಿ ಚಿಲಿಂಬಿ, ಕಳೆದ ವರ್ಷದ ಜಾತ್ರೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಟ್ರಸ್ಟಿ ಶೈಲೇಂದ್ರ ಸುವರ್ಣ, ಮೇಳದ ಸಂಚಾಲಕರು ಹಾಗೂ ಟ್ರಸ್ಟಿ ನವೀನ್ ಸುವರ್ಣ ಸಜಿಪ, ಜೊತೆ ಕಾರ್ಯದರ್ಶಿಗಳಾದ ಚಂದ್ರಶೇಖರ್ ಉಚ್ಚಿಲ್ ಮತ್ತು ಮೋಹನ್ ದಾಸ್ ವಾಮಂಜೂರು, ಕ್ಷೇತ್ರದ ತಂತ್ರಿ ಶಿವಾನಂದ ಶಾಂತಿ, ಟ್ರಸ್ಟಿ ಶ್ರೀಮತಿ ಸುಜೀತ ವಿ ಬಂಗೇರ, ಶ್ರೀಮತಿ ಜೀವಿತ ಸುವರ್ಣ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ, ಜಯರಾಮ್ ಬಂಗೇರ, ಕ್ಷೇತ್ರದ ಮಾಧ್ಯಮ ವಕ್ತಾರ ರಾಜೇಂದ್ರ ಚಿಲಿಂಬಿ ಮುಂತಾದವರು ಉಪಸ್ಥಿತರಿದ್ದರು.

Related posts

ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಟ್ರಸ್ಟ್ ಸಭೆ

Suddi Udaya

ಎ.ಆರ್.ಎಂ ಮೋಟಾರ್ಸ್ ನಲ್ಲಿ ಕಿಯಾ ಕಂಪನಿಯ ‘ನ್ಯೂ ಸೆಲ್ಟೋಸ್’ ಕಾರು ಬಿಡುಗಡೆ

Suddi Udaya

ಇಂಟರ್ನ್ಯಾಷನಲ್ ಓಪನ್ ಫಿಡೆ ರೇಟೆಡ್ ಪಂದ್ಯಾಟ : ಬೆಸ್ಟ್ ಅನ್‌ರೇಟೆಡ್ ವಿಭಾಗದಲ್ಲಿ ಕೊಕ್ಕಡದ ಸಮರ್ಥ್ ಭಟ್ ತೃತೀಯ

Suddi Udaya

ಕನ್ಯಾಡಿ ll ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

Suddi Udaya

ಎರಡು ವರ್ಷಗಳ ಹಿಂದೆ ನಡೆದಿದ್ದ ಮನೆ ಕಳವು ಪ್ರಕರಣ ಭೇದಿಸಿದ ಬೆಳ್ಳಾರೆ ಪೊಲೀಸರು: ಆರೋಪಿ ನೆರಿಯದ ಶರತ್ ಬಂಧನ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಉಜಿರೆಯ ಕೂಸಪ್ಪರವರಿಗೆ ವಾತ್ಸಲ್ಯ ಮನೆ ಹಸ್ತಾಂತರ

Suddi Udaya
error: Content is protected !!