April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಸಂಘ-ಸಂಸ್ಥೆಗಳು

ಗುರುವಾಯನಕರೆ ವ್ಯಾಪ್ತಿಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ತಾಲೂಕು ಮಟ್ಟದ ಪದಾಧಿಕಾರಿಗಳ ಸಮಾವೇಶ

ಸೇವೆಯೊಂದಿಗೆ ಆರ್ಥಿಕ ಸದೃಢತೆಯೇ ಗ್ರಾ. ಯೋಜನೆಯ ಮೂಲ ಧ್ಯೇಯ: ಉಡುಪಿ ಪ್ರಾದೇಶಿಕ‌ ನಿರ್ದೇಶಕ ದುಗ್ಗೇ ಗೌಡ

ಪಡಂಗಡಿ: ಸೇವೆ ಮತ್ತು ಆರ್ಥಿಕ ಸದೃಢತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾ. ಯೋಜನೆಯ ಮೂಲ ಮಂತ್ರ. ಆ ಮೂಲಕ ಪ್ರತೀ ಕುಟುಂಬದಲ್ಲಿ ಆರ್ಥಿಕ ಸುಸ್ಥಿರತೆ ತರುವ ಸಂಕಲ್ಪದೊಂದಿಗೆ ಹಣಕಾಸು ಸಂಸ್ಥೆಯೊಂದಿಗಿನ ಸಂಪರ್ಕ ಸೇತುವಾಗಿ ಗ್ರಾ. ಯೋಜನೆ ಕೆಲಸ ಮಾಡುತ್ತಿದೆ ಎಂದು ಉಡುಪಿ ವಿಭಾಗದ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ ಹೇಳಿದರು.

ಪಡಂಗಡಿ ಪ್ರಾ‌.ಕೃ.ಪ.ಸಹಕಾರ ಸಂಘದ ಸಮೃದ್ದಿ ಸಭಾಭವನದಲ್ಲಿ ಸೆ‌.27ರಂದು ನಡೆದ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಗುರುವಾಯನಕರೆ ಇದರ ವ್ಯಾಪ್ತಿಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ತಾಲೂಕು ಮಟ್ಟದ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

800 ವರ್ಷಗಳ ದೈವಿಕ ಇತಿಹಾಸ ಇರುವ ಕುಡುಮಪುರವಾದ ಧರ್ಮಸ್ಥಳದಲ್ಲಿ 21 ನೇ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಪರಿವರ್ತನೆಯ ಮಹಾ ಅಭಿಯಾನ ನಡೆಯುತ್ತಿದ್ದು ಇದು ಶಶಕ್ತ ಸಮಾಜದ ಧ್ಯೇಯ ಮಾತ್ರ ಹೊಂದಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಸದಾನಂದ ಬಂಗೇರ ವಹಿಸಿದ್ದರು.

ಬ್ಯಾಂಕ್ ವ್ಯವಹಾರ, ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಜನರ ಮಧ್ಯೆ ಸಂಪರ್ಕ ಸೇತುವಾಗಿ ಮಾಡುತ್ತಿರುವ ಸೇವೆ, ಆರ್ಥಿಕ ವ್ಯವಹಾರದ ಮೂಲಕ ಸಿಬಿಲ್ ಭದ್ರತೆ ಬಗ್ಗೆ ಬೆಳ್ತಂಗಡಿ ಎಸ್.ಬಿ.ಐ ಬ್ಯಾಂಕ್ ನ ಶಾಖಾ ವ್ಯವಸ್ಥಾಪಕ ಪದ್ಮನಾಭ ನಾಯಕ್ ಮಾಹಿತಿ ನೀಡಿದರು.

ಧರ್ಮಸ್ಥಳ ಕೇಂದ್ರ ಕಚೇರಿ ನಿರ್ದೇಶಕ ಪ್ರವೀಣ್ ಎಂ.ಸಿ ಅವರು ಮಾತನಾಡಿ ಕರಾವಳಿ ಭಾಗದ ಸ್ವಾತಂತ್ರ್ಯ ಪೂರ್ವದ ಬ್ಯಾಂಕಿಂಗ್ ವ್ಯವಸ್ಥೆ, ಸಂಘಟಿತ ಆರ್ಥಿಕ ಅಭಿವೃದ್ಧಿಗಾಗಿ ಇರುವ ಬಿ.ಸಿ ವ್ಯವಸ್ಥೆ, ನಬಾರ್ಡ್ ಮತ್ತು ಸಿಡ್ಬಿ ಯೋಜನೆಗಳು, ಸ್ವಸಹಾಯ ಸಂಘಗಳು ಅನುಸರಿಸಬೇಕಾದ ಪಂಚ ಸೂತ್ರಗಳ ಬಗ್ಗೆಸಂಪನ್ಮೂಲ ಉಪನ್ಯಾಸ ನಡೆಸಿಕೊಟ್ಟರು.

ಮುಖ್ಯ ಅತಿಥಿಗಳಾಗಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಯೋಗೀಶ್ ಪೂಜಾರಿ ಕಡ್ತಿಲ, ವೇಣೂರು ವಲಯ ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷ ಮೋಹನ ಅಂಡಿಂಜೆ, ಎಸ್.ಕೆ.ಡಿ.ಆರ್.ಡಿ.ಪಿ,ಎಂ.ಐ.ಎಸ್.ಯೋಜನಾಧಿಕಾರಿ ಪ್ರೇಮನಾಥ, ಒಕ್ಕೂಟದ ವಲಯಾಧ್ಯಕ್ಷ ಮೋಹನ್ ಆಚಾರ್ಯ ಪಡಂಗಡಿ, ರಾಜಶೇಖರ್ ತಣ್ಣಿರುಪಂಥ, ಗೀರೀಶ್ ವೇಣೂರು, ಶೇಖರ್ ಹೆಗ್ಡೆ ನಾರಾವಿ, ಜಯ ಪೂಜಾರಿ ಮಡಂತ್ಯಾರು ಉಪಸ್ಥಿತರಿದ್ದರು.

ಶ್ರೀ.ಕ್ಷೇ.ಧ.ಗ್ರಾ.ಯೋ ಬಿಸಿ ಟ್ರಸ್ಟ್ ಗುರುವಾಯನಕೆರೆ ಯೋಜನಾಧಿಕಾರಿ ದಯಾನಂದ ಪೂಜಾರಿ ಪಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕಣಿಯೂರು ವಲಯ ಮೇಲ್ವಿಚಾರಕ ಶಿವಾನಂದ ಕಾರ್ಯಕ್ರಮ ನಿರೂಪಿಸಿದರು. ಮಡಂತ್ಯಾರು ವಲಯ ಮೇಲ್ವಿಚಾರಕ ವಸಂತ್ ಕುಮಾರ್ ವಂದಿಸಿದರು. ಸಮಾವೇಶದಲ್ಲಿ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು, ಜನಜಾಗೃತಿ ವೇದಿಕೆಯ ವಲಯಾಧ್ಯಕ್ಚರುಗಳು ಭಾಗಿಯಾಗಿದ್ದರು.

ಗುರುವಾಯನಕೆರೆ ವ್ಯಾಪ್ತಿಯಲ್ಲಿ ಒಟ್ಟು 1832 ಪ್ರಗತಿಬಂಧು ಸ್ವಸಹಾಯ ಸಂಘಗಳು, 3265 ಗುಂಪುಗಳು, 24700 ಮಂದಿ ಸದಸ್ಯರುಗಳು 94 ಒಕ್ಕೂಟಗಳು ಕಾರ್ಯನಿರ್ವಹಿಸುತ್ತಿದ್ದು ಆರ್ಥಿಕ ಜ್ಞಾನ ವೃದ್ಧಿ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ‌ ಮೂಲಕ ದೇಶದ ಪ್ರಗತಿಯ ಭಾಗವಾಗಿ ಗುರುತಿಸಿಕೊಂಡಿದ್ದಾರೆ.

“ಎಲ್ಲರ ಗಮನ ಸೆಳೆದ ಬಿದಿರಿನ” ಅಲಂಕಾರಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ತಾಲೂಕು ಮಟ್ಟದ ಪದಾಧಿಕಾರಿಗಳ ಸಮಾವೇಶ ಸಮಾರಂಭದ ಸಭಾವೇದಿಕೆಯನ್ನು ಪಡಂಗಡಿ ಮತ್ತು ಕನ್ನಡಿಕಟ್ಟೆ ಒಕ್ಕೂಟದವರು ಸಂಪೂರ್ಣ ಬಿದಿರಿನ ಅಲಂಕಾರದಿಂದ ನಿರ್ಮಾಣ ಮಾಡಿದ್ದು ಸಭಿಕರ ಗಮನ ಸಳೆಯಿತು. ಹಿಂದಿನ ಕಾಲದಲ್ಲಿ ಬಿದಿರನ್ನು ಫರ್ನಿಚರ್ ಹಾಗೂ ಮನೆಯ ಅಲಂಕಾರಕ್ಕೆ ಬಳಸುತ್ತಿದ್ದು,ಇಂದು ಮತ್ತೆ ಟ್ರೆಂಡ್‌ ಆಗಿದೆ.ಕಾರ್ಯಕ್ರಮದಲ್ಲಿ ಸಭಾಭವನ ಹೊಸ ಲುಕ್‌ ನೊಂದಿಗೆ ವಿಭಿನ್ನವಾಗಿ ಕಾಣಿಸುತಿತ್ತು.

Related posts

ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ನಾಡಗೀತೆ, ರಾಷ್ಟ್ರಗೀತೆ ಬರವಣಿಗೆಯ ಸ್ಪರ್ಧೆ

Suddi Udaya

ಪುದುವೆಟ್ಟು ಶ್ರೀ ಪಾರ್ಶ್ವನಾಥ ಸ್ವಾಮಿಯ ಬಸದಿಯ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ಬಳಂಜ: ಉದ್ಯಮಿ, ಕೃಷಿಕ ರಾಕೇಶ್ ಹೆಗ್ಡೆಯವರ ಇಕೋಫ್ರೆಶ್ ಫಾರ್ಮ್ ನಲ್ಲಿ ಬೆಳೆದ ಪ್ರಥಮ ಬೆಳೆ: ಡ್ರ್ಯಾಗನ್ ಫ್ರೂಟ್ ನ್ನು ಬಳಂಜ ಶಾಲಾ ವಿದ್ಯಾರ್ಥಿಗಳಿಗೆ ವಿತರಣೆ, ಫ್ರೂಟ್ ಸವಿದು ಸಂಭ್ರಮಿಸಿದ ವಿದ್ಯಾರ್ಥಿಗಳು

Suddi Udaya

ಅಸಂಘಟಿತ ಕಾರ್ಮಿಕ ಘಟಕ ಬೆಳ್ತಂಗಡಿ ನಗರ ಬ್ಲಾಕ್ ಸಮಿತಿಗೆ ನೂತನ ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ತೆಕ್ಕಾರು ನೇಮಕ

Suddi Udaya

ಚಂದ್ರಹಾಸ ಬಳಂಜರಿಂದ ಸಂವಹನ ಕೌಶಲ್ಯದ ಬಗ್ಗೆ ತರಬೇತಿ

Suddi Udaya

ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ

Suddi Udaya
error: Content is protected !!