24.4 C
ಪುತ್ತೂರು, ಬೆಳ್ತಂಗಡಿ
April 4, 2025
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಮಸ್ಯೆ

ಉರುವಾಲು: ಮನೆಗೆ ಸಿಡಿಲು ಬಡಿದು ಅಪಾರ ಹಾನಿ: ಅದೃಷ್ಟವಶಾತ್ ಅಪಾಯದಿಂದ ಪಾರಾದ ಮನೆಯವರು

ಬೆಳ್ತಂಗಡಿ:ಮನೆಗೆ ಸಿಡಿಲು ಬಡಿದ ಪರಿಣಾಮ ಭಾರೀ ಹಾನಿಯಾದ ಘಟನೆ ಉರುವಾಲು ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ.

ಉರುವಾಲು ಗ್ರಾಮದ ತಾರಿದಡಿ ಸೇಸಪ್ಪ ಎಂಬವರ ಮನೆಗೆ ಸಂಜೆ ಸುಮಾರು ನಾಲ್ಕು ಗಂಟೆ ಸುಮಾರಿಗೆ ಸಿಡಿಲು ಬಡಿದಿದ್ದು ಪರಿಣಾಮ ಗೋಡೆ ಬಿರುಕು ಬಿಟ್ಟು ವಿದ್ಯುತ್ ಉಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಸೇಸಪ್ಪ ಅವರು ಸಂಜೆ ಸುಮಾರು 3.45 ರಿಂದ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ಈ ವೇಳೆ ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಬರಲು ಹೋಗಿದ್ದು ಮನೆಗೆ ಬಂದು ನೋಡಿದಾಗ ಸಿಡಿಲು ಬಡಿದು ವಿದ್ಯುತ್ ಉಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿದೆಯಲ್ಲದೇ ಗೋಡೆಯಿಂದ ಕಿತ್ತು ಬಂದಿದೆ. ಅಲ್ಲಲ್ಲಿ ಗೋಡೆ ಬಿರುಕು ಬಿಟ್ಟಿದೆ. ಶೌಚಾಲಯದ ಗೋಡೆ ಸಂಪೂರ್ಣ ಹಾನಿಗೊಳಗಾಗಿದೆ. ಅದೃಷ್ಟವಶಾತ್ ಮಕ್ಕಳನ್ನು ಕರೆ ತರಲು ನಾವು ಶಾಲೆಗೆ ಹೋಗಿದ್ದರಿಂದ ಮಕ್ಕಳಿಗೆ ಹಾಗೂ ನಮಗೆ ಏನು ತೊಂದರೆ ಅಗಿಲ್ಲ, ಸಿಡಿಲು ಬಡಿತದಿಂದ ಮನೆಗೆ ಸಂಪೂರ್ಣ ಹಾನಿಯಾಗಿದೆ.

ಈ ಬಗ್ಗೆ ಪಂಚಾಯತ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಅವರು ಸ್ಥಳಕ್ಕೆ ಬಂದು ಪರಿಶೀಲಿಸುವುದಾಗಿ ಹೇಳಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

Related posts

ಗುರುವಾಯನಕೆರೆ: ಅನಾರೋಗ್ಯದಿಂದ ಬಳಲುತ್ತಿರುವ ಆಟೋ ಚಾಲಕ ರಾಜೇಶ್ ಪೂಜಾರಿಯವರಿಗೆ ಕುವೆಟ್ಟು ಬಿಜೆಪಿ ಶಕ್ತಿ ಕೇಂದ್ರ ಹಾಗೂ ಸಾಯಿರಾಮ್ ಫ್ರೆಂಡ್ಸ್ ಶಕ್ತಿನಗರ ವತಿಯಿಂದ ರೂ. 25 ಸಾವಿರ ವೈದ್ಯಕೀಯ ನೆರವು ಹಸ್ತಾಂತರ

Suddi Udaya

ಬೆಳ್ತಂಗಡಿ: ಅಚ್ಚಿನಡ್ಕದಲ್ಲಿ ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ

Suddi Udaya

ಎಸ್.ಎಸ್.ಎಲ್.ಸಿ ಫಲಿತಾಂಶ: ಉಡುಪಿ, ದ.ಕ ಸಾಧನೆಗೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಶ್ಲಾಘನೆ

Suddi Udaya

ಕಲ್ಲುಂಜ ಪ್ರಗತಿಪರ ಕೃಷಿಕ, ನಾಟಿ ವೈದ್ಯ ಅಣ್ಣಿ ಶೆಟ್ಟಿ ನಿಧನ

Suddi Udaya

ಕಳೆಂಜ: ರಾಮಣ್ಣ ಗೌಡ ಬರೆಂಗಾಯ ನಿಧನ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯ ಹುಟ್ಟು ಹಬ್ಬ ಮತ್ತು ವಿಶ್ವ ಯುವ ಕೌಶಲ್ಯ ದಿನಾಚರಣೆ

Suddi Udaya
error: Content is protected !!