ಎಸ್ ಡಿ ಎಮ್ ಪಾಲಿಟೆಕ್ನಿಕ್ ಗೆ ರಾಜ್ಯಮಟ್ಟದ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ

Suddi Udaya

ಬೆಳ್ತಂಗಡಿ: ಮಂಗಳೂರಿನ ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್ ನಲ್ಲಿ ಜರುಗಿದ ನಾಲ್ಕನೇ ಐ ಎಸ್ ಟಿ ಇ ರಾಜ್ಯಮಟ್ಟದ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಸಮಾವೇಶ-2024 ಇದರಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ಉಜಿರೆಯ ಎಸ್ ಡಿ ಎಮ್ ಪಾಲಿಟೆಕ್ನಿಕ್ ಕಾಲೇಜು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗ ಈ ಎರಡು ವಿಭಾಗಗಳಲ್ಲಿ ಪ್ರತ್ಯೇಕವಾಗಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ .


ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಮಲ್ಟಿಪರ್ಪಸ್ ಅಗ್ರಿ ಟ್ರಾಲಿಯನ್ನು ವಿನ್ಯಾಸಗೊಳಿಸಲಾಗಿದೆ. ಆಧುನಿಕ ಕೃಷಿ ಪದ್ಧತಿಗೆ ಅನುಕೂಲವಾಗುವಲ್ಲಿ ಇದು ಸಹಕಾರಿಯಾಗಿದೆ. ಈ ಟ್ರಾಲಿಯನ್ನು ಬೈಕ್ ಮತ್ತು ಓಮಿನಿ ಬಿಡಿಭಾಗಗಳನ್ನು ಬಳಸಿ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳಾದ ಸುಮಂತ್ ಎಸ್ ಕೋಟೆ, ಮನ್ವಿತ್ , ಎ ಅಮೀನ್ ಅಹ್ಮದ್ , ಚೇತನ್ ಎಂ , ಗುರುರಾಜ್ ಕೆ ಮತ್ತು ವಿನಯ್ ಬಿ ಪಿ ಈ ಪ್ರಾಜೆಕ್ಟ್ ತಂಡದ ಸದಸ್ಯರಾಗಿದ್ದಾರೆ.


ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ ವಿಭಾಗವು ಎಂ ಕ್ಯಾಮ್ ( ಸ್ಮಾರ್ಟ್ ಸೆಕ್ಯೂರಿಟಿ ಕ್ಯಾಮೆರಾ ) ಎಂಬ ಪ್ರಬಂಧ ಪ್ರಸ್ತುತಪಡಿಸಿದ್ದು, ಈ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಲಭಿಸಿದೆ. ಅಭಿಷೇಕ್ ಪ್ರಶಾಂತ್ ಮತ್ತು ರವಿಶಂಕರ್ ಪಾಟೀಲ್ ಈ ತಂಡದ ಸದಸ್ಯರಾಗಿದ್ದಾರೆ. ಇವರಿಗೆ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ , ವ್ಯವಸ್ಥಾಪಕ ಚಂದ್ರನಾಥ್ ಜೈನ್, ವಿಭಾಗ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು ಶುಭ ಹಾರೈಸಿದ್ದಾರೆ.

Leave a Comment

error: Content is protected !!