ಬೆಳ್ತಂಗಡಿ: ಇಲ್ಲಿನ ಲಾಯಿಲ ಮತ್ತು ಮೇಲಂತಬೆಟ್ಟು ಗ್ರಾಮಗಳಲ್ಲಿ ಆರ್.ಪಿ.ಸಿ ವತಿಯಿಂದ ಮೂರು ದಿನಗಳ ಚಾರಿಟಿಯನ್ನು ಸೆ.26,27,28 ರಂದು ನಡೆಸಲಾಯಿತು.
ಸೆ.26 ರಂದು ಮೇಲಂತಬೆಟ್ಟು ಮತ್ತು ಲಾಯಿಲ ಗ್ರಾಮದಲ್ಲಿರುವ 50 ಕಡು ಬಡಕುಟುಂಬಗಳಿಗೆ 12 ಬಗೆಯ ಆಹಾರ ಧ್ಯಾನಗಳನ್ನು ವಿತರಿಸಲಾಯಿತು.
ಸೆ.27ರಂದು ಕರ್ನೊಡಿ, ಕನ್ನಾಜೆ ಮತ್ತು ಮೇಲಂಬೆಟ್ಟು ಅಂಗನವಾಡಿ ಕೇಂದ್ರದ ಮಕ್ಕಳಿಗೆ ಬ್ಯಾಗ್ ಮತ್ತು ಇನ್ನಿತರ ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಸೆ.28ರಂದು ಕರ್ನೋಡಿಯ ದ.ಕ ಜಿ.ಪಂ.ಉ.ಪ್ರಾ. ಶಾಲೆ ಕರ್ನೋಡಿ ಲಾಯಿಲ ಇಲ್ಲಿನ ಬಿಸಿಯೂಟ ತಯಾರಿಕ ಕಟ್ಟಡದ ಸೋರುತ್ತಿರುವ ಮೇಲ್ಛಾವಣಿಯನ್ನು ಸುಮಾರು ರೂ. 1ಲಕ್ಷ ವೆಚ್ಚದಲ್ಲಿ ಹೊಸ ಮೇಲ್ಛಾವಣಿಯನ್ನು ನಿರ್ಮಿಸಿ ಕೊಡಲಾಯಿತು.
ಕರ್ನೋಡಿ ಶಾಲೆಯ ಅಭಿವೃದ್ಧಿ ಕಾರ್ಯವನ್ನು ನಡೆಸುತ್ತಿರುವ ಹಳೆವಿದ್ಯಾರ್ಥಿ ಸಂಘದ ವತಿಯಿಂದ ಆರ್.ಪಿ.ಸಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಹಳೆವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಬಿ.ಕೆ ಧನಂಜಯ್ ರಾವ್, ಹಾಗೂ ಸಂಘದ ಸದಸ್ಯರು ಶಾಲಾ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.