24.6 C
ಪುತ್ತೂರು, ಬೆಳ್ತಂಗಡಿ
May 18, 2025
ಕರಾವಳಿ

ಮುಂಡಾಜೆ ಕಲ್ಲಾರ್ಯ ಗಣೇಶ ಪಟವರ್ಧನ್ ರವರ ಗದ್ದೆಯಲ್ಲಿ ಕೆಸರ್ ಡೊಂಜಿ ದಿನ ಕಾರ್ಯಕ್ರಮ

ಬೆಳ್ತಂಗಡಿ: ಮುಂಡಾಜೆ ಗ್ರಾಮದ ಕಲ್ಲಾರ್ಯ ಗಣೇಶ ಪಟವರ್ಧನ್ ರವರ ಗದ್ದೆಯಲ್ಲಿ ಪರಶುರಾಮ ಫ್ರೆಂಡ್ಸ್ ಮೂಲಾರು ವತಿಯಿಂದ ಕೆಸರ್ ಡೊಂಜಿ ದಿನ ಕಾರ್ಯಕ್ರಮ ಜರಗಿತು.

ಕೃಷಿಕ ಚಂದ್ರಹಾಸ ಪಟವರ್ಧನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ “ಗದ್ದೆಗಳು ನಶಿಸುತ್ತಿರುವ ಪ್ರಸ್ತುತ ಸಮಯದಲ್ಲಿ ಗದ್ದೆಗಳಲ್ಲಿ ಇಂತಹ ಕ್ರೀಡಾಕೂಟಗಳು ನಡೆಯುವುದರಿಂದ ಭತ್ತದ ಕೃಷಿಗೆ ಪ್ರೋತ್ಸಾಹ ದೊರೆಯುತ್ತದೆ. ಊರಿನ ಅಭಿವೃದ್ಧಿಯಲ್ಲಿ ಸಂಘಟನೆಗಳು ಪ್ರಮುಖ ಪಾತ್ರ ವಹಿಸುತ್ತವೆ” ಎಂದು ಹೇಳಿದರು.
ಪರಶುರಾಮ ಫ್ರೆಂಡ್ಸ್ ಅಧ್ಯಕ್ಷ ಕೃಷ್ಣಪ್ಪ, ಪತ್ರಕರ್ತ ಅರವಿಂದ ಹೆಬ್ಬಾರ್, ಅಂಜಲಿ ಪಟವರ್ಧನ್ ಮತ್ತಿತರರು ಉಪಸ್ಥಿತರಿದ್ದರು. ಚಂದ್ರಶೇಖರ ಮುಲಾರು ಸ್ವಾಗತಿಸಿ, ಕೇಶವ ಕಾರ್ಯಕ್ರಮ ನಿರೂಪಿಸಿದರು.
ಕೆಸರುಗದ್ದೆಯಲ್ಲಿ ಮಕ್ಕಳಿಗೆ, ಪುರುಷರಿಗೆ ಹಾಗೂ ಮಹಿಳೆಯರಿಗೆ ನಾನಾ ಆಟಗಳು ನಡೆದವು.

Related posts

ದಕ ಎಲ್ಲಾ ಶಾಲೆ, ಪಿಯು ಕಾಲೇಜ್ ಗಳಿಗೆ ರಜೆ

Suddi Udaya

ಬಾವಿ ಒಳಗೆ ನೀಲಿ ಬಣ್ಣ ನೀರು ಸುತ್ತಮುತ್ತ ಕೆಂಪು ನೀರು

Suddi Udaya

ಉಜಿರೆ: ಬೆನಕ ಆಸ್ಪತ್ರೆಯಲ್ಲಿ ನೂತನ “ವೆಂಟಿಲೇಟರ್” ಉದ್ಘಾಟನೆ

Suddi Udaya

ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕಕ್ಕೆರಾಜ್ಯ ಸದಸ್ಯೆಯಾಗಿ ಬರಹಗಾರ್ತಿ ಆಶಾ ಅಡೂರು, ಬೆಳ್ತಂಗಡಿ ನೇಮಕ .

Suddi Udaya

ಕಳುವಾದ ಮೊಬೈಲ್ ಫೋನ್ ಗಳನ್ನು 24 ಗಂಟೆಯಲ್ಲಿ ಶೀಘ್ರವಾಗಿ ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ ಪೊಲೀಸರು

Suddi Udaya

ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನಲ್ಲಿ ಆಟಿದ ಆಯನ ವಿಶೇಷ ಕಾರ್ಯಕ್ರಮ

Suddi Udaya
error: Content is protected !!