ಮಡಂತ್ಯಾರು: ಜೆಸಿಐ ಮಡಂತ್ಯಾರು “ವಿಜಯ 2024” ರ ಜೇಸಿ ಸಪ್ತಾಹದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರು, ಸುರೇಂದ್ರ ಕುಮಾರ್ ಧರ್ಮಸ್ಥಳ ಹಾಗೂ ಘಟಕಾಧ್ಯಕ್ಷರಾದ ವಿಕೇಶ್ ಮಾನ್ಯ, ನಿಕಟ ಪೂರ್ವಾಧ್ಯಕ್ಷರಾದ ಅಶೋಕ್ ಗುಂಡಿಯಲ್ಕೆ, ಕಾರ್ಯದರ್ಶಿ ಸಂಯುಕ್ತ ಕಡ್ತಿಲ, ಸಪ್ತಾಹ ಸಂಯೋಜಕರಾದ ಯತೀಶ್ ರೈ , ಉಪಾಧ್ಯಕ್ಷರಾದ ಅಜಯ್ ಜೆ. ಶೆಟ್ಟಿ ಉಪಸ್ಥಿತರಿದ್ದರು .