ಬಳಂಜ: ಉದ್ಯಮಿ, ಕೃಷಿಕ ರಾಕೇಶ್ ಹೆಗ್ಡೆಯವರ ಇಕೋಫ್ರೆಶ್ ಫಾರ್ಮ್ ನಲ್ಲಿ ಬೆಳೆದ ಪ್ರಥಮ ಬೆಳೆ: ಡ್ರ್ಯಾಗನ್ ಫ್ರೂಟ್ ನ್ನು ಬಳಂಜ ಶಾಲಾ ವಿದ್ಯಾರ್ಥಿಗಳಿಗೆ ವಿತರಣೆ, ಫ್ರೂಟ್ ಸವಿದು ಸಂಭ್ರಮಿಸಿದ ವಿದ್ಯಾರ್ಥಿಗಳು

Suddi Udaya

ಬಳಂಜ: ಬಳಂಜ ಶಾಲಾ ಹಳೆ ವಿದ್ಯಾರ್ಥಿ, ಉದ್ಯಮಿ,ಅಳದಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ರಾಕೇಶ್ ಹೆಗ್ಡೆಯವರು ಅವರ ಇಕೋ ಫ್ರೇಶ್ ಫಾರ್ಮ್ ನಲ್ಲಿ ಬೆಳೆದ ಡ್ರ್ಯಾಗನ್ ಫ್ರೂಟ್ ಪ್ರಥಮ ಬೆಳೆಯನ್ನು ಬಳಂಜ ಶಾಲಾ ಪ್ರತಿ ಮಕ್ಕಳಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ಹಿರಿಯರು ಊರಿನ ಪ್ರಮುಖರಾದ ಕೆ.ವಸಂತ ಸಾಲಿಯಾನ್, ಹೆಚ್.ಧರ್ಣಪ್ಪ ಪೂಜಾರಿ, ಬಳಂಜ ಶಾಲಾ ಶಿಕ್ಷಣ ಟ್ರಸ್ ಅಧ್ಯಕ್ಷ ಮನೋಹರ್ ಬಳಂಜ, ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಪಿಕೆ, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸುಜಯ,ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಅಕೀಲ್,ಕಾರ್ಯದರ್ಶಿ ನಿರಂಜನ್,ಬಳಂಜ ಶಾಲಾ ಮುಖ್ಯೋಪಾಧ್ಯಾಯರಾದ ಸಲೋಚನ, ರಂಗಸ್ವಾಮಿ, ಮಾಜಿ ಪ್ರಭಾರ ಮುಖ್ಯ ಶಿಕ್ಷಕ ವಿಲ್ಫ್ರೇಡ್ ಪಿಂಟೋ, ಎಸ್.ಡಿ.ಎಂ.ಸಿ ಅಧ್ಯಕ್ಷ ರತ್ನಾಕರ ಪೂಜಾರಿ, ಶಿಕ್ಷಣ ಟ್ರಸ್ ಪದಾಧಿಕಾರಿಗಳಾದ ಪ್ರಮೋದ್ ಕುಮಾರ್ ಜೈನ್,ಸಂತೋಷ್ ಕುಮಾರ್ ಕಾಪಿನಡ್ಕ, ರತ್ನರಾಜ್, ಪ್ರವೀಣ್ ಕುಮಾರ್ ಎಚ್‌ಎಸ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಉಪಸ್ಥಿತರಿದ್ದರು.

ಶಾಲಾ ಶಿಕ್ಷಕ ವೃಂದವರು, ಹಳೆ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು, ಊರವರು ಸಹಕರಿಸಿದರು.

Leave a Comment

error: Content is protected !!