ಬೆಳ್ತಂಗಡಿ ತಾಲೂಕು ಔಷಧಿ ‌ವ್ಯಾಪಾರಸ್ಥರ ಸಂಘ: ಜಾಗತಿಕ ಔಷಧಿ ತಜ್ಞರ ದಿನದ ಆಚರಣೆ

Suddi Udaya

Updated on:

ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘದ ಆಶ್ರಯದಲ್ಲಿ ಜಾಗತಿಕ ಔಷಧಿ ತಜ್ಞರ ದಿನದ ಆಚರಣೆ ಸೆ.29ರಂದು ರೋಟರಿ ಸೇವಾ ಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷ ಪೂರನ್ ವರ್ಮ ಅವರು ಉದ್ಘಾಟಿಸಿ ಬೆಳ್ತಂಗಡಿ ತಾಲೂಕಿನ ಔಷಧಿ ವ್ಯಾಪಾರಿಗಳ ಕಾರ್ಯ ಅಭಿನಂದನಾರ್ಹ ಹಾಗೂ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಎನ್.ಎಂ. ಜೋಸೆಫ್, ಪ್ರಸನ್ನ ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲರಾದ ಡಾ.ಮಲ್ಲಿಕಾರ್ಜುನ ಗೌಡ, ಸೌತ್ ಕೆನೆರಾ ಡಿಸ್ಟ್ರಿಕ್ಟ್ ಕೆಮಿಸ್ಟ್ ಎಂಡ್ ಡ್ರಗ್ಗಿಸ್ಟ್ ಅಸೋಸಿಯೇಷನ್ ನ ಅಧ್ಯಕ್ಷ ಅರುಣ್ ಶೆಟ್ಟಿ, ಕಾರ್ಯದರ್ಶಿ ಡಾ.ಎ.ಕೆ ಜಮಾಲ್, ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಶ್ರೀಧರ ಕೆ.ವಿ, ಕಾರ್ಯದರ್ಶಿ ಮಾಧವ ಗೌಡ, ಕೋಶಾಧಿಕಾರಿ ಗಣಪತಿ ಭಟ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಿರಿಯ ಫಾರ್ಮಸಿಸ್ಟ್ ಮಡಂತ್ಯಾರ್ ನ ಮಹಾವೀರ ಮೆಡಿಕಲ್ಸ್ ನ ಉದಯಕುಮಾರ ಜೈನ್ ಹಾಗೂ ಹಿರಿಯ ಔಷಧಿ ವ್ಯಾಪಾರಿ ವೇಣೂರಿನ ಮಂಜುಶ್ರೀ ಮೆಡಿಕಲ್ಸ್ ನ ಶ್ರೀಮತಿ ಜಯಾ ಭಾರಧ್ವಜ್ ಅವರನ್ನು‌ ಸನ್ಮಾನಿಸಲಾಯಿತು.

ಅದೇ ರೀತಿ ಶ್ರೀನಿವಾಸ ಮೆಡಿಕಲ್‌ ಕಾಲೇಜಿನಲ್ಲಿ ಉನ್ನತ ಶ್ರೇಣಿಯಲ್ಲಿ ಎಂ.ಬಿ.ಬಿ.ಎಸ್ ಪದವಿ‌ ಪಡೆದ ಡಾ.ಮನೀಷಾ.ಎಂ ಅವರನ್ನು ಹಾಗೂ ಕಳೆದ 25 ವರ್ಷಗಳಿಂದ ಜವಾಬ್ದಾರಿಯುತವಾಗಿ ಎಲ್ಲಾ ಔಷಧಿ ಅಂಗಡಿಗಳಿಗೆ ಮಂಗಳೂರಿನಿಂದ ಔಷಧಿ ಸರಬರಾಜು ‌ಮಾಡುತ್ತಿರುವ ಶ್ರೀ ಕೇಶವ ಮೂರ್ತಿ ಇವರುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕಿನ 10 ಜನ ದೈಹಿಕ ಹಾಗೂ ಆರ್ಥಿಕ ಅಶಕ್ತರನ್ನು ಗುರುತಿಸಿ ಅವರಿಗೆ ಆರ್ಥಿಕ ನೆರವನ್ನು ನೀಡಲಾಯಿತು ಹಾಗೂ ಓರ್ವ ವ್ಯಕ್ತಿಗೆ ವೀಲ್ ಚೇರ್ ಒಂದನ್ನು ನೀಡಲಾಯಿತು.

ಶ್ರೀಮತಿ ಸುಜಾತ ಗಣಪತಿ ಭಟ್ ಪ್ರಾರ್ಥಿಸಿದರು. ಉದಯ ಕುಮಾರ ಜೈನ್ ಸ್ವಾಗತಿಸಿದರು. ಕಾರ್ಯದರ್ಶಿ ಮಾಧವ ಗೌಡ ಸಂಘದ ವರದಿಯನ್ನು ವಾಚಿಸಿದರು. ಸುಜಿತ್ ಭಿಡೆ ವಂದಿಸಿದರು.

Leave a Comment

error: Content is protected !!