24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಹತ್ಯಡ್ಕ : ಶ್ರೀ ವಿಠೋಬ ರಕುಮಾಯಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶೃಂಗೇರಿಯ ಜಗದ್ಗುರು ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರಿಂದ ರೂ.5 ಲಕ್ಷ ದೇಣಿಗೆ

ಹತ್ಯಡ್ಕ : ಶ್ರೀ ವಿಠೋಬ ರಕುಮಾಯೀ ದೇವಸ್ಥಾನ, ಅಂಬರಕಾಪು, ಹತ್ಯಡ್ಕ ಗ್ರಾಮ ಇದರ ಜೀರ್ಣೋದ್ಧಾರಕ್ಕಾಗಿ ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನಂ, ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಹಾಗೂ ತತ್ಕರಕಮಲಸಂಜಾತರಾದ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾ ಸನ್ನಿಧಾನಂಗಳವರು ಆಶೀರ್ವಾದ ಪೂರ್ವಕವಾಗಿ ರೂ. ಐದು ಲಕ್ಷದ ಮೊತ್ತವನ್ನು ನೀಡಿದ್ದಾರೆ.

ಬೆಳ್ತಂಗಡಿ ತಾಲೂಕು ಹತ್ಯಡ್ಕ ಗ್ರಾಮದ ನೆಕ್ಕರಡ್ಕ ಅಂಬರಕಾಪು ಎಂಬಲ್ಲಿ ಸುಮಾರು ಮುನ್ನೂರು ವರ್ಷ ಹಳೆಯ ಶ್ರೀ ವಿಠೋಬ ರಕುಮಾಯಿ ದೇವಸ್ಥಾನವು ಇದೀಗ ಜೀರ್ಣೋದ್ಧಾರಗೊಳ್ಳುತ್ತಿದೆ. ನೆಕ್ಕರಡ್ಕದ ಗೋಖಲೆ ಕುಟುಂಬಸ್ಥರು ಈ ದೇವಸ್ಥಾನವನ್ನು ಸ್ಥಾಪಿಸಿ, ಇಂದಿನವರೆಗೂ ಮೊಕ್ತೇಸರಿಕೆಯನ್ನು ನಡೆಸಿಕೊಂಡು ಬಂದಿದ್ದಾರೆ. ಇದೀಗ ದೇಗುಲವು ಜೀರ್ಣಾವಸ್ಥೆಗೆ ತಲುಪಿದ್ದು ಜೀರ್ಣೋದ್ಧಾರದ ಕಾರ್ಯಗಳು ಪ್ರಾರಂಭವಾಗಿವೆ.‌ ಈ ಸಂದರ್ಭದಲ್ಲಿ ಶೃಂಗೇರಿಯ ಜಗದ್ಗುರುಗಳಲ್ಲಿ ಶುಭಾಶೀರ್ವಾದದ ಜೊತೆಗೆ ಧನ ಸಹಾಯವನ್ನು ಯಾಚಿಸಿದ ಹಿನ್ನೆಲೆಯಲ್ಲಿ ಜಗದ್ಗುರುಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಆಶೀರ್ಮಂತ್ರಾಕ್ಷತೆಯ ಜೊತೆಗೆ ರೂ. ಐದು ಲಕ್ಷದ ಚೆಕ್ ಅನ್ನು ದೇವಸ್ಥಾನದ ಸಮಿತಿಗೆ ಕಳುಹಿಸಿದ್ದಾರೆ.

Related posts

ನಡ: ಪಣಿಕ್ಕಲ ನಿವಾಸಿ ಧರ್ಣಪ್ಪ ಪೂಜಾರಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಪದ್ಮುಂಜ: 12 ಗಂಟೆಗಳ ಮ್ಯಾರಥಾನ್ ಯೋಗ ತರಬೇತಿ ಶಿಬಿರ ಉದ್ಘಾಟನೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಕರಾಟೆ ತರಬೇತಿ

Suddi Udaya

ಬೆಳ್ತಂಗಡಿ ಪವರ್ ಆನ್ ಸಂಸ್ಥೆಯ ಲಕ್ಕಿ ಸ್ಟಾರ್ ಯೋಜನೆಯಲ್ಲಿ‌ ಅದೃಷ್ಟಶಾಲಿಗೆ ಒಳಿಯಿತು ಪ್ರಿಡ್ಜ್

Suddi Udaya

ಕಡಿರುದ್ಯಾವರ ಜೋಡು ನೆರೋಳು ಮಥಾಯಿ ಪಣಕಾಟು ಪರಂಬಿಲಿ ನಿಧನ

Suddi Udaya

ಕುಂಟಾಲಪಲ್ಕೆ‌ ಶಾಲೆಗೆ ನೂತನ ಧ್ವಜಸ್ತಂಭ ಕೊಡುಗೆ

Suddi Udaya
error: Content is protected !!